Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಬಿಳಿ ಫಲಕದ ವಾಹನಗಳಿಂದ ಹಳದಿ ಫಲಕದ ವಾಹನಗಳಿಗೆ ನಷ್ಟ : ಸೂಕ್ತ ಕ್ರಮಕ್ಕೆ ಆಗ್ರಹ*
  • *ಶಾಂತಿನಿಕೇತನ ಯುವಕ ಸಂಘದಿoದ ಯಶಸ್ವೀ ರಕ್ತದಾನ ಶಿಬಿರ*
  • *ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*
  • *ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯಲ್ಲಿ ಎಸ್.ಎಸ್. ದಿವಿತ್‌ಗೆ ಪ್ರಥಮ ಸ್ಥಾನ*
  • *ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿ.ಆರ್.ವರ್ಷ ಪ್ರಥಮ*
  • *ವಾಲಿಬಾಲ್ ಪಂದ್ಯಾವಳಿ : ಸರ್ವದೈವತ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ*
  • *ಕಾಂತಪ್ಪಗೆ ಪಿಎಚ್‍ಡಿ ಪದವಿ*
  • *ಎಫ್‌.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮ*
  • *ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟನೆ*
  • *ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಉತ್ತಮ ತರಬೇತಿ, ಸೌಲಭ್ಯಗಳಿದ್ದರೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಕಷ್ಟವಲ್ಲ : ಸಿಎಂ ಸಿದ್ದರಾಮಯ್ಯ*
ಇತ್ತೀಚಿನ ಸುದ್ದಿಗಳು ಕರ್ನಾಟಕ

*ಉತ್ತಮ ತರಬೇತಿ, ಸೌಲಭ್ಯಗಳಿದ್ದರೆ ಒಲಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ಕಷ್ಟವಲ್ಲ : ಸಿಎಂ ಸಿದ್ದರಾಮಯ್ಯ*

ಡಿಸೆಂಬರ್ 2, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಬೆಂಗಳೂರು ಡಿ.2 NEWS DESK : ಉತ್ತಮ ತರಬೇತಿ, ತರಬೇತುದಾರರು ಹಾಗೂ ಸೌಲಭ್ಯಗಳಿದ್ದರೆ ಒಲಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವುದು ಕಷ್ಟವೇನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಯುವನಿಕ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2022 ಮತ್ತು 2023ರ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಹಾಗೂ 2023ರ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ತಮ್ಮ ಗುರಿಸಾಧನೆಗೆ ಹಗಲಿರುಳು ಶ್ರಮಿಸಬೇಕು. ಏಳು ಕೋಟಿ ಕನ್ನಡಿಗರಿರುವ ಕರ್ನಾಟಕದಿಂದ ಪದಕ ಗೆಲ್ಲುವುದು ಅಸಾಧ್ಯವೇನಲ್ಲ.  ಕ್ರೀಡೆಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಲಂಪಿಕ್ಸ್ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಿಗೆ 6 ಕೋಟಿ ರೂ. ನಗದು ಬಹುಮಾನ, ಶ್ರೇಣಿ 1 ಅಥವಾ 2 ರಲ್ಲಿ ಸರ್ಕಾರಿ ಉದ್ಯೋಗ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂ., ಕಂಚು ಪದಕ ವಿಜೇತರಿಗೆ 3 ಕೋಟಿ ರೂ. ನಗದು ಬಹುಮಾನ ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಎರಡು ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ಒಟ್ಟು 30 ಜನರಿಗೆ ನೀಡಲಾಗಿದ್ದು, 4 ಲಕ್ಷಗಳ ನಗದು ಬಹುಮಾನವನ್ನು ಪ್ರಶಸ್ತಿ ಒಳಗೊಂಡಿದೆ. ನಗದು ಬಹುಮಾನದ ಮೊತ್ತವನ್ನು ನನ್ನ ಅವಧಿಯಲ್ಲಿಯೇ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉತ್ತಮ ಕ್ರೀಡಾಪಟುಗಳನ್ನು ರಾಜ್ಯಕ್ಕೆ ನೀಡುವ ತರಬೇತುದಾರರಿಗೆ ಒಟ್ಟು 9 ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದ್ದು, 3 ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿದೆ.
ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕರನ್ನು ಗುರುತಿಸಿ ಒಟ್ಟು 15 ಕ್ರೀಡಾರತ್ನ ಪ್ರಶಸ್ತಿಗಳನ್ನು ನೀಡಲಾಗಿದ್ದು, ₹2 ಲಕ್ಷಗಳ ನಗದು ಬಹುಮಾನವನ್ನು ಒಳಗೊಂಡಿದೆ. ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಖಾಸಗಿ ಕ್ಷೇತ್ರದ ಸಂಸ್ಥಗಳನ್ನು ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದರು.  ಕರ್ನಾಟಕದ ಕ್ರೀಡಾಪಟುಗಳಿಗೆ ಗೆಲ್ಲುವ ಸಾಧ್ಯತೆಗಳಿವೆ, ಪ್ರಯತ್ನ ಮಾಡಬೇಕಷ್ಟೆ. 2028 ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 60 ಜನರನ್ನು ಗುರುತಿಸಲಾಗಿದ್ದು, ಪ್ರತಿ ವರ್ಷ 10 ಲಕ್ಷ ರೂ. ಗಳನ್ನು ತರಬೇತಿಯ ಅವಧಿಯಲ್ಲಿಯೇ ನೀಡಲಾಗುತ್ತದೆ. ಕ್ರೀಡಾಪಟುಗಳು ಯಾವುದಾದರೂ ಒಂದು ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿಯೇ ಸಂಪೂರ್ಣ ಏಕಾಗ್ರತೆ, ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು. ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ. ಒಲಂಪಿಕ್ಸ್ ಹಾಗೂ ಕಾಮನ್ ವೆಲ್ತ್ ಕ್ರೀಡೆಗಳಲ್ಲಿ ಗೆದ್ದವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಕರ್ನಾಟಕ ಉತ್ತಮ ಕ್ರೀಡಾಪಟುಗಳನ್ನು ಈವರೆಗೆ ರೂಪಿಸಿದೆ. ಹಾಕಿಯಂತಹ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅಥ್ಲೆಟಿಕ್ಸ್ ನಲ್ಲಿಯೂ ಸಾಧನೆ ಮಾಡಬೇಕು. ಬೇಡರ ಜಾತಿಗೆ ಸೇರಿದ ಏಕಲವ್ಯ ಗುರುವಿಲ್ಲದೆ ವಿದ್ಯೆಯನ್ನು ಕಲಿತವನು. ಅರ್ಜುನನಿಗಿಂತ ಮೀರಿ ಬಿಲ್ಲುವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದರಿಂದ ಅವನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣಾಚಾರ್ಯರು ಪಡೆಯುತ್ತಾರೆ. ಆ ಕಾಲದಲ್ಲಿಯೂ ಜಾತಿ ವ್ಯವಸ್ಥೆಯಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಏಕಲವ್ಯ ಪ್ರಶಸ್ತಿ ಪಡೆದವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸುತ್ತೇನೆ. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಬಿಳಿ ಫಲಕದ ವಾಹನಗಳಿಂದ ಹಳದಿ ಫಲಕದ ವಾಹನಗಳಿಗೆ ನಷ್ಟ : ಸೂಕ್ತ ಕ್ರಮಕ್ಕೆ ಆಗ್ರಹ*

