
ಮಡಿಕೇರಿ ಫೆ.24 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಪ್ರಸಿದ್ಧ ಧಾರ ಮಹೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯ ಸಂದರ್ಭದಲ್ಲಿ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂದು ಆಶಿಸಿದ ಶಾಸಕರು ತಾನು ಹಲವು ಸಮಯದಿಂದ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನ ಸನ್ನಿಧಿಯಲ್ಲಿ ಸಮಯ ಕಳೆಯಬೇಕೆಂದು ಯೋಚಿಸುತಿದ್ದೆ. ಆ ಸಮಯ ಈಗ ಒದಗಿ ಬಂದಿರುವುದು ತನ್ನನ್ನು ಪಾವನವಾಗಿಸಿದೆ ಎಂದು ಹೇಳಿದರು.









