
ಮಡಿಕೇರಿ ಫೆ.17 NEWS DESK : ಚಿಲ್ ಬಾಯ್ಸ್ ಮಡಿಕೇರಿ ಹಾಗೂ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಇವರ ಆಶ್ರಯದಲ್ಲಿ, ಕಳೆದ ಒಂದು ವಾರಗಳಿಂದ ಮಡಿಕೇರಿ ನಗರದ ಕೆ.ಎಸ್ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 20ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುಶಾಲನಗರ ತಾಜ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ. ರನ್ನರ್ಸ್ ಪ್ರಶಸ್ತಿಯನ್ನು ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ತಾಜ್ ಕುಶಾಲನಗರ ತಂಡವು ನಿಗದಿತ ಆರು ಓವರ್ ಗಳಲ್ಲಿ 49 ರನ್ ಗಳಿಸಿತು. 50 ರನ್ ಗಳ ಗುರಿ ಬೆನ್ನಟ್ಟಿದ ಫ್ರೀಡಮ್ ಬಾಯ್ಸ್ ಹುಂಡಿ ತಂಡವು ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದರು ಕೂಡ,ಫ್ರೀಡಮ್ ಬಾಯ್ಸ್ ಹುಂಡಿ 40 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ತಾಜ್ ಕುಶಾಲನಗರ ತಂಡವು 09 ರನ್ ಗಳ ಅಂತರದಿಂದ ಗೆಲುವು ಸಾಧಿಸಿ, 20ನೇ ವರ್ಷದ ಮುಸ್ಲಿಂ ಕಪ್ ಕ್ರಿಕೆಟ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು. ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಾಜ್ ಕುಶಾಲನಗರ ತಂಡದ ತಶ್ರೀಫ್ ಪಡೆದುಕೊಂಡರು. ಇದಕ್ಕೂ ಮೊದಲು ನಡೆದ ಪ್ರಥಮ ಸೆಮಿಫೈನಲ್ ಪಂದ್ಯವು ಫ್ರೀಡಮ್ ಬಾಯ್ಸ್ ಹುಂಡಿ ಹಾಗೂ ಕೈವೈಸಿಸಿ ತಂಡಗಳ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆವೈಸಿಸಿ ತಂಡವು ನಿಗದಿತ ಆರು ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 26 ರನ್ ಗಳಿಸಿದರು. ಫ್ರೀಡಮ್ ಬಾಯ್ಸ್ ಹುಂಡಿ ತಂಡದ ನಾಯಕ ರಿಯಾಸ್ (ಇಯ್ಯಾ) ಅವರ 20 ರನ್ ಗಳ ನೆರವಿನಿಂದ 1.1 ಓವರ್ ಗಳಲ್ಲಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರೀಡಮ್ ಬಾಯ್ಸ್ ಹುಂಡಿ ತಂಡದ ರಿಯಾಸ್ ಹುಂಡಿ ಪಡೆದುಕೊಂಡರು. ಎರಡನೇ ಸೆಮಿಫೈನಲ್ ಪಂದ್ಯವು ಆ್ಯಶಸ್ ಗೋಣಿಕೊಪ್ಪ ಹಾಗೂ ತಾಜ್ ಕುಶಾಲನಗರ ತಂಡಗಳ ನಡುವೆ ನಡೆಯಿತು. ನಿಗದಿತ ಆರು ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದರು. 44 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆ್ಯಶಸ್ ಗೋಣಿಕೊಪ್ಪ ತಂಡದ ತನ್ವೀರ್ ಚಿನ್ನು ಅವರ ಅಮೋಘವಾದ ಬ್ಯಾಟ್ ಮೂಲಕ ತಂಡವು ಸಮಬಲ ಸಾಧಿಸಿತು. ಸೆಮಿಫೈನಲ್ ಪಂದ್ಯವು ಡ್ರಾ ಆದ ಕಾರಣದಿಂದ ಸೂಪರ್ ಓವರ್ ನಡೆಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಆ್ಯಶಸ್ ಗೋಣಿಕೊಪ್ಪ ತಂಡವು ಎರಡು ವಿಕೆಟ್ ಕಳೆದುಕೊಂಡು 8 ರನ್ ಗಳಿಸಿತು. ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿ ತಾಜ್ ಕುಶಾಲನಗರ ತಂಡವು ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಾಜ್ ಕುಶಾಲನಗರ ತಂಡದ ರಜಾಕ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೂರನೇ ಸ್ಥಾನಕ್ಕಾಗಿ ನಡೆದ ಆ್ಯಶಸ್ ಗೋಣಿಕೊಪ್ಪ ಹಾಗೂ ಕೆವೈಸಿಸಿ ಕಡಂಗ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆ್ಯಶಸ್ ತಂಡವು ನಿಗದಿತ ನಾಲ್ಕು ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದರು. 44 ರನ್ ಗಳ ಗುರಿಯನ್ನು ಬೆನ್ನಟ್ಟಿದ ಕೆವೈಸಿಸಿ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ ಮೂರನೇ ಓವರ್ ನಲ್ಲಿ ಗುರಿ ತಲುಪಿ ಮೂರನೇ ಸ್ಥಾನವನ್ನು ಕೆವೈಸಿಸಿ ಕಡಂಗ ತಂಡ ಪಡೆದುಕೊಂಡಿತು. ನಾಲ್ಕನೇ ಸ್ಥಾನಕ್ಕೆ ಆ್ಯಶಸ್ ಗೋಣಿಕೊಪ್ಪ ತಂಡ ತೃಪ್ತಿಪಟ್ಟುಕೊಂಡಿತ್ತು.
