
ಸುಂಟಿಕೊಪ್ಪ ಜ.22 NEWS DESK : ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಛಾಪಾ ಕಾಗದ (ಸ್ಟ್ಯಾಂಪ್ ಪೇಪರ್) ಮಾರಾಟ ಕೇಂದ್ರವನ್ನು ಸಂಘದ ಅಧ್ಯಕ್ಷರಾದ ನಾಪಂಡ ಉಮೇಶ್ ಉತ್ತಪ್ಪ ಉದ್ಘಾಟಿಸಿದರು. ಮಾದಾಪುರ ಹೋಬಳಿ ಕೇಂದ್ರದಲ್ಲಿ ಕೃಷಿಕರಿಗೆ ಸಾಮಾನ್ಯ ಜನರಿಗೆ ಉಪಯೋಗಕ್ಕೆ ಬೇಕಾಗಿದ್ದ ಛಾಪ ಕಾಗದಕ್ಕಾಗಿ ಹತ್ತಾರು ಕಿ.ಮೀ. ದೂರ ಕ್ರಮಿಸಿ ತರಬೇಕಾಗಿದ್ದು ಇಲ್ಲಿ ಜನತೆಯ ಸಂಕಷ್ಟವನ್ನು ಮನಗಂಡ ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದವರು ಛಾಪ ಕಾಗದ (ಸ್ಟ್ಯಾಂಪ್ ಪೇಪರ್) ಮಾರಾಟ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಪವಿತ್ರ ಹರೀಶ್, ನಿರ್ದೇಶಕರುಗಳಾದ ಬಿ.ಐ.ಮೊಣ್ಣಪ್ಪ, ಪಿ.ಪಿ.ತಿಲಕ್‍ಕುಮಾರ್, ಸಿ.ಎ.ತಮ್ಮಯ್ಯ, ಕುಟ್ಟಂಡ ಕುಟ್ಟಪ್ಪ, ಮುಕ್ಕಾಟಿರ ತಿಮ್ಮಯ್ಯ, ದೇಚಮ್ಮ ಸೋನು,ಕೆ.ಎ.ಲತೀಫ್, ನಾಗಂಡ ಭವಿನ್, ಗಿರೀಶ್ ಎಂ.ಆರ್., ಹೆಚ್.ಇ.ಭೀಮಯ್ಯ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಕಾವೇರಪ್ಪ ಉಪಸ್ಥಿತರಿದ್ದರು.









