Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜ.21 ದಾಸೋಹ ದಿನ : ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ : ಬರಹ : ಗೀತಾಂಜಲಿ ಎನ್.ಎಮ್* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜ.21 ದಾಸೋಹ ದಿನ : ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ : ಬರಹ : ಗೀತಾಂಜಲಿ ಎನ್.ಎಮ್* 

ಜನವರಿ 21, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

NEWS DESK *ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ* ನಾಡು ಕಂಡ ಮಹಾಯೋಗಿ ಮಹಾ ದಾಸೋಹಿ, ನೆಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ದಿನವಾದ ಜನವರಿ 21ನ್ನು ರಾಜ್ಯ ಸರ್ಕಾರವು ‘ದಾಸೋಹ ದಿನ’ ಎಂದು ಆಚರಿಸಲು ಘೋಷಿಸಿದೆ.! ಈ ದಾಸೋಹ ದಿನ ಒಂದು ಸ್ಮರಣೆ ಮತ್ತು ಉತ್ತಮ ಸೇವಾ ಸಂದೇಶದ ಆಚರಣೆ. ಹಾಗಾಗಿ ಸ್ವಾಮೀಜಿಯವರ ಅಮೂಲ್ಯ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯನ್ನು ಸ್ಮರಿಸುವ ದಿನವಾಗಿ ಈ ದಿನವನ್ನು ಕರುನಾಡಿನಾದ್ಯಂತ ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಅಗಲಿದ ಆ ಮಹಾ ಚೈತನ್ಯಕ್ಕೆ ಧನ್ಯತಾ ನಮನವನ್ನು ಸಲ್ಲಿಸಲಾಗುತ್ತದೆ.!  ಬಸವಣ್ಣನವರ ಆದರ್ಶಗಳನ್ನು ನುಡಿಗಳಲ್ಲಿ ಮಾತ್ರವಲ್ಲದೆ ನಡೆಯಲ್ಲಿ ಅನುಸರಿಸಿದ ಡಾ. ಶಿವಕುಮಾರ ಸ್ವಾಮೀಜಿ ಅವರು ಒಬ್ಬ ವ್ಯಕ್ತಿಯಾಗಿ ಅಲ್ಲ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ನಿಂತು ತಮ್ಮ ಜೀವನ ಮತ್ತು ಅವರ ಸೇವಾ ತತ್ತ್ವದ ಮೂಲಕ ದಾಸೋಹ ಎಂಬ ಪದಕ್ಕೆ ಜೀವಂತ ರೂಪ ನೀಡಿದವರು.! ಸಿದ್ಧಗಂಗಾ ಮಠದ ಮೂಲಕ “ಹಸಿದವನಿಗೆ ಅನ್ನ ಕೊಡುವುದೇ ದೇವರ ಪೂಜೆ” ಎಂಬ ನಂಬಿಕೆಯನ್ನು ಕಾರ್ಯರೂಪಕ್ಕೆ ತಂದು ಜಾತಿ, ಧರ್ಮ, ಭಾಷೆ ಎಂಬ ಯಾವುದೇ ಭೇದವಿಲ್ಲದೆ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡಿದ ಅವರ ಬದುಕಿನ ಮೂಲಕ ನಿಜವಾದ ದಾಸೋಹದ ಉದಾಹರಣೆ ಆದವರು.! ಹಸಿದವನು ಕಲಿಯಲಾರನು ಎಂಬ ಅಸಲಿ ಸತ್ಯವನ್ನು ಅರಿತಿದ್ದ ಸ್ವಾಮೀಜಿಯವರು, ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹವನ್ನೂ ಸಮಾಜಕ್ಕೆ ನೀಡಿದರು. ಅವರ ದಾಸೋಹ ಕೇವಲ ಆಹಾರಕ್ಕೆ ಸೀಮಿತವಾಗಿರಲಿಲ್ಲ. ಅದು ಮಾನವೀಯತೆ, ಶಿಸ್ತು, ಶ್ರಮ ಮತ್ತು ಸೇವೆಯ ಮೌಲ್ಯಗಳನ್ನು ಬೆಳೆಸುವ ಮಹಾ ಚಳವಳಿ ಆಗಿತ್ತು. ಸರಳ ಜೀವನ, ಉನ್ನತ ಚಿಂತನೆ ಅವರ ವ್ಯಕ್ತಿತ್ವದ ಆಭರಣವಾಗಿತ್ತು. ಶತಮಾನ ಪೂರ್ತಿ ಬದುಕಿ ಕೊನೆಯವರೆಗೂ ಸಮಾಜದ ಬಗ್ಗೆ ಕಾಳಜಿ ತೋರಿದ ಅವರ ಜೀವನವೇ ಸಮಾಜಕ್ಕೆ ಒಂದು ಪಾಠ.! ಡಾ. ಶಿವಕುಮಾರ ಸ್ವಾಮೀಜಿಯವರು ಹೇಳುತ್ತಿದ್ದಂತೆ, “ಸಮಾಜಕ್ಕೆ ಒಳಿತನ್ನು ಕೊಡುವುದೇ ಜೀವನದ ಅರ್ಥ” ಈ ಮಾತು ಅವರು ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಅನುಸರಿಸಿದ ಫಲ ಸಿದ್ಧಗಂಗಾ ಮಠವು ಕೇವಲ ಒಂದು ಧಾರ್ಮಿಕ ಕೇಂದ್ರವಾಗಿರದೆ, ಲಕ್ಷಾಂತರ ಬಡಮಕ್ಕಳ ಬದುಕನ್ನು ಬೆಳಗಿದ ವಿದ್ಯಾಲಯವಾಗಿ ರೂಪುಗೊಂಡಿತು. ಅವರ ಆಶ್ರಯದಲ್ಲಿ ಬೆಳೆದ ಅನೇಕ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಮತ್ತೆ ಸಮಾಜಕ್ಕೇ ಸೇವೆ ಸಲ್ಲಿಸುತ್ತಿದ್ದಾರೆ.! ಸ್ವಾಮೀಜಿಯವರ ದಾಸೋಹದ ಚಿಂತನೆ ಇಂದಿನ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿದೆ. ಹೆಚ್ಚುತ್ತಿರುವ ಅಸಮಾನತೆ, ಬಡತನ ಮತ್ತು ನಿರ್ಲಕ್ಷ್ಯದ ನಡುವೆ, ಅವರ ಸೇವಾ ಮಾದರಿ ನಮಗೆ ದಾರಿದೀಪವಾಗಿದೆ. ದಾಸೋಹ ಎಂದರೆ ಕೇವಲ ದೊಡ್ಡ ಕಾರ್ಯಗಳೇ ಬೇಕೆಂದಿಲ್ಲ ಒಬ್ಬ ಹಸಿದವನಿಗೆ ಒಂದು ಊಟ,ಒಬ್ಬ ನಿರಾಶ್ರಿತನಿಗೆ ಒಂದು ನೆರವು, ಒಬ್ಬ ಮಗುವಿಗೆ ಒಂದು ಅವಕಾಶ ನೀಡುವುದೂ ದಾಸೋಹವೇ ಆಗಿದೆ. ಖಾವಿ ವಸ್ತ್ರವನ್ನು ಧರಿಸುವುದು ಕೇವಲ ಒಂದು ಬಣ್ಣದ ಆಯ್ಕೆಯಲ್ಲ ಅದು ತ್ಯಾಗ, ಶಿಸ್ತು ಮತ್ತು ಸಮಾಜಸೇವೆಯ ಸಂಕಲ್ಪದ ಸಂಕೇತ. ಡಾ. ಶಿವಕುಮಾರ ಸ್ವಾಮೀಜಿಯವರು ಖಾವಿ ತೊಟ್ಟ ಕ್ಷಣದಿಂದಲೇ ತಮ್ಮ ಬದುಕನ್ನು ಸಂಪೂರ್ಣವಾಗಿ ಸಮಾಜಕ್ಕೆ ಅರ್ಪಿಸಿದರು. ವೈಯಕ್ತಿಕ ಸುಖ ಸೌಕರ್ಯಗಳನ್ನು ತ್ಯಜಿಸಿ, ಧರ್ಮವನ್ನು