
ಮಡಿಕೇರಿ ಫೆ.28 NEWS DESK : ಕೊಡಗು ವಿಶ್ವವಿದ್ಯಾನಿಲಯವನ್ನು ರದ್ದುಗೊಳಿಸುವುದು ಹಾಗೂ ಇತರ ವಿಶ್ವ ವಿದ್ಯಾನಿಲಯದ ಜೊತೆ ವಿಲೀನಗೊಳಿಸುವ ಸರಕಾರದ ಚಿಂತನೆಯ ಬಗ್ಗೆ ಮಡಿಕೇರಿ ಕೊಡವ ಸಮಾಜ ಖಂಡನೆ ವ್ಯಕ್ತಪಡಿಸಿದೆ. ಮಡಿಕೇರಿ ಕೊಡವ ಸಮಾಜದಲ್ಲಿ ಅಧ್ಯಕ್ಷರಾದ ಮಂಡುವಂಡ ಪಿ.ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಮಾಡಬೇಕೆಂಬ ಶ್ರಮದ ಫಲವಾಗಿ ಇಂದು ಕೊಡಗು ವಿಶ್ವವಿದ್ಯಾನಿಲಯ ಪ್ರಾರಂಭಗೊಂಡು ಹೆಗ್ಗಳಿಕೆಗೆ ಕಾರಣವಾಗಿತ್ತು . ಆದರೆ ಏಕಾಏಕಿ ರದ್ದುಗೊಳಿಸುವ ತೀರ್ಮಾನ ಸರಿಯಲ್ಲ, ನಾವೆಲ್ಲ ರಾಜಕೀಯ ಬಿಟ್ಟು ಹೋರಾಡಬೇಕಿದೆ. ಕೊಡಗಿನ ಈರ್ವ ಶಾಸಕರು ಇದರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಸರಕಾರದ ಗಮನಕ್ಕೆ ತಂದು ಕೊಡಗು ವಿಶ್ವ ವಿದ್ಯಾನಿಲಯವನ್ನು ಉಳಿಸಿಕೊಳ್ಳಬೇಕೆಂದರು. ಅಬ್ಕಾರಿ ಇಲಾಖೆಯ ನೂತನ ಸುತ್ತೋಲೆಯಂತೆ ಯಾವುದೇ ಸಮಾಜದ ಸಭೆ ಸಮಾರಂಭಗಳಲ್ಲಿ ಮದ್ಯ ಬಳಸಲು ಅನುಮತಿ ಪಡೆಯಬೇಕೆಂಬ ಕ್ರಮ ಸರಿಯಲ್ಲ. ಕೊಡಗಿನಲ್ಲಿ ಯಾವುದೇ ಹಬ್ಬಹರಿದಿನ, ಮದುವೆ, ಸಮಾರಂಭಗಳಲ್ಲಿ ಗುರುಕಾರೊಣನಿಗೆ ಮಧ್ಯವನ್ನು ಎಡೆ ಇಟ್ಟು ಎಲ್ಲರು ಸೇವಿಸುವುದು ಸಂಪ್ರದಾಯ. ದೇಶ ಸೇವೆಯಲ್ಲಿ ಸೇವೆಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತಿರುವ ಯೋಧರಿಗೆ ಸೇನೆಯಿಂದ ರಿಯಾಯಿದರದಲ್ಲಿ ಮದ್ಯವನ್ನು ನೀಡುತಿದೆ. ಅವರ ಸ್ವಂತ ಹಾಗೂ ಬಂಧುಗಳ ಸಮಾರಂಭಗಳಲ್ಲಿ ಮದ್ಯವನ್ನು ಬಳಸಲು ಅಬ್ಕಾರಿ ಇಲಾಖೆ ಯ ಅನುಮತಿಯ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು. ಮದುವೆ ಸಮಾರಂಭಗಳಲ್ಲಿ ಮದ್ಯವನ್ನು ಮಾರಾಟ ಮಾಡುವುದಾದರೆ ಅಬ್ಕಾರಿ ಇಲಾಖೆಯಿಂದ ಅನುಮತಿ ಪಡೆಯುವುದು ಸೂಕ್ತ, ಅತಿಥಿ ಸತ್ಕಾರಕ್ಕೆ ನೀಡುವುದಕ್ಕೂ ಅವಶ್ಯಕತೆ ಇದೆಯೇ? ಇಂತಹ ನಿಯಮವನ್ನು ಜಾರಿಗೊಳಿಗೊಳಿಸುವ ಮುನ್ನ ಸೂಕ್ತ ಮರುಚಿಂತನೆಯ ಅವಶ್ಯ. ಇಂತಹ ವಿಷಯದಲ್ಲಿ ಸರಕಾರ ಮರುಪರಿಶೀಲಿಸಲಿ ಎಂದರು. ಸಭೆಯಲ್ಲಿ ಸಮಾಜ ಉಪಾಧ್ಯಕ್ಷರಾದ ಕೇಕಡ ವಿಜುದೇವಯ್ಯ, ಜಂಟಿಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕನ್ನಂಡ ಕವಿತ ಬೊಳ್ಳಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಮಂಡಿರ ಸದಾಮುದ್ದಪ್ಪ, ಪುತ್ತರಿರ ಕರುಣ್ ಕಾಳಯ್ಯ, ಕಾಳಚಂಡ ಅಪ್ಪಣ್ಣ, ಕಾಂಡೆರ ಲಲ್ಲು ಕುಟ್ಟಪ್ಪ, ಶಾಂತೆಯಂಡ ವಿಶಾಲ್ ಕಾರ್ಯಪ್ಪ ಹಾಜರಿದ್ದರು.









