Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*
  • *ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*
  • *ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*
  • *ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*
  • *ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*
  • *ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*
  • *ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*
  • *ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಶಾಂತಳ್ಳಿಯಲ್ಲಿ ಹಿಂದೂ ಸಂಗಮ : ಕೇವಲ ಹಣ ಗಳಿಸುವ ಶಿಕ್ಷಣ ನೀಡಿದರಷ್ಟೇ ಸಾಲದು, ಸಂಸ್ಕಾರಯುತ ಶಿಕ್ಷಣ ನೀಡಬೇಕು*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಶಾಂತಳ್ಳಿಯಲ್ಲಿ ಹಿಂದೂ ಸಂಗಮ : ಕೇವಲ ಹಣ ಗಳಿಸುವ ಶಿಕ್ಷಣ ನೀಡಿದರಷ್ಟೇ ಸಾಲದು, ಸಂಸ್ಕಾರಯುತ ಶಿಕ್ಷಣ ನೀಡಬೇಕು*

ಫೆಬ್ರವರಿ 4, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸೋಮವಾರಪೇಟೆ NEWS DESK ಫೆ.4 : ಸನಾತನ ಹಿಂದೂ ಧರ್ಮ-ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು. ಹಾಗಾದಾಗ ಹಲವಷ್ಟು ಸಮಸ್ಯೆಗಳು ತನ್ನಿಂತಾನೇ ಬಗೆಹರಿಯುತ್ತವೆ. ಮನೆ ಹಾಗೂ ಮನಗಳಲ್ಲಿ ಧರ್ಮ ಇರಬೇಕು. ಎಲ್ಲರೂ ಸಂಸ್ಕಾರವಂತರಾಗಿ ಬಾಳಬೇಕು ಎಂದು ಯಸಳೂರು ತೆಂಕಲಗೋಡು ಮಠಾಧೀಶರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ವತಿಯಿಂದ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಮುಂಭಾಗ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಶ್ವದಲ್ಲಿಯೇ ಭಾರತಕ್ಕೆ ವಿಶೇಷ ಸ್ಥಾನಮಾನವಿದೆ. ಪವಿತ್ರವಾದ ನಾಡಿನಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಕಣಕಣದಲ್ಲೂ ಶಕ್ತಿ, ಭಕ್ತಿ, ಧರ್ಮವನ್ನು ಈ ಮಣ್ಣು ಒಳಗೊಂಡಿದೆ. ಇತರ ಎಲ್ಲಾ ಧರ್ಮದವರಿಗೆ ಜೀವಿಸಲು ಸಾಕಷ್ಟು ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ತಮ್ಮ ಧರ್ಮದ ಅನುಸಾರ ಜೀವನ ನಡೆಸಲು ಇರುವುದೊಂದೇ ಹಿಂದೂಸ್ಥಾನ. ಇದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಮನೆ, ಆಸ್ತಿಗಳನ್ನು ಭದ್ರಗೊಳಿಸುವ ನಾವುಗಳು ತಾಯಿ ಭಾರತಾಂಭೆಯನ್ನೂ ರಕ್ಷಿಸಬೇಕು. ದೇಶ, ಧರ್ಮ ರಕ್ಷಣೆಯಾದರೆ ಮಾತ್ರ ನಾವುಗಳು ಬದುಕಲು ಸಾಧ್ಯ ಎಂಬುದನ್ನು ಮನಗಾಣಬೇಕು. ಈ ನಿಟ್ಟಿನಲ್ಲಿ ಆರ್.ಎಸ್.ಎಸ್., ಭಜರಂಗದಳ, ವಿಶ್ವಹಿಂದೂ ಪರಿಷತ್ ನಿರಂತರ ಧರ್ಮ ಜಾಗೃತಿ ಮೂಡಿಸುತ್ತಿದೆ. ವೈಯಕ್ತಿಕ ಬೆಳವಣಿಗೆಗೆ ಎಲ್ಲರೂ ಸಂಘಟನೆ ಕಟ್ಟುತ್ತಾರೆ. ಆದರೆ ರಾಷ್ಟ್ರದ ಹಿತಕ್ಕಾಗಿ  ದುಡಿಯುವ ಏಕೈಕ ಸಂಘಟನೆಯೆಂದರೆ ಅದು ಆರ್.ಎಸ್.