ವೈಯುಕ್ತಿಕ ಬಹುಮಾನಗಳು: ಬೆಸ್ಟ್ ಟೀಮ್ ಹಾರ್ಡ್ ಹಿಟ್ಟರ್ ಕಾಗಡಿಕಟ್ಟೆ, ಮ್ಯಾನ್ ಆಫ್ ದಿ-ಸೀರಿಯಸ್ ಫ್ರೀಡಮ್ ಬಾಯ್ಸ್ ತಂಡದ ರಿಯಾಸ್ ಇಯ್ಯಾ, ಬೆಸ್ಟ್ ಬ್ಯಾಟ್ಸ್‌ಮನ್ ತಾಜ್ ತಂಡದ ಅಲೀಮ್ ಕುಶಾಲನಗರ, ಬೆಸ್ಟ್ ಬೌಲರ್ ಫ್ರೀಡಮ್ ಬಾಯ್ಸ್ ತಂಡದ ಶಂಸು ಹುಂಡಿ, ಲೆಜೆಂಡ್ ಪ್ಲೇಯರ್ ಸಲಾಂ ಬೇತ್ರಿ, ಎಮೆರ್ಜಿಂಗ್ ಪ್ಲೇಯರ್ ಸುಹಾನ್ ಮೆಹಕ್ ಕುಶಾಲನಗರ, ಬೆಸ್ಟ್ ಫೀಲ್ಡರ್ ಕಾಜಾ ತಾಜ್ ಕುಶಾಲನಗರ, ಬೆಸ್ಟ್ ಕ್ಯಾಚ್ ನಾಸಿರ್ ಕೂಡಿಗೆ, ಬೆಸ್ಟ್ ವಿಕೆಟ್ ಕೀಪರ್ ಹಾರಿಸ್ ಮಡಿಕೇರಿ, ಅತಿ ಹೆಚ್ಚು ಸಿಕ್ಸರ್ ರಿಯಾಸ್ ಇಯ್ಯಾ ಪಡೆದುಕೊಂಡರು.
ಸಾಧಕರಿಗೆ ಸನ್ಮಾನ : ಸೇವ್ ದಿ ಡ್ರೀಮ್ಸ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವುದರ ಮೂಲಕ ಬಡರೋಗಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಿಕೊಡುತ್ತಿರುವ ಜಾಬಿರ್ ನಿಝಾಮಿ, ಪಂಜ ಕುಸ್ತಿ ವಿಶೇಷ ಚೇತನ ಪಟು ಹಸನ್ ಅರೆಕಾಡು,ಬ್ರೈನೋ ಬ್ರೈನ್ ಅಲೂಫ್ ಮಡಿಕೇರಿ,
ಇವರನ್ನು ಚಿಲ್ ಬಾಯ್ಸ್ ಹಾಗೂ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಐದು ಬಡಕುಟಂಬಗಳಿಗೆ ಗ್ಯಾಸ್ ಸ್ಟೌವ್,ಐದು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ,ಹಾಗೂ ಐದು ಬಡ ಕುಟುಂಬಗಳಿಗೆ ಧನ ಸಹಾಯವನ್ನು ಚಿಲ್ ಬಾಯ್ಸ್ ವತಿಯಿಂದ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ,ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಮೀನ್ ಮೊಹಸ್ಸಿನ್, ಚಿಲ್ ಬಾಯ್ಸ್ ಅಧ್ಯಕ್ಷ ಉನೈಸ್ ಮಡಿಕೇರಿ, ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ಅಧ್ಯಕ್ಷ ಖಾದರ್, ಕಾನೂನು ಸಲಹೆಗಾರ, ಸುಫಿಯಾನ್ ಮಡಿಕೇರಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆದಂ ಕುಶಾಲನಗರ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವೂಫ್, ಹನೀಫ್ ಹಾಲುಗುಂದ,ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರ ರಜಾಕ್ ಬಜೆಗುಂಡಿ, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಜಾಸೀರ್ ಮೂರ್ನಾಡು,ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಕೀಂ ಸುಂಟ್ಟಿಕೊಪ್ಪ, ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ,
ಅಕೀಲ್ ವಿರಾಜಪೇಟೆ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಮೊಯ್ದು, ಮಡಿಕೇರಿ ನಗರಸಭಾ ಸದಸ್ಯ ಮನ್ಸೂರ್ ಆಲಿ ರಜಾಕ್ ಎಡಪಲಾ, ಕಬಿನಿ ಹನೀಫ್, ಮುಜೀಬ್ ಮತ್ತಿತರರು ಇದ್ದರು.









