
ಸೋಮವಾರಪೇಟೆ ಜ.21 NEWS DESK : ಎಸ್.ಎಸ್.ಎಲ್.ಸಿ ಪರೀಕ್ಷೆ ಶೈಕ್ಷಣಿಕ ಜೀವನದ ಮಹತ್ತರಘಟ್ಟ ಎಂದು ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು. ಅನಘ ಫೌಂಡೇಶನ್, ತಪೋಕ್ಷೇತ್ರ ಮನೆಹಳ್ಳಿ ಮಠ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರಸಂತೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನಾನು ಮತ್ತು ಪರೀಕ್ಷೆ ಎಂಬ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಚಿನ್ನದಂತಹ ಜೀವನ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು ಒಂದನೇ ತರಗತಿಯಿಂದ 10ನೆ ತರಗತಿಯವರೆಗೆ ಒಂದು ಹಂತದ ಶಿಕ್ಷಣ ವ್ಯವಸ್ಥೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಮ್ಮ ವಿದ್ಯಾರ್ಥಿ ಜೀವನ ಬದಲಾವಣೆಯ ಮಹತ್ತರ ಘಟ್ಟವಾಗಿದೆ ಆದ್ದರಿಂದ ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯಿಂದ ಇರಬೇಕೆಂದರು. ವಿದ್ಯಾರ್ಥಿಗಳು ತಂದೆ-ತಾಯಿಯರ ಗುರುಗಳ ಕನಸನ್ನು ನನಸು ಮಾಡಲು ಶಪಥ ಮಾಡಬೇಕು. ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಉದ್ದೇಶ ಉತ್ತಮ ಫಲಿತಾಂಶವನ್ನು ಮತ್ತು ಉತ್ತಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದೇ ಆಗಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಕಡೆಗೆ ಮಾತ್ರ ಗಮನವನ್ನು ಹರಿಸಬೇಕು. ಇಂದು ಕಷ್ಟಪಟ್ಟರೆ ನಾಳೆ ಸುಖವಾದ ಬದುಕನ್ನ ಬದುಕಬಹುದು ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅನಘ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಊ,ರ, ನಾಗೇಶ್., ಅಬ್ದುಲ್ ರಬ್., ಜಮೀರ್ ಅಹಮದ್, ಸಿ ಆರ್ ಪಿ ಗಳಾದ ದಿನೇಶ್ ಮತ್ತು ರವೀಶ್ ರವ ರುಗಳನ್ನು ಗೌರವಿಸಲಾಯಿತು. ಪತ್ರಕರ್ತ ಎಸ್.ಮಹೇಶ್, ಶಿಕ್ಷಕರಾದ ಕೆ ಪಿ ಜಯಕುಮಾರ್ ರವರು ಎಲ್ಲ ಕಾರ್ಯಕ್ರಮ ದ ಜವಾಬ್ದಾರಿ ನಿರ್ವಹಿಸಿದರು. ನಾನು ಮತ್ತು ಪರೀಕ್ಷೆ ಕಾರ್ಯಾಗಾರದಲ್ಲಿ ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ಹೋಬಳಿಯ ವಿವಿಧ ಪ್ರೌಢಶಾಲೆಗಳ 600 ವಿದ್ಯಾರ್ಥಿಗಳು ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡಿಸಿಕೊಂಡರು.









