Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*
  • *ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*
  • *ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*
  • *ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*
  • *ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*
  • *ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*
  • *ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*
  • *ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*
  • *ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*
  • *ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶಿರಂಗಾಲ ದೇವಾಲಯದ ಮುಖ್ಯ ದ್ವಾರ ಉದ್ಘಾಟನೆ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶಿರಂಗಾಲ ದೇವಾಲಯದ ಮುಖ್ಯ ದ್ವಾರ ಉದ್ಘಾಟನೆ* 

ಮಾರ್ಚ್ 11, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.11 NEWS DESK :  ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು. ಬಸವಾಪಟ್ಟಣದ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ನಿರ್ಮಿಸಿರುವ ಮಹಾದ್ವಾರ ಹಾಗೂ ಗೋಪುರವನ್ನು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಶಾಸ್ತ್ರೋಕ್ತವಾಗಿ ಪೂಜೆ‌ ಸಲ್ಲಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬಸವಾಪಟ್ಟಣ ತೊಟ್ಟಿಮನೆ ಬಾಲಣ್ಣ ಕುಟುಂಬಸ್ಥರು ಸುಮಾರು ರೂ. 16 ಲಕ್ಷ ವೆಚ್ಚದಲ್ಲಿ ಸುಂದರವಾದ ಮಹಾದ್ವಾರವನ್ನು ನಿರ್ಮಾಣ ಮಾಡಿದ್ದು, ಇದು ದೇವಾಲಯದ ಮೆರುಗನ್ನು ಹೆಚ್ಚಿಸಿದೆ. ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಭಕ್ತರು ತಮ್ಮ ತನುಧನ ಅರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು. ಶಿರಂಗಾಲ ಗ್ರಾಮದ ದೇವತೆ ಶ್ರೀ ಮಂಟಿಗಮ್ಮ ದೇವಿಯ ಜಾತ್ರೋತ್ಸವ ಒಂದು ವಾರಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.ಈ ಹಬ್ಬಕ್ಕೆ ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು, ಹಾಸನ ಹಾಗೂ ಮೈಸೂರು ಜಿಲ್ಲೆಯ ಗಡಿಗ್ರಾಮಗಳ ಜನರು ಸೇರಿದಂತೆ 30 ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜೊತೆಗೆ ಪ್ರತಿನಿತ್ಯ ದಾನಿಗಳಿಂದ ಅನ್ನ ದಾಸೋಹ ನಡೆಯುತ್ತದೆ. ನಾಡಿನ ಜನರಿಗೆ, ರೈತರಿಗೆ ತಾಯಿ ಒಳಿತು ಮಾಡಲಿ.ಮಳೆ ಬೆಳೆ ಸುಭೀಕ್ಷವಾಗಿ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್ ಮಾತನಾಡಿ, ಎರಡು ವಷಗಳಿಗೊಮ್ಮೆ ಗ್ರಾಮ‌ದೇವತೆ ಶ್ರೀ ಮಂಟಿಗಮ್ಮ ದೇವಿಯ ಹಬ್ಬ ನಡೆಯುತ್ತದೆ. ಈ ಬಾರಿಯ ಮಂಟಿಗಮ್ಮ ಹಬ್ಬ ಮಾರ್ಚ್ 14 ರಿಂದ 19 ರ ತನಕ ವಿಜೃಂಭಣೆಯಿಂದ ಜರುಗಲಿದ್ದು ಇಂದಿನಿಂದ‌ ಮೀಸಲು ಪೂಜಾ ಕಾರ್ಯಕ್ರಮ ಆರಂಭಗೊಂಡಿವೆ.
ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ದಾನಿಗಳಿಂದ ದೇವಿ ಆರಾಧನೆ ಅದ್ದೂರಿಯಾಗಿ ನಡೆಯುತ್ತದೆ. ಇಂದು ಸ್ವಾಮೀಜಿ ನೇತೃತ್ವದಲ್ಲಿ ಕಾವೇರಿ ನದಿಯಿಂದ ಮಂಗಳವಾದ್ಯದೊಂದಿಗೆ ಗಂಗೆಪೂಜೆ ಹಾಗೂ ಪೂರ್ಣ ಕುಂಭ ಕಳಶ ಹೊತ್ತ ಮಹಿಳೆಯರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ದೇವಾಲಯದಲ್ಲಿ ಹೋಮಹವನ ನಡೆಯುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.  ಈ ಸಂದರ್ಭ ದೇವಾಲಯ ಸಮಿತಿ ಗೌರವಾಧ್ಯಕ್ಷ  ಎಸ್.ಆರ್.ಕಾಳಿಂಗಪ್ಪ,ಕಾರ್ಯದರ್ಶಿ ಎಂ.ಎಸ್.ಗಣೇಶ್,  ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಸನ್ನ,ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಬಸವಣಯ್ಯ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಚ್.ಎಸ್.ಬಸವರಾಜು ಮುಖಂಡರಾದ ಸಿ.ಎಲ್.ಲೋಕೇಶ್, ಚೇತನ್,ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

