
ಮಡಿಕೇರಿ NEWS DESK ಫೆ.25 ಕಾಫಿ ಕೊಯ್ಲು ಸಂದರ್ಭ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಪೂದ್ದುಮಾನಿ ಗ್ರಾಮದಲ್ಲಿ ನಡೆದಿದೆ. ಹೆಚ್.ಸಿ.ಲೋಹಿತ್(32) ಎಂಬವರೇ ಮೃತಪಟ್ಟ ದುರ್ದೈವಿ ಕಾರ್ಮಿಕರಾಗಿದ್ದಾರೆ. ಲೋಹಿತ್ ಸೋಮವಾರದಿಂದ ನಾಪತ್ತೆಯಾಗಿದ್ದು, ಆತನನ್ನು ಹುಡುಕಾಡುತ್ತಿದ್ದಾಗ ಮಂಗಳವಾರ ಕಾಫಿ ತೋಟದಲ್ಲಿ ಮೃತ ದೇಹ ಪತ್ತೆಯಾಗಿದೆ. ಘಟನೆ ಕುರಿತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








