Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*
  • *ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*
  • *ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*
  • *ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*
  • *ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*
  • *ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*
  • *ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*
  • *ಸೆಪ್ಟೆಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ 61ನೇ ಪುಣ್ಯಸ್ಮರಣೆ; ಮಡಿಕೇರಿಯಲ್ಲಿ ಸಮರ ವೀರನಿಗೆ ಗೌರವ ಸಮರ್ಪಣೆ*
  • *ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಮಾಚಿಮಾಡ ಡಿಂಪಲ್ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಣಿವೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ರಾಮಲಿಂಗೇಶ್ವರ ರಥೋತ್ಸವ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಣಿವೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ರಾಮಲಿಂಗೇಶ್ವರ ರಥೋತ್ಸವ*

ಏಪ್ರಿಲ್ 6, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕಣಿವೆ ಏ.6 NEWS DESK : ಉತ್ತರ ಕೊಡಗಿನ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು. ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಲಕ್ಷ್ಮಣೇಶ್ವರ ಹಾಗು ಬಸವೇಶ್ವರ ಎಂಬ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿದಿರುವ ಇಲ್ಲಿನ ಕಾವೇರಿ ನದಿಯ ದಂಡೆಯಲ್ಲಿ ನೆರೆದಿದ್ದ ಅಪಾರ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿತು. ರಥೋತ್ಸವದ ಅಂಗವಾಗಿ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ತಳಿರು ತೋರಣಗಳು ಮತ್ತು ಬಗೆ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನಾ ಪದ್ದತಿಯಂತೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಗೈದ ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ರಥೋತ್ಸವ ಆರಂಭವಾಗುತ್ತಿದ್ದಂತೆಯೇ ಇಷ್ಟಾರ್ಥ ಸಿದ್ಧಿಗೆ ನೆರೆದಿದ್ದ ಅನೇಕ ಭಕ್ತರು ಬಾಳೆ ಹಣ್ಣು ಹಾಗೂ ಜವುನಗಳನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದುದು ಕಂಡು ಬಂತು. ನಂತರ ಸಂಜೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತರಲಾಯಿತು. ರಥೋತ್ಸವಕ್ಕೆ ಧಾವಿಸಿದ್ದ ಭಕ್ತರೂ ಕೂಡ ಬಿಸಿಲ ಝಳ ತಾಳಲಾರದೇ ತಂಪು ನೀಡುವ ಅರಳಿ ಮರದ ಕೆಳಗೆ ಕುಳಿತು ಹಾಗೂ ಮಲಗಿ ಧಣಿವಾರಿಸಿಕೊಂಡಿದ್ದು ಕಂಡು ಬಂತು. ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾಧಿಗಳಿಗೆ ಹಲವು ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ನೀಡುವ ಮೂಲಕ ಭಕ್ತಿ ಭಾವ ಮೆರೆಯುತ್ತಿದ್ದುದು ಕಂಡು ಬಂತು. ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯಲ್ಲಿ ಕಾಶಿಯ ತೀರ್ಥವನ್ನು ತಂದ ಸಂದರ್ಭ ಕಣಿವೆ ಗ್ರಾಮದ ಪ್ರವೇಶ ದ್ವಾರ ರಾಂಪುರದಲ್ಲಿ ತೋರಣಗಳೊಂದಿಗೆ ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭ ಚಂಡೇ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು. ರಥೋತ್ಸವಕ್ಕೆ ಕಾವೇರಿ ನದಿಯ ಮೇಲೆ ನಿರ್ಮಿಸಿರುವ ತೂಗುಸೇತುವೆ ಭಕ್ತರನ್ನು ಆಕರ್ಷಿಸಿತು.  ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ಆಯೋಜನೆಗೊಂಡಿದೆ. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯಧ್ಯಕ್ಷ ಕೆ.ಎಸ್.ಮಾಧವ, ಕಾರ್ಯದರ್ಶಿ ಟಿ.ಎನ್.ಶೇಷಾಚಲ,ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್.ಮಹೇಶಕುಮಾರ್, ಇ.ಎಸ್.ಗಣೇಶ್, ಕೆ.ಎಂ.ರಾಕೇಶ್, ಟಿ.ಎಂ.ಕಾರ್ತಿಕ್, ಕೆ.ಸಿ.ನಂಜುಂಡಸ್ವಾಮಿ, ಅರ್ಚಕ ರಾಘವೇಂದ್ರ ಆಚಾರ್, ಉದಯಪ್ರಕಾಶ್ ಒಳಗೊಂಡಂತೆ ದೇವಾಲಯ ಸಮಿತಿ ಪದಾಧಿಕಾರಿಗಳಿದ್ದರು.

