
ಮಡಿಕೇರಿ ಡಿ.20 NEWS DESK : ಮದ್ರಾಸ್ ರೆಜಿಮೆಂಟ್ ಅಭಿಲೇಖಾಲಯವು(ರೆಕಾರ್ಡ್ ದಿ ಮದ್ರಾಸ್ ರೆಜಿಮೆಂಟ್) ಮದ್ರಾಸ್ ರೆಜಿಮೆಂಟ್‌ನ ಮಾಜಿ ಸೈನಿಕರು ಹಾಗೂ ಇತರರೊಂದಿಗೆ ಪರಸ್ಪರ ಸಂಪರ್ಕ ಸುಗಮಗೊಳಿಸುವ ಗುರಿಯೊಂದಿಗೆ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದೆ. ಈ ಮೂಲಕ ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಂಬಂಧಿಸಿದ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕುಂದುಕೊರತೆ ಪರಿಹರಿಸಲಾಗುವುದು.ಈ ರ‍್ಯಾಲಿಯು ಜ.6 ರಂದು ಮಡಿಕೇರಿಗೆ ಆಗಮಿಸಲಿದ್ದು, ಮದ್ರಾಸ್ ರೆಜಿಮೆಂಟ್‌ನ ಮಾಜಿ ಸೈನಿಕರು ಹಾಗೂ ವೀರನಾರಿಯರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಪಿಂಚಣಿ ಹಾಗೂ ಇತರೆ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ಆರ್.ಶೆಟ್ಟಿ ಅವರು ತಿಳಿಸಿದ್ದಾರೆ.








