
ಮಡಿಕೇರಿ ಫೆ.25 NEWS DESK : ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿಜಯನಗರದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ರಸ್ತೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು ಇಂದಿನ ವೇಗದ ಯುಗಕ್ಕೆ ಅತ್ಯುತ್ತಮ ರಸ್ತೆಯ ಅವಶ್ಯಕತೆ ತುಂಬಾ ಇದ್ದು, ಈ ನಿಟ್ಟಿನಲ್ಲಿ ತಾನು ತನ್ನ ಕ್ಷೇತ್ರಾದ್ಯಂತ ಉತ್ತಮ ರಸ್ತೆ ನಿರ್ಮಿಸಲು ಅನುದಾನ ಒದಗಿಸುತ್ತಿರುವುದಾಗಿ ಹೇಳಿದರು. ಅಲ್ಪಸಂಖ್ಯಾತ ಇಲಾಖೆಯ ರೂ.10 ಲಕ್ಷ ಹಾಗೂ ಶಾಸಕರ ಅನುದಾನದ ರೂ.5 ಲಕ್ಷದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಬಳಿಕ ಪುರಸಭಾಧ್ಯಕ್ಷರು ಸದಸ್ಯರುಗಳು ಹಾಗೂ ಪ್ರಮುಖರೊಂದಿಗೆ ಸಭೆ ನಡೆಸಿದ ಶಾಸಕರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ಹಾಗೂ ಮಾಹಿತಿಯನ್ನು ಪಡೆದರು. ಬಳಿಕ ವಿಶೇಷ ಆಹ್ವಾನದ ಮೇರೆಗೆ ಇತ್ತೀಚಿಗೆ ಶುಭಾರಂಭಗೊಂಡಿದ್ದ ಕಾಸ್ಕೋಫಾಬ್ ಬೂಟಿಕ್ ಮಳಿಗೆಗೆ ಭೇಟಿ ನೀಡಿ ಶುಭ ಕೋರಿದರು. ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಟೌನ್ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆ ಅಧ್ಯಕ್ಷೆ, ಉಪ ಅಧ್ಯಕ್ಷೆ,ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









