
ಮಡಿಕೇರಿ ಫೆ.21 NEWS DESK : ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ ದೇವಾಲಯದ ಬಾಧ್ಯಪಟ್ಟ ತ್ರಿವೇಣಿ ಸಂಗಮದ ಬಳಿ ಪ್ರತಿಷ್ಠಾಪಿಸಲಾದ ನಾಗನ ಕಟ್ಟೆಯ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.22 ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ನಾಗ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ತಂಬಿಲವನ್ನು ನೆರವೇರಿಸಲಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ತಿಳಿಸಿದ್ದಾರೆ.










