
ವಿರಾಜಪೇಟೆ ಅ.15 NEWS DESK : ವಿರಾಜಪೇಟೆಯ ರೋಟರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚೆನ್ನೈನ ಸೀತಾಲಕ್ಷ್ಮೀ ಮಧುರವೋಯಲ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಾಂಪಿಯನ್ ಆಗಿದ್ದಾರೆ. ವಿದ್ಯಾರ್ಥಿಗಳಾದ 7ನೇ ತರಗತಿಯ ಚರಣ್, ಯದುನಂದನ್ ಮತ್ತು ಚಿರಂತ್ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಚಿರಂತ್ ಚಾಂಪಿಯನ್ ಆಗಿ, ಚರಣ್ ಹಾಗೂ ಯದುನಂದನ್ ಟಾಪರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಎನ್.ಸಿ. ಚಿರಂತ್ ವಿರಾಜಪೇಟೆಯ ಗಾಂಧಿನಗರದ ಎನ್.ಜಿ.ಚಂದ್ರಶೇಖರ್ ಹಾಗೂ ಹೇಮಾವತಿ ಅವರ ಪುತ್ರ. ಬಿ.ಸಿ.ಚರಣ್ ಬಿಟ್ಟಂಗಾಲದ ಬಲ್ಲಡಿಚಂಡ ಕಿರಣ್ ಹಾಗೂ ಸುಮಿತ್ರ ಅವರ ಪುತ್ರ. ಪಿ.ಎಸ್.ಯದುನಂದನ್ ಕೊಮ್ಮೆತೋಡು ಗ್ರಾಮದ ಶಾಜಿ ಮತ್ತು ಸೌಮ್ಯ ದಂಪತಿಯ ಪುತ್ರ.