ಸೆಪ್ಟೆಂಬರ್ 22, 2026

*ಶಾಂತಿನಿಕೇತನ ಯುವಕ ಸಂಘದಿoದ ಯಶಸ್ವೀ ರಕ್ತದಾನ ಶಿಬಿರ*

ಸೆಪ್ಟೆಂಬರ್ 22, 2026

*ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*

ಸೆಪ್ಟೆಂಬರ್ 21, 2026

*ಶಾಂತಿನಿಕೇತನ ಯುವಕ ಸಂಘದಿoದ ಯಶಸ್ವೀ ರಕ್ತದಾನ ಶಿಬಿರ*

ಸೆಪ್ಟೆಂಬರ್ 22, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಸೆ.22 : ಶಾಂತಿನಿಕೇತನ ಯುವಕ ಸಂಘದ ವತಿಯಿಂದ 48ನೇ ವರ್ಷದ ಅದ್ದೂರಿ ಗಣೇಶೋತ್ಸವದ ಅಂಗವಾಗಿ ಬೃಹತ್…

*ಮೂರ್ನಾಡಿನಲ್ಲಿ ಶ್ರದ್ಧಾಭಕ್ತಿಯಿಂದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ*

ಸೆಪ್ಟೆಂಬರ್ 21, 2026

*ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯಲ್ಲಿ ಎಸ್.ಎಸ್. ದಿವಿತ್‌ಗೆ ಪ್ರಥಮ ಸ್ಥಾನ*

ಸೆಪ್ಟೆಂಬರ್ 21, 2026

*ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿ.ಆರ್.ವರ್ಷ ಪ್ರಥಮ*

ಸೆಪ್ಟೆಂಬರ್ 21, 2026

*ವಾಲಿಬಾಲ್ ಪಂದ್ಯಾವಳಿ : ಸರ್ವದೈವತ ಕಾಲೇಜಿನ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ*

ಸೆಪ್ಟೆಂಬರ್ 21, 2026

*ಕಾಂತಪ್ಪಗೆ ಪಿಎಚ್‍ಡಿ ಪದವಿ*

ಸೆಪ್ಟೆಂಬರ್ 21, 2026

*ಎಫ್‌.ಎಂ.ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮ*

ಸೆಪ್ಟೆಂಬರ್ 21, 2026

*ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಉದ್ಘಾಟನೆ*

ಸೆಪ್ಟೆಂಬರ್ 21, 2026

*ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ*

ಸೆಪ್ಟೆಂಬರ್ 21, 2026

*ಸೋಮವಾರಪೇಟೆಯಲ್ಲಿ ಓಣಂ ಉತ್ಸವ ಹಾಗೂ ಹಿಂದೂ ಮಲಯಾಳ ಸಮಾಜದ ದಶಮಾನೋತ್ಸವ*

ಸೆಪ್ಟೆಂಬರ್ 21, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.