
ಗೋಣಿಕೊಪ್ಪ NEWS DESK ಅ.1 (ಜಗದೀಶ್ ಜೋಡುಬೀಟಿ) : ಗೋಣಿಕೊಪ್ಪ ದಸರಾದ ಪ್ರಮುಖ ಅಕರ್ಷಣೆಯಾದ ಶೋಭಾಯತ್ರೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಮಂಟಪ ಸಮಿತಿಗಳು ಆಕರ್ಷಕ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಪೌರಾಣಿಕ ಕಥೆಗಳನ್ನು ಆಧರಿಸಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಜೆಸಿಬಿ ,ಟ್ಯಾಕ್ಟರ್, ಹಿಟಾಚಿ, ಲಾರಿ, ವ್ಯಾನ್ ಸೇರಿದಂತೆ ಇನ್ನಿತರ ವಾಹನಗಳನ್ನು ಬಳಸುವ ಮೂಲಕ ಜನಾಕರ್ಷಣೆಯ ಕಲಾಕೃತಿಗಳ ಅಳವಡಿಕೆಗೆ ತಯಾರಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಎಂಟು ಮಂಟಪಗಳು ಪೈಪೋಟಿಗೆ ಇಳಿದು ಕಲಾಕೃತಿಯನ್ನು ನಿರ್ಮಿಸುತ್ತಿದೆ. ಶ್ರೀ ಕಾವೇರಿ ದಸರಾ ಸಮಿತಿಯ ಚಾಮುಂಡಿ ದೇವಿ ಹೊತ್ತ ಮಂಟಪವು ಮೊದಲ ಸಾಲಿನಲ್ಲಿ ಮೆರವಣಿಗೆ ಹೊರಡಲಿದೆ. ವಿಜಯದಶಮಿ ಮಧ್ಯಾಹ್ನ ಸ್ಥಬ್ಧ ಚಿತ್ರ ಮೆರವಣಿಗೆಯನ್ನು ಆಕರ್ಷಣೆಯಾವಾಗಿಸುವ ನಾಡ ಹಬ್ಬ ದಸರಾ ಸಮಿತಿಯ 36ನೇವರ್ಷದ ಅಚಾರಣೆಯಾಗಿ ಭಾರತಾಂಭೆ ಭಾವಚಿತ್ರ ಹೊತ್ತ ಮಂಟಪ ಸಾಗಲಿದೆ. ಇತರ ಏಂಟು ಮಂಟಪಗಳು ಮೆರವಣಿಗೆಯಲ್ಲಿ ಒಂದರ ಹಿಂದೆ ಒಂದರಂತೆ 47ನೇ ದಸರಾಜನೋತ್ಸವದ ಆಕರ್ಷಣೆಗೆ ಮೆರುಗು ನೀಡಲಿದೆ. 36ನೇ ವರ್ಷದಲ್ಲಿ ನಾಡಹಬ್ಬ ದಸರಾ ಸಮಿತಿ, 20ನೇ ವರ್ಷದಲ್ಲಿ ಅರುವತೊಕ್ಲು ಕಾಡ್ಲಯಪ್ಪ ದಸರಾ ಸಮಿತಿ, 17ನೇವರ್ಷದ ಯವ ದಸರಾ ಸಮಿತಿ, 36ನೇ ವರ್ಷದಲ್ಲಿ ನವಚೇತನ ದಸರಾ ಸಮಿತಿ, 36ನೇ ವರ್ಷದಲ್ಲಿ ಅರುವತೊಕ್ಲು ಶಾರದಾಂಭ ದಸರಾ ಸಮಿತಿ, 26ನೇವರ್ಷದಲ್ಲಿ ಸರ್ವರ ದಸರಾ ಸಮಿತಿ, 20ನೇ ವರ್ಷದಲ್ಲಿ ಭಗವತಿ ದಸರಾ ಸಮಿತಿ ಕೈಕೇರಿ, 37 ವರ್ಷದಲ್ಲಿ ನಮ್ಮ ದಸರಾ ಸಮಿತಿ, 36ನೇ ವರ್ಷದಲ್ಲಿ ಸ್ನೇಹಿತರ ಬಳಗ ಕೊಪ್ಪ ಮಂಟಪಗಳನ್ನು ಹೊರಡಿಸಿಲಿದ್ದಾರೆ. ನಾಡಹಬ್ಬ ದಸರಾ ಸಮಿತಿ ವಿಜಯದಶಮಿಯ ಮಧ್ಯಾಹ್ನದ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ವಿಶೇಷವಾಗಿ 25ಕ್ಕೂ ಹೆಚ್ಚು ಸ್ತಬ್ದಚಿತ್ರಗಳು ಆಕರ್ಷಣೆಯವಾಗಲಿದೆ. ಸರಕಾರ ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಪೂರಕ ತಯಾರಿಯನ್ನು ನಾಡಹಬ್ಬ ದಸರಾ ಸಮಿತಿ ಕೈಗೊಂಡಿದೆ. ಓಂಕಾರ ಭಜನಾ ನೃತ್ಯ, ಕೇರಳದ ಗೊಂಬೆಗಳು, ಕೊಡವ ವಾಲಗ, ಭಗತ್‌ಸಿಂಗ್ ಮಹಿಳಾ ವಿಂಗ್ ಅವರಿಂದ ಬ್ಯಾಂಡ್ ಸೆಟ್ ಮೆರವಣಿಗೆಯ ಅಲಂಕಾರವಾಗಲಿದೆ. ಹೆಚ್ಚು ಸ್ತಬ್ಧ ಚಿತ್ರಗಳ ಪ್ರದರ್ಶನ ಈ ಬಾರಿ ಗಮನ ಸೆಳೆಯಲಿದೆ. ವಿಜೃಂಭಣೆಯಿಂದ ವಿಶೇಷ ರೀತಿಯಲ್ಲಿ ಮೆರವಣಿಗೆ ಸಾಗಿ ಬರಲಿದೆ. ಸಮಿತಿಯ ಪ್ರತಿಯೊಬ್ಬರು ಟಿ-ಶರ್ಟ್ ಧರಿಸಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಮಧ್ಯಾಹ್ನ ಆಸ್ಪತ್ರೆ ಹಿಂಭಾಗದಲ್ಲಿರುವ ನಾಡಹಬ್ಬ ದಸರಾ ಸಮಿತಿಯ ಕಚೇರಿಯ ಮುಂಭಾಗ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಪೌರಾಣಿಕ ಪಾತ್ರದ ಕಲಾಕೃತಿಗಳನ್ನು ಅಳವಡಿಸಿ ಅದಕ್ಕೆ ಶಬ್ದದ ಮೂಲಕ ಜೀವ ತುಂಬಿ ಪೌರಾಣಿಕ ಕಥೆಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಸಮಿತಿಯ ಸದಸ್ಯರುಗಳ ಪ್ರಯತ್ನ ಸಾಗುತ್ತಿದೆ. ಈಗಾಗಲೇ ಕಲಾಕೃತಿಗಳ ತಯಾರಿ ನಡೆದಿದ್ದು, ಜೋಡಣೆಯ ಕಾರ್ಯ ಶೀಘ್ರಗತಿಯಾಗುತ್ತಿದೆ.