ವರದಿ : ಕೆ‌.ಆರ್.ಗಣೇಶ್

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಗೌರಿ ಗಣೇಶ ಹಬ್ಬ : ಗಣೇಶೋತ್ಸವ ಸಮಿತಿಗಳ ಸಭೆ : ನಿಯಮ ಪಾಲನೆಗೆ ಕೊಡಗು ಪೊಲೀಸ್ ಕಟ್ಟುನಿಟ್ಟಿನ ಸೂಚನೆ*

ಸೆಪ್ಟೆಂಬರ್ 5, 2026

*ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 5, 2026

*ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಸೆಪ್ಟೆಂಬರ್ 5, 2026

*ವಿರಾಜಪೇಟೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ*

ಸೆಪ್ಟೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಸೆ.5 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿರಾಜಪೇಟೆ ಸೇವಾ ಕೇಂದ್ರದಲ್ಲಿ ಪಾವನ ಪರ್ವ ರಕ್ಷಾಬಂಧನ…

*ವಿರಾಜಪೇಟೆ : ಸೆ.8 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಮಧ್ಯವಾಷಿ೯ಕ ಕೀಲು ಮತ್ತು ಮೂಳೆ ವಿಭಾಗದ ರಾಜ್ಯ ಸಮ್ಮೇಳನ : ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಮಂಡಿನೋವಿಗೆ ರೋಬೋಟಿಕ್ ಸಜ೯ರಿ ಸೇವೆ : ಡಾ.ಎ.ಜಿ.ಲೋಕೇಶ್*

ಸೆಪ್ಟೆಂಬರ್ 5, 2026

*ಮಡಿಕೇರಿಗೆ ಬರುತ್ತಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ – ಪ್ರಯಾಣಿಕರು, ಸಿಬ್ಬಂದಿ ಪಾರು*

ಸೆಪ್ಟೆಂಬರ್ 5, 2026

*ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ : ಕೊಡಗಿನ ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣಕ್ಕೆ ಯೋಜನೆ : ಸಚಿವ ಪಿ.ಎಂ.ನರೇಂದ್ರಸ್ವಾಮಿ*

ಸೆಪ್ಟೆಂಬರ್ 5, 2026

*ಕೊಡಗು : ಪ್ರಜಾಸೇವಾ ಆಂದೋಲನಕ್ಕೆ ಸಚಿವರಿಂದ ಚಾಲನೆ : ಜನರ ಮನೆ ಬಾಗಿಲಿಗೆ ಸರ್ಕಾರ : ಪಿ.ಎಂ.ನರೇಂದ್ರ ಸ್ವಾಮಿ*

ಸೆಪ್ಟೆಂಬರ್ 5, 2026

*ದಶ ದೇವಾಲಯಗಳ ಜೀರ್ಣೋದ್ಧಾರಕ್ಕೆ ತಲಾ ರೂ.5 ಲಕ್ಷ ಅನುದಾನ ನೀಡಿದ ಶಾಸಕ ಡಾ.ಮಂತರ್ ಗೌಡ : ಪೂಜೆಯ ಮೂಲಕ ಕಾಮಗಾರಿ ಆರಂಭ*

ಸೆಪ್ಟೆಂಬರ್ 5, 2026

*ಸೆಪ್ಟೆಂಬರ್ 7 ರಂದು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ಅವರ 61ನೇ ಪುಣ್ಯಸ್ಮರಣೆ; ಮಡಿಕೇರಿಯಲ್ಲಿ ಸಮರ ವೀರನಿಗೆ ಗೌರವ ಸಮರ್ಪಣೆ*

ಸೆಪ್ಟೆಂಬರ್ 5, 2026

*ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷರಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಮಾಚಿಮಾಡ ಡಿಂಪಲ್ ಆಯ್ಕೆ*

ಸೆಪ್ಟೆಂಬರ್ 5, 2026

*ಮಡಿಕೇರಿ ನಗರಸಭೆ ನಿರ್ಧಾರಕ್ಕೆ ಚೇಂಬರ್ ಆಫ್ ಕಾಮರ್ಸ್ ತೀವ್ರ ವಿರೋಧ*

ಸೆಪ್ಟೆಂಬರ್ 5, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.