
ನಾಪೋಕ್ಲು ಫೆ.28 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಪಾಧ್ಯಕ್ಷರರಾಗಿ ಸಿ.ಎಸ್.ಸುಮಿತ್ರಾ, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಧ್ಯಾನಿ ಕುಶಾಲಪ್ಪ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಮಲ್ಲಂಡ ಶ್ರುತಿ ಮುದ್ದಪ್ಪ, ಮೀತಲತಂಡ ಎಂ.ಇಸ್ಮಾಯಿಲ್, ಶರಣಗೌಡ ಹರಗ, ಕಡೆಮಾಡ ಸುವಿತ್ ಸೋಮಣ್ಣ, ಚೊಕ್ಕಂಡ ನಜೀರ್ ಪಾಲಿಬೆಟ್ಟ, ಎಂ.ಬಿ ವಿನ್ಸೆಂಟ್ ವಿನೋದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









