
ಮಡಿಕೇರಿ ಫೆ.24 NEWS DESK : ನೆರೆಯ ಕೇರಳ ರಾಜ್ಯದ ಇರಿಕ್ಕುರ್ ಶಾಸಕ ಸಜೀವ್ ಜೋಸೆಫ್ ಅವರು ಮುಖ್ಯಮಂತ್ರಿಗಳ ಕಾನೂನು ಸಲಹಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ ಚರ್ಚಿಸಿದರು. ಶಾಸಕರ ಗೃಹ ಕಚೇರಿಯಲ್ಲಿ ಸಜೀವ್ ಜೋಸೆಫ್ ಅವರನ್ನು ಬರಮಾಡಿಕೊಂಡ ಶಾಸಕರು ಹಲವು ಪ್ರಮುಖ ವಿಷಯಗಳು ಬಗ್ಗೆ ಸಮಾಲೋಚನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಮುಖಂಡರಾದ ಪಿ.ಸಿ.ಹಸ್ಸೈನಾರ್ ಹಾಜರಿದ್ದರು.









