Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ : ನಗರಸಭೆ ಹಾಗೂ ನಗರ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ*
  • *ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ಸಿದ್ದರಾಜು ಬೆಳ್ಳಯ್ಯರಿಗೆ ದ್ವಿತೀಯ ಸ್ಥಾನ*
  • *ಅಗ್ನಿ ಅವಘಡ : ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಡಿಕೇರಿಯಲ್ಲಿ ಜಾಗೃತಿ ಅಣಕು ಪ್ರದರ್ಶನ*
  • *ಕೊಡಗು : ಆದಿವಾಸಿಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರವಹಿಸಿ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ*
  • *ಎಸ್.ಜಾನಕಿಯವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ*
  • *ಬರಪೊಳೆಯಲ್ಲಿ ಪತ್ರಕರ್ತರ ಸಾಹಸಮಯ ಜಲಕ್ರೀಡೆ*
  • *ಬಿಳಿಗೇರಿಯಲ್ಲಿ ಜು.18 ಮತ್ತು 19 ರಂದು ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ : ನೋಂದಣಿಗೆ ಜು.17 ಕೊನೆಯ ದಿನ*
  • *ಚಂದನಕೇರೆ ಹಾಡಿ ರಸ್ತೆ ಕಾಮಗಾರಿಗೆ ಚಾಲನೆ*
  • *ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*
  • *ಎಸ್.ವಡ್ಡಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಜನಸ್ನೇಹಿ ಶಾಸಕರ ಕುರಿತು ಅಪಸ್ವರ ಸರಿಯಲ್ಲ : ಎಂ.ಎ.ಉಸ್ಮಾನ್ ಅಸಮಾಧಾನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಜನಸ್ನೇಹಿ ಶಾಸಕರ ಕುರಿತು ಅಪಸ್ವರ ಸರಿಯಲ್ಲ : ಎಂ.ಎ.ಉಸ್ಮಾನ್ ಅಸಮಾಧಾನ*