*ನಿಯಮ ಉಲ್ಲಂಘಿಸಿ ಮರದ ದಿಮ್ಮಿ ಸಾಗಾಟ : ಐದು ಲಾರಿ ವಶ : ರೂ.2.97 ಲಕ್ಷ ದಂಡ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*

ಸೆಪ್ಟೆಂಬರ್ 30, 2026

*ತಾಳತ್ತಮನೆಯಲ್ಲಿ ಉಚಿತ ರೇಬಿಸ್ ಲಸಿಕಾ ಶಿಬಿರ ಯಶಸ್ವಿ*

ಸೆಪ್ಟೆಂಬರ್ 30, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.30 : ಕೊಡಗು ಜಿಲ್ಲಾ ಪಂಚಾಯಿತಿ, ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಮತ್ತು…

*ತಾಳತ್ತಮನೆಯಲ್ಲಿ ಯುವಜನತೆ ಹಾಗೂ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ : ಸ್ವಾವಲಂಬಿಗಳಾಗಲು ಕರೆ*

ಸೆಪ್ಟೆಂಬರ್ 30, 2026

*ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ*

ಸೆಪ್ಟೆಂಬರ್ 30, 2026

*ಮಡಿಕೇರಿಯಲ್ಲಿ ಕಾಫಿ ದಸರಾ: ಮಳಿಗೆ ತೆರೆಯಲು ಅವಕಾಶ*

ಸೆಪ್ಟೆಂಬರ್ 29, 2026

*ಸಮುದಾಯದ ಸಂಸ್ಕೃತಿ, ಆಚಾರ-ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ: ಬಿಲ್ಲರಿಕುಟ್ಟಡ ಪ್ರಭು ಅಯ್ಯಪ್ಪ*

ಸೆಪ್ಟೆಂಬರ್ 29, 2026

*ನ.21 ಮತ್ತು 22ರಂದು ವಿರಾಜಪೇಟೆಯಲ್ಲಿ ಕೂರ್ಗ್ ಮಾಸ್ಟರ್ಸ್ ಕಪ್ 50+ ಕಾಲ್ಚೆಂಡು ಪಂದ್ಯಾಟ*

ಸೆಪ್ಟೆಂಬರ್ 29, 2026

*ಮೂರ್ನಾಡಿನಲ್ಲಿ ಧರ್ಮಸ್ಥಳ ಯೋಜನೆಯಿಂದ ‘ರೈತ ಕ್ಷೇತ್ರ ಪಾಠಶಾಲೆ’*

ಸೆಪ್ಟೆಂಬರ್ 29, 2026

*ಮೂರ್ನಾಡು ಕೊಡವ ಸಮಾಜದಿಂದ ಕೈಲ್ ಪೊಳ್ದ್ ಒತ್ತೊರ್ಮೆ ಕೂಟ ಹಾಗೂ ಸನ್ಮಾನ ಕಾರ್ಯಕ್ರಮ*

ಸೆಪ್ಟೆಂಬರ್ 29, 2026

*ಆನೆಕಾಡು ಬಳಿ ಹೆಚ್ಚುತ್ತಿರುವ ಅಪಘಾತ: ಶಾಸಕರ ನೇತೃತ್ವದಲ್ಲಿ ಸಭೆ*

ಸೆಪ್ಟೆಂಬರ್ 29, 2026

*ಕೂಡಿಗೆಯಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ*

ಸೆಪ್ಟೆಂಬರ್ 29, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.