Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ*
  • *ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ*
  • *ಏ.19 ರಿಂದ 21ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ ಹಾಗೂ ದೈವ ಕೋಲ*
  • *ಅಖಿಲ ಕೊಡವ ಸಮಾಜ ಹಾಗು ಭಕ್ತಜನ ಸಂಘದಿಂದ ಮಂಜು ಚಿಣ್ಣಪ್ಪಗೆ ಸನ್ಮಾನ*
  • *ಏ.18 ಮತ್ತು 19 ರಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಪೂಜೆ ಮಾಡುತ್ತಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ*
  • *ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದ ಸರಕಾರ : ಪ್ರತಿಭಟನೆಗೆ ಬಿಜೆಪಿ ನಿರ್ಧಾರ*
  • *ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*
  • *ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ನುಡಿ ನಮನ : ಕಾಂಗ್ರೆಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ನುಡಿ ನಮನ : ಕಾಂಗ್ರೆಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ*

ಮಾರ್ಚ್ 17, 20253 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮಾ.17 NEWS DESK : ಶಿವುಮಾದಪ್ಪ ನಿಧನದಿಂದ ಕಾಂಗ್ರೆಸ್ ಪಕ್ಷದಲ್ಲಿನ ಮತ್ತೊಂದು ಕೊಂಡಿ ಕಳೆದುಕೊಂಡಿದೆ ಎನ್ನಬಹುದು. ನಾನು ರಾಜಕೀಯದಲ್ಲಿ ಸಕ್ರಿಯನಾದರು ಯಾವುದೇ ನಾಯಕರೊಡನೇ ಒಡನಾಟ ಕಮ್ಮಿ. ಏಕೆಂದರೆ ನನಗೆ ಅನಾವಶ್ಯಕವಾಗಿ ಅವರಿಗೆ ಕಿರಿಕಿರಿ ಮಾಡಲು ಇಷ್ಟ ಇಲ್ಲ ಅದು ಎಲ್ಲಾ ನಾಯಕರುಗಳಿಗೂ ಗೊತ್ತು. ಆದರೆ ಎಲ್ಲರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುತ್ತೇನೆ. ಪಕ್ಷದ ಕೆಲಸ ಮಾಡಿ ಸುಮ್ಮನೆ ಇದ್ದು ಬಿಡುತ್ತಿದ್ದೆ. ನಾನು ಮಾನಸಿಕವಾಗಿ ನೋವು ಅನುಭವಿಸಿದ್ದು, ಬಿ.ಟಿ.ಪ್ರದೀಪ್ ಅವರನ್ನು ಕಳೆದುಕೊಂಡಾಗ ಮನದಲ್ಲಿ ಒಂದು ರೀತಿಯ ಮಾನಸಿಕ ಹಿಂಸೆ ಅನುಭವಿಸಿದೆ. ನಾನು ಮೊದಲೇ ಹೇಳಿದಂತೆ ನನಗೆ ಅವರ ಒಡನೆ ಹೇಳಿಕೊಳ್ಳುವ ಒಡನಾಟ ಇರಲಿಲ್ಲ. ಆದರೂ ಅವರು ಮನಸ್ಸಿಗೆ ನಾಟಿಕೊಂಡಿದ್ದರು. ನಾನು ನಾಪೋಕ್ಲುವಿನ ತೋಟಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗುವಾಗ ದಾರಿಯಲ್ಲಿ ಅವರ ಕಾರು ಸಿಗುತ್ತಿತ್ತು. ಅಷ್ಟು ಹೊತ್ತಿಗೆ ಮನೆ ಬಿಟ್ಟರೆ ಹಿಂದುರುಗುವುದು ರಾತ್ರಿ ಇದರಲ್ಲಿ ವಿಶೇಷ ಏನು ಇಲ್ಲ. ಎಲ್ಲಾ ರಾಜಕಾರಣಿಗಳು ಮಾಡುವುದು ಇದೇ ಕೆಲಸ, ಇಲ್ಲಿ ಪ್ರಶ್ನೆ ಏನೆಂದರೆ ಇಷ್ಟು ಕಷ್ಟ ಪಟ್ಟು ಪಕ್ಷ ಕಟ್ಟಿ ಕಾಣದ ಕೈಗಳ ಷಡ್ಯಂತ್ರಕ್ಕೆ ಸಿಲುಕಿ ದಿಡೀರನೆ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾದದ್ದು ರಾಜಕೀಯದಲ್ಲೊಂದು ದುರಂತ. ಅಂದು ಸಜ್ಜನ ರಾಜಕಾರಣಿ ಒಬ್ಬರು ನಮ್ಮಿಂದ ದೂರವಾದರೂ ಅವರ ನೆನಪು ನನ್ನನ್ನು ಬಹುದಿನಗಳವರೆಗೆ ಕಾಡಿತ್ತು. ಅವರು ನನ್ನನ್ನು ಎನ್.ಬಾಳೆಯಡ ಎಳತ್‍ಕಾರ ಎಂದೇ ಕರೆಯುತ್ತಿದ್ದರು. ಯಾವಾಗಲೂ ನೋಡಿದರೂ ಅದೇ ಮುಗುಳ್ನಗೆ. ಮೊನ್ನೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಶಿವು ಮಾದಪ್ಪನ ನಿಧನ ಸುದ್ದಿ ಕೇಳಿದ ತಕ್ಷಣ ಮನದಲ್ಲಿ ಬಂದದ್ದು, ಬಿ.ಟಿ.ಪ್ರದೀಪ್ ಚಿತ್ರ. ರಾಜಕೀಯದ ಷಡ್ಯಂತ್ರಕ್ಕೆ ಇನ್ನೊಂದು ಜೀವ ಬಲಿಯಾಯಿತು ಅನ್ನಿಸುತ್ತೆ. ಈ ಇಬ್ಬರು ನಾಯಕರದ್ದು ತದ್ವಿರುದ್ಧ ಸ್ವಭಾವ ಒಬ್ಬರದು ಸೌಮ್ಯ ಇನ್ನೊಬ್ಬರು ಡೈನಾಮಿಕ್ ಯಾರನ್ನೂ ಕೇರ್ ಮಾಡದ ಸ್ವಾಭಿಮಾನ, ಶಿವು ತಳಮಟ್ಟದಿಂದ ರಾಜಕೀಯ ಮಾಡಿ ಮೇಲೆ ಬಂದವರು ಹಾಗೇ ನೋಡಿದ್ರೆ ಅವರಿಗೆ ಹಣ ಮತ್ತು ರಾಜ್ಯ ಮತ್ತೆ ಕೇಂದ್ರದ ನಾಯಕರ ನೇರ, ಸಂಪರ್ಕ ಇದ್ದವರು ಅವರಿಗೆ ಜನ ಸೇವೆ ಮಾಡದೇ, ಹಣ ಖರ್ಚು ಮಾಡದೇ ಪಕ್ಷದಲ್ಲಿ ಹುದ್ದೆ ಪಡೆಯಬಹುದಿತ್ತು. ಆದರೆ ಅವರು ರಾಜಕೀಯವನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳದೆ ವೃತ್ತಿಯಾಗಿ ಕೆಲಸ ಮಾಡಿದವರು ಗ್ರಾಮ ಪಂಚಾಯತ್‍ನಿಂದ ಜಿಲ್ಲಾ ಪಂಚಾಯತ್‍ವರೆಗೆ ಗ್ರಾಮ ಮಟ್ಟದಿಂದ ಜಿಲ್ಲಾಧ್ಯಕ್ಷ ಪಟ್ಟವನ್ನು ಸ್ವಸಾಮಥ್ರ್ಯವಾಗಿ ಪಡೆದವರು. ಬಿಜೆಪಿಯ ಭದ್ರಕೋಟೆಯಲ್ಲಿ ಕಾಂಗ್ರೇಸನ್ನು ಭದ್ರವಾಗಿ ಕಟ್ಟಿ ಬೆಳೆಸಿದವರು. ಅವರು ಜಿಲ್ಲಾಅಧ್ಯಕ್ಷರು ಆದಾಗ ಪಕ್ಷಕ್ಕೆ ಜೀವ ಬರತೊಡಗಿತು. ಆದರೆ ಪಕ್ಷದ ಒಳ ರಾಜಕೀಯಕ್ಕೆ ಬಲಿಯಾದ ಇವರು ಜಿಲ್ಲಾ ಅಧ್ಯಕ್ಷ ಪಟ್ಟವನ್ನು ದಿಡೀರನೆ ಕಳೆದುಕೊಂಡರು. ಅನಂತರದ ದಿನಗಳಲ್ಲಿ ವ್ಯವಸ್ಥೆ ಅವರನ್ನು ರಾಜಕೀಯದಿಂದ ದೂರ ಮಾಡಿತೋ ಅಲ್ಲ ಅವರೇ ರಾಜಕೀಯದಿಂದ ದೂರವಾದರು ತಿಳಿಯದು. ಇತ್ತೀಚಿನ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದರು. ಅವರು ಬಂಡಾಯದ ಬಾವುಟವನ್ನು ಹಾರಿಸಲಿಲ್ಲ, ಪಕ್ಷವನ್ನು ಬಿಡಲಿಲ್ಲ, ಒಂದೇ ಒಂದು ವಿರುದ್ಧ ಹೇಳಿಕೆ ನೀಡಲಿಲ್ಲ. ಕೊನೆಯವರೆಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಉಳಿದು ಬೇರೆಯವರಿಗೆ ಮಾದರಿಯಾಗಿ ಉಳಿದರು. ಒಂದು ಗ್ರಾಮಪಂಚಾಯತ್ ಟಿಕೆಟ್ ಸಿಕ್ಕದಿದ್ದರೆ ಬಂಡಾಯದ ಬಾವುಟ ಹಾರಿಸಿ ಬೇರೆ ಹುದ್ದೆ ಪಡೆಯಲು ಬ್ಲಾಕ್‍ಮೇಲ್ ನಡೆಸುವಂತ ಕಾಲದಲ್ಲಿ ಅವರು ಎಂದು ಪಕ್ಷ ವಿರೋಧಿ ಚಟುವಟಿಕೆ ನಡಿಸಲಿಲ್ಲ. ಇವರ ನಡುವಳಿಕೆ ರಾಜಕೀಯದಲ್ಲಿ ಇತರರಿಗೆ ಮಾದರಿ ಅಧಿಕಾರ ಇರುವರೆಗೆ ನಾಯಕರ ಹಿಂದೆ ಗುಂಪು ಆವರಿಸುವುದು ಸಕ್ಕರೆ ಇರುವಲ್ಲಿ ಇರುವೆ ಮುತ್ತುವುದು ಸರ್ವೇ ಸಾಮಾನ್ಯ ಹಾಗೇ ಈಗ ಪತ್ರಿಕೆಯಲ್ಲಿ ಸಾಮಾಜಿಕ ಜಾಲದಲ್ಲಿ ವಿವಿಧ ರೀತಿಯ ಸ್ಲೋಗನ್ ಕಂಡು ಹಾಗೂ ಕೇಳಿ ಬರುತ್ತಿದೆ. ಕೇಳಲು ನೀನಿಲ್ಲ ಗೆಳೆಯ ಮತ್ತೋಮ್ಮೆ ಹುಟ್ಟಿ ಬನ್ನಿ ಎಂದು ಕರೆಯುತ್ತಾರೆ ಅಂತ ಬರಬೇಡ ಸ್ವಾರ್ಥದ ರಾಜಕೀಯ ನಿನ್ನನ್ನು ಬಲಿ ಪಡೆಯಿತು. ನಿನ್ನ ಕೊನೆ ದಿನಗಳಲ್ಲಿ ನೀನೇಷ್ಟು ಅಂತರ್ ಮುಖಿಯಾಗಿದ್ದೆ ಎಂಬುದು ನಿನ್ನ ಅರಿತವರಿಗೆ ಗೊತ್ತು ಹೊರತು ಅಧಿಕಾರ ಇದ್ದಾಗ ನಿನ್ನ ಬಳಸಿಕೊಂಡವರಿಗೆ ಹೇಗೆ ಗೊತ್ತಾಗಬೇಕು ಇಲ್ಲಿ ಅಧಿಕಾರ ಪದವಿ ಹಣ ಇದ್ದಾಗ ಎಲ್ಲರೂ ನಮ್ಮವರು ಹೋದರೆ ನಾವು ಒಂಟಿ ಅಂದು ಪ್ರದೀಪ್ ಸತ್ತಾಗ ಜನ ಇದೇ ರೀತಿಯ ಕೂಗು ಕೇಳಿ ಬಂತು. ಈಗ ಪ್ರದೀಪ್ ಯಾರು ಅಂತ ಗೊತ್ತಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ನಾವೆಲ್ಲ ನಿನ್ನ ಮರೆತು ಬಿಡುತ್ತೇವೆ ಈಗಿನ ಸಮಾಜದ ವ್ಯವಸ್ಥೆಯೇ ಹಾಗೇ ನಿನ್ನ ಮನೆಯವರಿಗೆ ಮಾತ್ರ ನಷ್ಟ ಹೊರತು ಸಮಾಜಕಲ್ಲ ಎಂಬುದಂತು ಕಟು ಸತ್ಯ ಇತ್ತೀಚಿಗೆ ಪತ್ರಿಕೆಯಲ್ಲಿ ಓದಿದ ನೆನಪು ಮಾಜಿ ಸಚಿವರು ಲೋಕಸಭಾ ಸದಸದ್ಯರು ಆದ ಹೆಚ್.ವಿಶ್ವನಾಥ್ ರವರು ಕುಂಭಮೇಳದಲ್ಲಿ ದಿವಂಗತ ಪ್ರದೀಪ್ ಅವರ ನೆನಪು ಮಾಡಿಕೊಂಡು ಅವರಿಗೆ ಪಿಂಡ ಪ್ರಧಾನ ಮಾಡಿದರು, ಹಾಗೆಯೇ ಮುಂದಿನ ದಿನಗಳಲ್ಲಿ ನಿನನ್ನನ್ನು ಯಾರಾದರೂ ನೆನಪು ಮಾಡಿಕೊಂಡರೆ ಸಾರ್ವಜನಿಕ ಜೀವನದಲ್ಲಿ ನೀನು ಮಾಡಿದ ಸೇವೆಗೆ ಪ್ರತಿಫಲ ಎಂದು ಭಾವಿಸುತ್ತೇನೆ.

ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು
ಮಡಿಕೇರಿ
ಪೋನ್: 9448899554 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ*

ಏಪ್ರಿಲ್ 15, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ*

ಏಪ್ರಿಲ್ 15, 2026

*ಏ.19 ರಿಂದ 21ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ ಹಾಗೂ ದೈವ ಕೋಲ*

ಏಪ್ರಿಲ್ 15, 2026

*ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ*

ಏಪ್ರಿಲ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಏ.15: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಕಾಲೇಜಿನಲ್ಲಿ…

*ಏ.19 ರಿಂದ 21ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ ಹಾಗೂ ದೈವ ಕೋಲ*

ಏಪ್ರಿಲ್ 15, 2026

*ಅಖಿಲ ಕೊಡವ ಸಮಾಜ ಹಾಗು ಭಕ್ತಜನ ಸಂಘದಿಂದ ಮಂಜು ಚಿಣ್ಣಪ್ಪಗೆ ಸನ್ಮಾನ*

ಏಪ್ರಿಲ್ 15, 2026

*ಏ.18 ಮತ್ತು 19 ರಂದು ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಏಪ್ರಿಲ್ 15, 2026

*ಪೂಜೆ ಮಾಡುತ್ತಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ*

ಏಪ್ರಿಲ್ 15, 2026

*ಸ್ಥಳೀಯ ಸಂಸ್ಥೆ ಚುನಾವಣೆ ನಡೆಸದ ಸರಕಾರ : ಪ್ರತಿಭಟನೆಗೆ ಬಿಜೆಪಿ ನಿರ್ಧಾರ*

ಏಪ್ರಿಲ್ 15, 2026

*ಕೊಡವ ನ್ಯಾಷನಲ್ ಕೌನ್ಸಿಲ್ ನಿಂದ ಸಂಭ್ರಮದ ಎಡ್ಮ್ಯಾರ್ 1 ಆಚರಣೆ*

ಏಪ್ರಿಲ್ 14, 2026

*ಮೂರ್ನಾಡು : ಏ.15 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 14, 2026

*ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯಿಂದ ಡಾ.ಅಂಬೇಡ್ಕರ್ ಜಯಂತಿಯ ಅರ್ಥಪೂರ್ಣ ಆಚರಣೆ*

ಏಪ್ರಿಲ್ 14, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.15 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.