
ನಾಪೋಕ್ಲು ಅ.16 NEWS DESK : ಕೊಡಗಿನ ಗಡಿಭಾಗ ಸಂಪಾಜೆ ಗ್ರಾಮ ಪಂಚಾಯಿತಿಯ ಕೊಯನಾಡಿನ ಗ್ರಾಮದ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಫಸಲನ್ನು ನಾಶ ಪಡಿಸಿದೆ. ಕೊಯನಾಡಿನ ಕೇನಾಜೆ ಉಲ್ಲಾಸ ಅವರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಗಿಡಗಳನ್ನು ತಿಂದು ತುಳಿದು ನಾಶ ಮಾಡಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಾಡಾನೆಗಳ ಹಿಂಡು ತೋಟಕ್ಕೆ ಲಗ್ಗೆ ಇಟ್ಟು ತೆಂಗು, ಅಡಕೆ, ಬಾಳೆ ಸೇರಿದಂತೆ ಕೃಷಿ ಗಿಡಗಳನ್ನು ಧ್ವಂಸಗೊಳಿಸಿದೆ. ಕಾಡಾನೆಗಳ ನಿರಂತರ ದಾಳಿಯಿಂದ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣವೆ ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