ಎಸ್. ಎಂದು ಹೇಳಿದರು. ಆರ್‌ಎಸ್‌ಎಸ್ ಸಂಘಟನೆಯು ಸೇವೆಯ ಮೂಲಕವೇ ಸಮಾಜಕ್ಕೆ ಅರ್ಪಣೆಯಾಗಿದೆ. ಸಮಾಜಕ್ಕೆ ತೊಂದರೆಯಾದಾಗ ತಕ್ಷಣ ಸ್ಪಂದಿಸುವುದು ಸಂಘ ಮಾತ್ರ ಎಂದ ಅವರು, ಎಲ್ಲರೂ ಆಚರಣೆಯಲ್ಲಿ ಧರ್ಮವನ್ನು ಅಳವಡಿಸಿಕೊಂಡರೆ ಮಾತ್ರ ಧರ್ಮ ಉಳಿಯುತ್ತದೆ. ಹಿರಿಯರು ಧರ್ಮ ಸಂರಕ್ಷಣೆ ಮಾಡಿ ನಮಗೆ ನೀಡಿದ್ದಾರೆ. ಸಂಸ್ಕಾರದ ಬೇರು ಆಳವಾಗಿ ನೆಲೆಯೂರಿದರೆ ಮಾತ್ರ ಸದೃಢ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು. ಯುವ ಜನಾಂಗ ದೇಶಪ್ರೇಮ, ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ರಾಷ್ಟçಕ್ಕಾಗಿ ಬದುಕುವ ಸಂಕಲ್ಪ ತೊಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಕೇವಲ ಹಣ ಗಳಿಸುವ ಶಿಕ್ಷಣ ನೀಡಿದರಷ್ಟೇ ಸಾಲದು, ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಕಿವಿಮಾತು ನುಡಿದರು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಬಾಷಣ ಮಾಡಿದ ಮಂಗಳೂರು ವಿಭಾಗ ಸಹ ವ್ಯವಸ್ಥಾ ಪ್ರಮುಖ್ ಸ್ವಾಮಿಪ್ರಸಾದ್ ಅವರು, ರಾಷ್ಟ್ರ, ಧರ್ಮ, ಸಂಸ್ಕೃತಿ ರಕ್ಷಣೆಯಲ್ಲಿ ನಮ್ಮ ಪಾತ್ರ ಏನು? ಎಂಬುದರ ಬಗ್ಗೆ ಜಾಗೃತಗೊಳ್ಳಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶದಲ್ಲಿ 80 ಸಾವಿರ ಕಡೆಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದೆ ಎಂದರು. ಹಿಂದುತ್ವದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ತೆಗೆಯಬೇಕು. ಎಲ್ಲರನ್ನೂ ಒಟ್ಟು ಸೇರಿಸಿ ಹಿಂದೂ ರಾಷ್ಟ್ರ ಆಗಬೇಕು. ಯಾರನ್ನೂ ಇಲ್ಲಿಂದ ಓಡಿಸುವ ಅಗತ್ಯವಿಲ್ಲ. ಸಂಸ್ಕೃತಿಯ ಬಗ್ಗೆ ಶ್ರದ್ಧೆ, ಹೆಮ್ಮೆ ಇರಬೇಕು. ದೇಶದಲ್ಲಿ ಹುಟ್ಟಿರುವ ಎಲ್ಲರೂ ಹಿಂದೂಗಳು ಎಂಬುದು ಸಂಘದ ನಿಲುವು. ಈ ಮಣ್ಣಿಗೆ ಗೌರವ, ಶ್ರದ್ಧೆ ಹೊಂದಬೇಕು ಎಂದು ಹೇಳಿದರು. ಹಿಂದೂ  ಕುಟುಂಬಗಳು ಮೌಲ್ಯವನ್ನು ಕಳೆದುಕೊಳ್ಳಬಾರದು. ಪರಿಸರ ಸಂರಕ್ಷಣೆ, ಸಾಮರಸ್ಯ, ನಾಗರಿಕ ಶಿಷ್ಟಾಚಾರ, ಸ್ವದೇಶೀ ಭಾವ ಜಾಗೃತವಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು 100ರ ಸಂಭ್ರಮದಲ್ಲಿ ಸಮಾಜದ ಸುಧಾರಣೆಗೆ ಇನ್ನಷ್ಟು ವೇಗ ನೀಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಕಾಳಪ್ಪ ವಹಿಸಿದ್ದರು. ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಗೌರವಾಧ್ಯಕ್ಷ ಎಸ್.ಜಿ. ಮೇದಪ್ಪ, ಅಧ್ಯಕ್ಷ ಲಿಂಗರಾಜು ಇದ್ದರು. ಇದಕ್ಕೂ ಮುನ್ನ ತಲ್ತರೆ ಜಂಕ್ಷನ್‌ನಿAದ ಭಾರತ ಮಾತೆಯ ಭಾವಚಿತ್ರವನ್ನು ಅಳವಡಿಸಿದ್ದ ಅಲಂಕೃತ ವಾಹನದಲ್ಲಿ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಹಿಂದೂ ಸಮಾಜ ಬಾಂಧವರು ಕೇಸರಿ ಶಾಲು ಧರಿಸಿ ಭಾರತ್ ಮಾತಾಕೀ ಜೈ ಎಂಬ ಜಯಘೋಷದೊಂದಿಗೆ ಹೆಜ್ಜೆ ಹಾಕಿದರೆ, ಪುಟಾಣಿ ಮಕ್ಕಳು ಶಿವಾಜಿ, ಸುಭಾಷ್ ಚಂದ್ರಬೋಸ್, ಒನಕೆ ಓಬವ್ವ, ವಿವೇಕಾನಂದ, ಭಗತ್ ಸಿಂಗ್, ಕಿತ್ತೂರು ರಾಣಿ ಚನ್ನಮ್ಮ, ಶ್ರೀರಾಮ, ಕೃಷ್ಣ, ಆಂಜನೇಯನ ಛದ್ಮವೇಷ ಧರಿಸಿ ಸಂಭ್ರಮದಿಂದ ಸಾಗಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಆ.28 : ಮುಂಬರಲಿರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ…

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*

ಆಗಷ್ಟ್ 28, 2026

*ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*

ಆಗಷ್ಟ್ 27, 2026

*ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*

ಆಗಷ್ಟ್ 27, 2026

*ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*

ಆಗಷ್ಟ್ 27, 2026

*ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*

ಆಗಷ್ಟ್ 27, 2026

*ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.