
ಮಡಿಕೇರಿ ಮಾ.11 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯರಾಗಿದ್ದ ಮುಕ್ಕಾಟಿರ ಶಿವು ಮಾದಪ್ಪಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಶಿವು ಮಾದಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂತಾಪ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶಿವು ಮಾದಪ್ಪ ಅವರ ವ್ಯಕ್ತಿತ್ವವನ್ನು ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರಿಗೆ ಹೋಲಿಕೆ ಮಾಡಿದರು. ದಿವಂಗತ ಗುಂಡು ರಾವ್ ರಂತೆಯೇ ಶಿವು ಮಾದಪ್ಪ ಸ್ನೇಹ ನಡೆ ಹಾಗೂ ವರ್ಣರಂಜಿತ ವ್ಯಕ್ತಿತ್ವ ಮಾತ್ರವಲ್ಲ ಅವರ ಗಂಭೀರ ವ್ಯಕ್ತಿತ್ವ ಎಲ್ಲರಿಗೂ ಅಚ್ಚುಮೆಚ್ಚು ಎಂದು ಬಣ್ಣಿಸಿದರು. ಶಿವು ಮಾದಪ್ಪ ಪಕ್ಷಕ್ಕಾಗಿ ದುಡಿದವರು. ಅವರು ಕೈಗೊಂಡ ಹಲವಾರು ಉತ್ತಮ ನಿರ್ಧಾರಗಳ ಬಗ್ಗೆ ಸ್ಮರಿಸಿದರು.
ಡಿಸಿಸಿ ಉಪಾಧ್ಯಕ್ಷ ಸುಜು ತಿಮ್ಮಯ್ಯ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, RGPRS ಸಂಚಾಲಕ ತನ್ನಿರ ಮೈನಾ, ಮುಡಾ ಅಧ್ಯಕ್ಷ ರಾಜೇಶ್, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಹನೀಫ್, ಬಗರ್ ಹುಕುಂ ಮಡಿಕೇರಿ ಅಧ್ಯಕ್ಷ ನೆರವಂಡ ಉಮೇಶ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ರಮಾನಾಥ್ ಬೇಕಲ್, ಕುಶಾಲನಗರ ಬಗರ್ ಹುಕುಂ ಅಧ್ಯಕ್ಷ ವಿ.ಪಿ ಶಶಿಧರ್ ಮತ್ತಿತರರು ಪ್ರಮುಖರು, ಕೆಪಿಸಿಸಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಮುಂಚೂಣಿ ಘಟಕ/ಸೆಲ್ ಅಧ್ಯಕ್ಷರುಗಳು, ಡಿಸಿಸಿ ಪದಾಧಿಕಾರಿಗಳು, ಸರಕಾರಿ ನಾಮನಿರ್ದೇಶಿತ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.









