ಮಡಿಕೇರಿ NEWS DESK ಅ.4 : ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಜಾಥಾ ಕಾಯ೯ಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸದಸ್ಯರು ಕೊಡಗಿನ ಸಾಂಪ್ರದಾಯವನ್ನು ಪ್ರದರ್ಶಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾದರು. ಅರಮನೆ ಮೈದಾನದಿಂದ ಬನ್ನಿ ಮಂಟಪದವರೆಗೆ ನಡೆದ ಈ ಮೆರವಣಿಗೆಯಲ್ಲಿ ಕೊಡವರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತಳಿಯತಕ್ಕಿ ದೀಪ ಹಿಡಿದು, ದುಡಿ ಕೊಟ್ಟ್ ಪಾಟ್,ನ ಜೊತೆಗೆ ಕೊಡವ ಸಂಸ್ಕೃತಿಯ ಅಂಗವಾದ ಒಡಿಕತ್ತಿ, ಬಿಲ್ಲು ಬಾಣ, ಬಜಿ೯ ಹಿಡಿದು ವಾಲಕತಾಟ್ ಗೆ ನೃತ್ಯ ಮಾಡುವ ಮೂಲಕ ಜಾಥಾ ನಡೆಸಲಾಯಿತು. ಕೊಡಗಿನ ವಾಲಗ ತಂಡದ ಪಾಯೋಜಕತ್ವವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ ಅವರು ನೀಡಿದರು. ಕಾಯ೯ಕ್ರಮದಲ್ಲಿ ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯಕ್ರಮ ಸಂಚಾಲಕ ಕಾಳಮಂಡ ರಾಬಿನ್ ಅಚ್ಚಮ್ಮ, ಮಾಚಂಗಡ ಸಚಿನ್ ತಿಮ್ಮಯ್ಯ ಹಾಗೂ ಕಾಯಪಂಡ ಇಶಾನ್ ಪೂಣಚ್ಚ , ಪೊನ್ನೋಲತಂಡ ಶರಣು ತಮ್ಮಯ್ಯ , ಕೇಳಪ್ಪಂಡ ಲಿಂಕಿತ್ ತಿಮ್ಮಯ್ಯ , ಕಾಯಪ್ಪಂಡ ತ್ರಿಶ ಮುತ್ತಮ್ಮ , ಮಾತಂಡ ಕುಶಿ ಉನ್ನತಿ, ಮಾಳೇಟಿರ ಯಶ್ಮ ಬೋಜಮ್ಮ, ಚೋಡುಮಾಡ ಪೂಜಾ ಪೊನ್ನಮ್ಮ, ಬಾಡಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಮಲ್ಲಮಾಡ ಸೋಮಣ್ಣ, ಪೊರ್ಕೊಂಡ ಶಾನ್ ನಾಣಯ್ಯ , ಮಾಚ0ಗಡ ಭೂಮಿಕಾ, ಚಪ್ಪಂಡ ಪೂರ್ವಿಕ್ ಪೊನ್ನಣ್ಣ, ಮುಕ್ಕಾಟಿರ ಧ್ಯಾನಿಕ ದೇಚಮ್ಮ, ನಡಿಕೇರಿಯಂಡ ದಿಯ ದೇಚಮ್ಮ, ನಡಿಕೇರಿಯಂಡ ಜೀಯಾ ಬೋಜಮ್ಮ, ಮಂಡೇಪಂಡ ಡೆನ್ ಕಾರ್ಯಪ್ಪ, ಕೊಟ್ಟಂಗಡ ಬಿಪಿನ್ ಬಿದ್ದಪ್ಪ, ಬಲ್ಯಾoಡಮಾಡ ನಿತಿಹ ನೀಲಮ್ಮ, ಕಾಯಪಂಡ ಸೋನಿಕ ದೇಚಮ್ಮ, ಮಾಚಂಗಡ ಮಿಥುನ್ ಮುತ್ತಣ್ಣ ಮತ್ತು ತುಚಮಕೇರಿ ವಾಲಗ ತಂಡದ ಉದಯ, ಶ್ರೀಕಾಂತ್, ಮಂಜುನಾಥ, ವಿನೋದ್, ಮೇಗನ್ ಭಾಗವಹಿಸಿದ್ದರು.








