
ನಾಪೋಕ್ಲು ಫೆ.21 NEWS DESK : ಕೊಡಗಿನ ಕ್ರೀಡಾಪಟು ಕೆ.ಬಿ.ಹರ್ಷಿತಾ ಬೋಪಯ್ಯ ಸೀನಿಯರ್ ಇಂಟರ್ ನ್ಯಾಷನಲ್ ಬಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಫೆ.23 ರಿಂದ 26ರ ವರೆಗೆ ನಡೆಯಲಿರುವ ಪಂದ್ಯಾವಳುಲ್ಲಿ ಕೆ.ಬಿ.ಹರ್ಷಿತಾ ಪಾಲ್ಗೊಳ್ಳಲಿದ್ದಾರೆ. ಇವರು ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದ ಕೆಲೇಟಿರ ಬೋಪಯ್ಯ(ದೊರೆ) ಮತ್ತು ಮಾಲಾ ಮುತ್ತಮ್ಮ ದಂಪತಿಗಳ ಪುತ್ರಿ. ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ ಬಳಿಕ ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಹಾಸ್ಟೆಲ್‍ನಲ್ಲಿ ಶಿಕ್ಷಣ ಪೂರೈಸಿದರು. ಪ್ರಸ್ತುತ ಹೈದರಾಬಾದ್ ದಕ್ಷಿಣ ಕೇಂದ್ರ ರೈಲ್ವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವರದಿ : ದುಗ್ಗಳ ಸದಾನಂದ.










