
ಮಡಿಕೇರಿ NEWS DESK ಅ.7 : ವಿದ್ಯಾರ್ಥಿಗಳು ಗುರು ಸಮಾನರಾದ ಮಹರ್ಷಿ ವಾಲ್ಮೀಕಿ ಅವರ ಮೌಲ್ಯಯುತ ಗುಣಲಕ್ಷಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರಗತಿ ಸಾಧಿಸಬೇಕೆಂದು ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಈ.ತಿಪ್ಪೇಸ್ವಾಮಿ ಕರೆ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಸತ್ಯ ಧರ್ಮ ಆದರ್ಶ ಜೀವನದ ಪಾಠವನ್ನು ನೀಡಿದರು ಎಂದರು.
ಮೌಲ್ಯಯುತ ಗುಣಲಕ್ಷಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ವಾಲ್ಮೀಕಿ ಅವರು ಮಹಿಳಾ ಸಬಲೀಕರಣದ ಬಗ್ಗೆ ಆಸಕ್ತಿ ಹೊಂದಿದ್ದರು. ಲವಕುಶರುಗಳಿಗೆ ಮಾದರಿ ಗುರುಗಳಾಗಿದ್ದ ವಾಲ್ಮೀಕಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಾಲ್ಮೀಕಿ ಜೀವನ ಚರಿತ್ರೆ ಮತ್ತು ಅವರ ಅನೇಕ ಆಯಾಮಗಳನ್ನು ಪ್ರೊ.ಈ.ತಿಪ್ಪೇಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫೀ.ಮಾ.ಕಾರ್ಯಪ್ಪ ಕಾಲೇಜ್ ನ ಪ್ರಬಾರ ಪ್ರಾಂಶುಪಾಲ ಪ್ರೊ.ಶ್ರೀಧರ್ ಆರ್.ಹೆಗಡೆ ಅವರು ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ಧನಾತ್ಮಕವಾಗಿತ್ತು ಮತ್ತು ಅಧ್ಯಯನ ಶೀಲತೆಯಿಂದ ಕೂಡಿತ್ತು ಎಂದು ವಿವರಿಸಿದರು.
ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪಿ.ಕೃಷ್ಣ ಅವರು ಮಾತನಾಡಿ ವಾಲ್ಮೀಕಿ ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು ನಾವು ಜೀವನದಲ್ಲಿ ಮುಂದೆ ಸಾಗಬೇಕಾಗಿ ಎಂದರು. ಐಕ್ಯೂಎಸಿ ಸಂಯೋಜಕ ಪ್ರೊ.ನಾಗರಾಜ್ ಕೆ.ಪಿ ಅವರು ಮಾತನಾಡಿದರು. ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಚಂದ್ರಾವತಿ ಪ್ರಾರ್ಥಿಸಿ, ಸಂದೇಶ್ ನಿರೂಪಿಸಿದರು. ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಶೈಲಶ್ರೀ ಕೆ. ಸ್ವಾಗತಿಸಿ, ವಿದ್ಯಾರ್ಥಿ ಸೋಮಣ್ಣ ವಂದಿಸಿದರು. ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ರವಿಶಂಕರ್ ಎಂ.ಎನ್, ಡಾ.ರೇಣುಶ್ರೀ ಎಚ್.ಕೆ, ಖುಷಿದಾ ಬಾನು, ಹರಿಣಿ ದೇವರಾಜ, ಬಾಬು, ಎನ್‌ಸಿಸಿ, ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








