
ಮಡಿಕೇರಿ ಮಾ.1 NEWS DESK : ಮಡಿಕೇರಿ ಬ್ರಹ್ಮಕುಮಾರಿ ಲೈಟ್‍ಹೌಸ್ ನಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಶಿವ ದ್ವಜರೋಹಣ ಹಾಗೂ 89 ನೇ ತ್ರಿಮೂರ್ತಿ ಶಿವ ಜಯಂತಿ ಕಾರ್ಯಕ್ರಮ ನಡೆಯಿತು. ಬ್ರಹ್ಮಕುಮಾರಿ ಲೈಟ್‍ಹೌಸ್ ನ ಜಿಲ್ಲಾ ಸಂಚಾಲಕಿ, ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಜಿ, ಹಿರಿಯ ವಕೀಲರಾದ ಬಾಲ ಸುಬ್ರಮಣ್ಯ ಪಂಜರ್ಪಣೆ, ಇಎನ್‍ಟಿ ತಜ್ಞ ಡಾ.ಮೋಹನ್ ಅಪ್ಪಾಜಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಲೈಟ್‍ಹೌಸ್ ಮುಂಭಾಗ ಧ್ವಜಾರೋಹಣ ನೆರವೇರಿಸಿದರು. ನೆರೆದಿದ್ದ ಎಲ್ಲರು ವಿಶೇಷ ಜ್ಯೋತಿರ್ಲಿಂಗ ದರ್ಶನ ಪಡೆದರು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗೋಣಿಕೊಪ್ಪಲಿನ ಲೋಪಮುದ್ರೆ ಆಸ್ಪತ್ರೆಯ ಡಾ.ಅಮೃತ ನಾಣಯ್ಯ ಉದ್ಘಾಟಿಸಿ, ಆಸ್ಪತ್ರೆಯ ಸೇವಾ ಭಾವನೆಯ ಹಿನ್ನೆಲೆಯನ್ನು ತಿಳಿಸಿದರು. ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಶಿವ ಸ್ಮೃತಿ ಹಾಡಿ ಶುಭಹಾರೈಸಿದರು. ಕೊಡಗು ವೈದ್ಯಕೀಯ ಕಾಲೇಜಿನ ಉಪನ್ಯಾಸಕಿ ವಾತ್ಸಲ್ಯ ರಮೇಶ್, ಕುಮಾರಿ ಅಧಿತಿ, ಚಿನ್ಮಯಿ ಶಿವ ನೃತ್ಯ ಮಾಡಿದರು. ಕುಷಿ ನೃತ್ಯದ ಮೂಲಕ ಗಮನ ಸೆಳೆದರು. ಕಾರ್ಯಕ್ರಮದ ನಂತರ ನೆರೆದಿದ್ದವರಿಗೆ ಪ್ರಸಾದ ವಿತರಣೆ ನಡೆಯಿತು.
ತರಬೇತಿ ಶಿಬಿರ : ಶಿವರಾತ್ರಿಯ ಪ್ರಯುಕ್ತ ಮಾ.3 ರಿಂದ ಮಾ.23ರ ವರೆಗೆ ಬ್ರಹ್ಮಕುಮಾರಿ ಲೈಟ್‍ಹೌಸ್‍ನಲ್ಲಿ ರಾಜಯೋಗ ತರಬೇತಿ ಶಿಬಿರ ನಡೆಯಲಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ಶಿಬಿರ ಆಯೋಜಕರು ತಿಳಿಸಿದರು.









