
ನಾಪೋಕ್ಲು ಅ.11 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಹಕಾರದೊಂದಿಗೆ ಬೆಂಗಳೂರಿನ ಗಾಲ್ಫ್ ಕ್ಲಬ್ ನಲ್ಲಿ ಜರುಗಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಗೌರವ ಪ್ರಶಸ್ತಿ ಸಮಾರಂಭದ ಬಗ್ಗೆ ಹಲವು ಸಲಹೆ ಸೂಚನೆಗಳೊಂದಿಗೆ ಚರ್ಚಿಸಿ ನಿರ್ಣಯಗಳನ್ನು ಎಲ್ಲರ ಸಹಮತದೊಂದಿಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಮತ್ತು ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ.ರಾಜೇಶ್ ತೇನನ ಸೇರಿದಂತೆ ಕೊಡಗು ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ ಬೆಂಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಯುವ ವೇದಿಕೆ, ಮಹಿಳಾ ಘಟಕ, ಬೆಂಗಳೂರು, ಗೌಡ ಸಮಾಜ ದಾಸರಹಳ್ಳಿ, ಗೌಡ ಸಮಾಜ ಯಲಹಂಕ, ಕೊಡಗು ದಕ್ಷಿಣ ಕನ್ನಡ ಗೌಡ ಕ್ರೆಡಿಟ್ ಕೋ ಸೊಸೈಟಿ, ಕೆಂಪೇಗೌಡ ರೂರಲ್ ಹೌಸಿಂಗ್ ಸೊಸೈಟಿ, ದಕ್ಷಿಣ ಕನ್ನಡ ಕ್ಷೇಮ ಅಭಿವೃದ್ಧಿ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಾಗಿದ್ದರು.
ವರದಿ : ದುಗ್ಗಳ ಸದಾನಂದ.









