

ಕುಶಾಲನಗರ ಜ.17 NEWS DESK : ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಜ.25 ರಂದು ಕುಶಾಲನಗರದಲ್ಲಿ ಸೀಸನ್ 1ರ ಸ್ವರ ಸಂಭ್ರಮ ಮತ್ತು ಕರೋಕೆ ಗಾಯನ ಸಮಾರಂಭ ಏರ್ಪಡಿಸಲಾಗಿದೆ ಎಂದು ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷರಾದ ಡಾ.ನಯನ ಹರಿಶ್ಚಂದ್ರ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಶಾಲನಗರ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಡುಗಾರರು ನೊಂದಣಿ ಮಾಡಿಕೊಳ್ಳಬೇಕಾಗಿದೆ. ಮಡಿಕೇರಿ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಹರಿಣಿ ಪ್ರಭಾಕರ್ ಕೊಡಗು ಜಿಲ್ಲಾಧ್ಯಕ್ಷರಾದ ನಯನ ಹರಿಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಥೆಯ ಕಾನೂನು ಸಲಹೆಗಾರರಾದ ಕೆ ಎಸ್ ಚಂದ್ರಶೇಖರ್, ನಿವೃತ್ತ ಅಧಿಕಾರಿ ಹರೀಶ್ ಚಂದ್ರ ಬಿದ್ರುಪಣೆ ಉದ್ಯಮಿ ಬಿ ಜಿ ರಾಜೇಶ್, ರಾಬಿನ್ ಪೀಟರ್, ಯುಸಫ್, ಕಾಫಿ ಬೆಳೆಗಾರರಾದ ಪೋತಂಡ್ರ ತೇಜಪ್ರಸಾದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಾಡುಗಾರರಿಗೆ ಯಾವುದೇ ಶುಲ್ಕ ಇರೋದಿಲ್ಲ. ಪ್ರತಿಭೆಗಳನ್ನು ಹೊರತರುವ ತರುವ ಗುರಿ ತಮ್ಮ ಸಂಸ್ಥೆಯದಾಗಿದೆ ಎಂದು ತಿಳಿಸಿರುವ ಅವರು, ನೊಂದಾವಣೆಗೆ ಹಾಡುಗಾರರು 9448201227/9342845120 ಅಥವಾ 8867688676 ಸಂಪರ್ಕಿಸುವಂತೆ ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಮೌಲ್ಯ ಜಯಕುಮಾರ್ ಮತ್ತು ರಂಜಿನಿ ಇದ್ದರು.