ಕೇವಲ ಪೂಜೆ, ಪಠಣಕ್ಕೆ ಸೀಮಿತಗೊಳಿಸದೆ, ಅದನ್ನು ಮಾನವಸೇವೆಯ ಮಾರ್ಗವಾಗಿ ರೂಪಿಸಿದರು. ಸ್ವಾಮೀಜಿಯವರ ಧಾರ್ಮಿಕತೆ ಹೊರಂಗಣ ಆಚರಣೆಗಳಲ್ಲಿ ಅಲ್ಲ, ಒಳಗಿನ ಕಾರ್ಯಕ್ಷಮತೆ ಮತ್ತು ಸತ್ಕರ್ಮದಲ್ಲಿ ಕಾಣಿಸಿಕೊಂಡಿತು. “ಹಸಿವಿಗೆ ಅನ್ನವೇ ಮೊದಲ ಔಷಧ”ಎಂಬ ನಂಬಿಕೆಯನ್ನು ಅವರು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡರು. ಖಾವಿ ವಸ್ತ್ರ ಧರಿಸಿ ಅವರು ಸಮಾಜಕ್ಕೆ ನೀಡಿದ ಮೊದಲ ಬೆಳಕು ಎಂದರೆ ಅನ್ನ ದಾಸೋಹ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಸಂಕಲ್ಪದೊಂದಿಗೆ, ಸಿದ್ಧಗಂಗಾ ಮಠವನ್ನು ಅನ್ನದ ಮಂದಿರವನ್ನಾಗಿ ರೂಪಿಸಿದರು. ಸಾಧನೆಗೆ, ಶ್ರೀಮಂತಿಕೆ ಡಿಗ್ರಿಗಳೇ ಬೇಕೆಂದೇನಿಲ್ಲ ನಿಸ್ವಾರ್ಥ ಸೇವಾಮನೋಭಾವ ಇದ್ದರೆ ಸಾಕೆಂದು, ಖಾವಿಗೆ ಅದರ್ಶರಾಗಿ ಬಾಳಿ ಬದುಕಿ ತೋರಿದವರು, ಇಂದಿನ ಯುವಪೀಳಿಗೆ ಸ್ವಾಮೀಜಿಯವರ ಜೀವನದಿಂದ ಪ್ರೇರಣೆ ಪಡೆದು, ಸ್ವಾರ್ಥವನ್ನು ಬದಿಗಿಟ್ಟು ಸಮಾಜಮುಖಿ ಚಿಂತನೆ ಬೆಳೆಸಬೇಕು. ತ್ಯಾಗ, ಶಿಸ್ತು ಮತ್ತು ಶ್ರಮದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಕನಸಿನ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.! ದಾಸೋಹ ದಿನದಂದು ಡಾ. ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಕೇವಲ ಮಾತಿನ ಮಟ್ಟಕ್ಕೆ ಸೀಮಿತವಾಗದೇ, ನಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿಸಬೇಕು. ಅವರ ದಾಸೋಹದ ದೀಪವನ್ನು ನಮ್ಮ ಮನಗಳಲ್ಲಿ ಹೊತ್ತಿಸಿಕೊಂಡು ಪುಣ್ಯಸ್ಮರಣೆ ಮಾಡುವುದರ ಮೂಲಕ, ಅವರ ತತ್ತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಹಸಿದವರಿಗೆ ಅನ್ನ ನೀಡುವುದು ಅಗತ್ಯ ಇರುವವರಿಗೆ ಸಹಾಯ ಮಾಡುವುದು, ಶಿಕ್ಷಣಕ್ಕೆ ಬೆಂಬಲ ನೀಡುವುದು ಇವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ.! *ಬರಹ : ಗೀತಾಂಜಲಿ ಎನ್.ಎಮ್* ಸೋಮವಾರಪೇಟೆ*

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.