
ಮಡಿಕೇರಿ ಮಾ.1 NEWS DESK : ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗು ಜಿಲ್ಲೆ ಡಿಎಆರ್ ಘಟಕದ ಹೆಡ್ ಕಾನ್ಸ್ಟೇಬಲ್ ಮನಮೋಹನ್ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಶ್ವಾನ “ಕಾಪರ್” ಬೆಳ್ಳಿಯ ಪದಕ (ದ್ವಿತೀಯ ಬಹುಮಾನ) ಪಡೆದಿರುವ ನಿಟ್ಟಿನಲ್ಲಿ ಮನಮೋಹನ್ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್‍ರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಘಟಕ ಮಡಿಕೇರಿಯ ನಿರೀಕ್ಷಕ ಆರ್‍ಪಿಐ ಚೆನ್ನನಾಯಕ್, ಆರ್‍ಎಸ್‍ಐ ಹನುಮಂತ ಕೌಜಲಗಿ, ಸಿಬ್ಬಂದಿಗಳಾದ ಅನಿಲ್, ಸುಧೀರ್, ವಿಜಯ್, ಶಶಿಕುಮಾರ್, ಮಂಜುನಾಥ್ ಮತ್ತು ಮಹಾವೀರ ಇತರ ಸಿಬ್ಬಂದಿಗಳು ಹಾಜರಿದ್ದರು.
ಶಾಸಕರಿಂದ ಶ್ಲಾಘನೆ :: ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟ ದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೊಡಗು ಜಿಲ್ಲೆ ಡಿಎಆರ್ ಘಟಕದ ಹೆಡ್ ಕಾನ್ಸ್ಟೇಬಲ್ ಮನಮೋಹನ್ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಶ್ವಾನ “ಕಾಪರ್“ ಬೆಳ್ಳಿಯ ಪದಕ (ದ್ವಿತೀಯ ಬಹುಮಾನ) ಪಡೆದಿರುವ ನಿಟ್ಟಿನಲ್ಲಿ ಮನಮೋಹನ್ ಅವರನ್ನು ಶಾಸಕ ಡಾ.ಮಂತರ್ ಗೌಡ ಮಡಿಕೇರಿಯ ಶಾಸಕರ ಕಚೇರಿಯಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.










