
ಮಡಿಕೇರಿ ಮಾ.3 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಪಿ.ಎಂ.ಶ್ರೀ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ
2024 -25 ನೇ ಸಾಲಿನ 22ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಸಣ್ಣಕತೆಗಳ ಗೌರಮ್ಮ ದತ್ತಿ ನಿಧಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಮಾ.7 ರಂದು ಮೂರ್ನಾಡುವಿನಲ್ಲಿ ನಡೆಯಲಿದೆ. ಮೂರ್ನಾಡಿನ ಪಿ.ಎಂ.ಶ್ರೀ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕಾಂತೂರು-ಮೂರ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ವಹಿಸಲಿದ್ದಾರೆ. ಈ ಬಾರಿಯ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಕೂಡಕಂಡಿ ಓಂ ಶ್ರೀ ದಯಾನಂದರವರಿಗೆ ಮೈಸೂರಿನ ಯುವರಾಜ ಕಾಲೇಜಿನ ಸಾಹಿತಿಗಳಾದ ಎಚ್.ನಿವೇದಿತಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಪಾಲ್ಗೊಳ್ಳಲಿದ್ದಾರೆ. ಮೂರ್ನಾಡು ಪಿಎಂಶ್ರೀ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿ.ವೆಂಕಪ್ಪ, ಮುಖ್ಯೋಪಾಧ್ಯಾಯರಾದ ಬಿ.ಎನ್.ಪುಷ್ಪಾವತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಕಾಫಿ ಬೆಳೆಗಾರರು ಹಾಗೂ ಸಮಾಜ ಸೇವಕರಾದ ಪುದಿಯೊಕ್ಕಡ ರಮೇಶ್, ವಿ.ಎಂ.ಧನಂಜಯ ಸಿ.ಎಸ್.ಸೂರಜ್ ತಮ್ಮಯ್ಯ ಗೌರವ ಉಪಸ್ಥಿತರಿರಲಿದ್ದಾರೆ.
ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತರು :: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಗೌರಮ್ಮ ಪ್ರಶಸ್ತಿಯನ್ನು ಜಿಲ್ಲೆಯ 21 ಮಹಿಳಾ ಲೇಖಕರು ಪಡೆದುಕೊಂಡಿದ್ದು, ಕೂಡಕಂಡಿ ಓಂಶ್ರೀ ದಯಾನಂದ 22ನೇ ಯವರಾಗಿದ್ದಾರೆ. ನಯನ ಕಶ್ಯಪ್, ಬೈತಡ್ಕ ಜಾನಕಿ ಬೆಳ್ಯಪ್ಪ, ವಿಜಯ ವಿಷ್ಣು ಭಟ್, ಮಂಡೆಪಂಡ ಗೀತಾ ಮಂದಣ್ಣ. ಡಾ.ಎಂ.ಬಿ.ರೇಖಾ, ಡಾ.ಕೋರನ ಸರಸ್ವತಿ, ಗೀತಾ ಭಾವೆ, ಕಸ್ತೂರಿ ಗೋವಿಂದಯ್ಯ, ದಿನಮಣಿ ಹೇಮರಾಜ್, ಶರ್ಮಿಳ ರಮೇಶ್, ಮಿಲನ ಭರತ್, ಸ್ಮಿತಾ ಅಮೃತರಾಜ್, ಶಾಂತಿ ಅಪ್ಪಣ್ಣ, ಸಂಗೀತ ರವಿರಾಜ್, ಡಾ.ಕಾವೇರಿ ಪ್ರಕಾಶ್, ಜಲ ಕಾಳಪ್ಪ, ಸುನೀತ ಲೋಕೇಶ್, ಸಹನಾ ಕಾಂತಬೈಲು, ಕಟ್ರತನ ಲಲಿತಾ ಅಯಣ್ಣ, ಈರಮಂಡ ಹರಿಣಿ ವಿಜಯ್, ಕೆ.ಜಿ.ರಮ್ಯಾ ಕೊಡಗಿನ ಗೌರಮ್ಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
2024-25ನೇ ಸಾಲಿನ ಗೌರಮ್ಮ ಕಥಾ ಸ್ಪರ್ಧಾ ವಿಜೇತರು :: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎ.ಕೆ.ಮಾನ್ವಿ ಮುತ್ತಮ್ಮ ಪ್ರಥಮ, ಕಡಗದಾಳು ಸರಕಾರಿ ಪ್ರೌಢಶಾಲೆ ಪಾನುಪ್ರಿಯ ದ್ವಿತೀಯ, ಸಂತ ಜೋಸೇಫರ ಕಾನ್ವೆಂಟ್‍ನ ಲಿಷ್ಮ ಡಿಸೋಜ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸಾಹಿತ್ಯಾಸ್ಕತ್ತರು, ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.









