
ನಾಪೋಕ್ಲು ಅ.20 NEWS DESK : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 30ನೇ ವರ್ಷದ ಕಾವೇರಿ ತೀರ್ಥ ವಿತರಿಸಲಾಯಿತು. ಕಾವೇರಿ ರಥಯಾತ್ರೆ ನಾಪೋಕ್ಲು ನಿಂದ ತಲಕಾವೇರಿಗೆ ತೆರಳಿ ಹಿಂತುರುಗಿ ಬರುವಾಗ ವಿವಿಧ ಗ್ರಾಮಗಳ ಭಕ್ತರಿಗೆ ಕಾವೇರಿ ತೀರ್ಥ ವಿತರಿಸಿದರು. ಭಾಗಮಂಡಲದಿಂದ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ರಥಯಾತ್ರೆ ಆರಂಭಗೊಂಡು ಭಕ್ತರಿಗೆ ತೀರ್ಥ ವಿತರಣೆಯನ್ನು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಪೇರೂರು, ಬಲ್ಲಮಾವಟಿ, ಚೋನಕೆರೆ, ನಾಪೋಕ್ಲು ಗ್ರಾಮಗಳಲ್ಲಿ ಪೂರೈಸಿ ಸಮೀಪದ ಪಾಲೂರಿನ ಹರಿಶ್ಚಂದ್ರ ದೇವಾಲಯದಲ್ಲಿ ಸಮಾಪ್ತಿಗೊಂಡಿತು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಮಾತನಾಡಿ, ಕಳೆದ 29 ವರ್ಷಗಳಿಂದ ಯಶಸ್ವಿಯಾಗಿ ಭಕ್ತರಿಗೆ ತೀರ್ಥ ವಿತರಣೆ ಮಾಡಲಾಗುತ್ತಿದೆ. ತಲಕಾವೇರಿಗೆ ತೆರಳಲಾರದ ಭಕ್ತರ ಮನೆಗಳಿಗೆ ತೀರ್ಥ ವಿತರಿಸುತ್ತಿರುವುದುದು ಸಂತಸತಂದಿದೆ. ಇದಕ್ಕೆ ಎಲ್ಲರ ಸಹಕಾರ ಲಭಿಸಿದೆ ಎಂದರು. ಭಾಗಮಂಡಲದಿಂದ ಅಯ್ಯಂಗೇರಿ, ಬಲ್ಲಮಾವಟಿ ಮಾರ್ಗವಾಗಿ ನಾಪೋಕ್ಲುವರೆಗೆ ತೀರ್ಥ ವಿತರಿಸಲಾಯಿತು ಎಂದರು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿನ್ನಪ್ಪ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ನಿರ್ದೇಶಕರು ಕಲಿಯಾಟಂಡ ಸುಮಿದೇವಯ್ಯ, ಚಿಲ್ಲನ ಕಿರಣ್, ನೆರವಂಡ ಸೋಮಣ್ಣ, ಎಳ್ತಂಡ ಭೀಮಯ್ಯ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