ಫೆಬ್ರವರಿ 5, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಫೆ.5 : ಮಡಿಕೇರಿ ಕ್ಷೇತ್ರದ ಜನಸ್ನೇಹಿ ಶಾಸಕ ಡಾ.ಮಂತರ್ ಗೌಡ ಅವರು ಇತ್ತೀಚೆಗೆ ಹಿಂದೂ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ವಿಚಾರವನ್ನು ಕೆಲವರು ದೊಡ್ಡದು ಮಾಡಿ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಸರಿಯಲ್ಲವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿಧತೆಯಲ್ಲಿ ಏಕತೆ ಮತ್ತು ಸಮಾನತೆಯ ಆಶಯಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ ಡಾ.ಮಂತರ್ ಗೌಡ ಅವರು ಸರ್ವಧರ್ಮೀಯರ ನೆಚ್ಚಿನ ಜನಪ್ರತಿನಿಧಿಯಾಗಿದ್ದಾರೆ. ಶಾಸಕರಾದವರು ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಅವರು ಪ್ರತಿಯೊಬ್ಬರನ್ನೂ ಪ್ರತಿನಿಧಿಸಬೇಕಾಗುತ್ತದೆ, ಆ ಕೆಲಸವನ್ನು ಮಡಿಕೇರಿ ಶಾಸಕರು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಓಲೈಕೆ ರಾಜಕಾರಣಕ್ಕಾಗಿ ತಮ್ಮತನವನ್ನು ಬಿಟ್ಟು ಮುಖವಾಡದ ರಾಜಕಾರಣವನ್ನು ಡಾ.ಮಂತರ್ ಗೌಡ ಅವರು ಎಂದಿಗೂ ಮಾಡಿಲ್ಲ. ಅಭಿವೃದ್ಧಿ ಕಾರ್ಯಗಳಲ್ಲಿ ಕೂಡ ತಾರತಮ್ಯ ಮಾಡದೆ ಪ್ರತಿಯೊಂದು ಜನಾಂಗಕ್ಕೂ ಮತ್ತು ಪ್ರತಿಯೊಂದು ಕ್ಷೇತ್ರಕ್ಕೂ ಸಮಾನ ಆದ್ಯತೆ ನೀಡುತ್ತಿದ್ದಾರೆ. ಮಡಿಕೇರಿ ಶಾಸಕರ ಸರಳತೆ ಮತ್ತು ಘನತೆಯ ಕುರಿತು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅಪಾರ ಅಭಿಮಾನ ಹೊಂದಿದ್ದಾರೆ. ಇದನ್ನು ಸಹಿಸದ ಕೆಲವು ಪಟ್ಟಭದ್ರಹಿತಾಸಕ್ತಿಗಳು ಮೊಸರನ್ನದಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರ ಗೆಲುವಿನ ನಂತರ ಕೊಡಗು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದಾರೆ, ಎಲ್ಲಾ ಧರ್ಮದವರೂ ಒಗ್ಗೂಡಿ ಮುನ್ನಡೆಯುತ್ತಿದ್ದಾರೆ. ಇದಕ್ಕೆ ಶಾಸಕರುಗಳ ಇಚ್ಛಾಶಕ್ತಿ ಮತ್ತು ಸರ್ವಧರ್ಮೀಯರೊಂದಿಗೆ ಸಮಾನ ಮನೋಭಾವದಲ್ಲಿ ಬೆರೆಯುತ್ತಿರುವುದೇ ಕಾರಣವಾಗಿದೆ. ಕುಶಾಲನಗರದ ಮುಖ್ಯ ಬೀದಿಯಲ್ಲಿ ಹಿಂದೂ ಶೋಭಾಯಾತ್ರೆ ಸಾಗುತ್ತಿದ್ದಾಗ ಅದೇ ಮಾರ್ಗದಲ್ಲಿ ಪ್ರಯಾಣ ಬೆಳೆಸುತ್ತಿದ್ದ ಶಾಸಕ ಡಾ.ಮಂತರ್ ಗೌಡ ಅವರು ಕಾರಿನಿಂದಿಳಿದು ಶುಭ ಹಾರೈಸಿ, ಹಿರಿಯರಿಂದ ಆಶೀರ್ವಾದ ಪಡೆದಿರುವುದು ಕೊಡಗಿನ ಸಂಸ್ಕೃತಿಯ ಒಂದು ಭಾಗವಾಗಿದೆ.
ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ತಕ್ಷಣ ಶಾಸಕರು ದೊಡ್ಡ ತಪ್ಪು ಮಾಡಿದ್ದಾರೆ ಎಂದು ಪ್ರತಿಬಿಂಬಿಸುವ ಮೂಲಕ ಸಣ್ಣತನವನ್ನು ಕೆಲವರು ಪ್ರದರ್ಶಿಸುತ್ತಿರುವುದು ಸರಿಯಲ್ಲ ಮತ್ತು ರಾಜಕೀಯ ಲಾಭ, ನಷ್ಟದ ಕುರಿತು ಲೆಕ್ಕಾಚಾರವೂ ಅರ್ಥಹೀನವೆಂದು ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪಾರ ಅಭಿವೃದ್ಧಿ ಕಾರ್ಯ ಮತ್ತು ಜನಸ್ನೇಹಿ ಗುಣದ ಮೂಲಕ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುತ್ತಾ ಮುನ್ನಡೆಯುತ್ತಿರುವ ಡಾ.ಮಂತರ್ ಗೌಡ ಅವರ ಕೈಬಲ ಪಡಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ : ನಗರಸಭೆ ಹಾಗೂ ನಗರ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ*

ಜುಲೈ 15, 2026

*ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ಸಿದ್ದರಾಜು ಬೆಳ್ಳಯ್ಯರಿಗೆ ದ್ವಿತೀಯ ಸ್ಥಾನ*

ಜುಲೈ 15, 2026

*ಅಗ್ನಿ ಅವಘಡ : ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಡಿಕೇರಿಯಲ್ಲಿ ಜಾಗೃತಿ ಅಣಕು ಪ್ರದರ್ಶನ*

ಜುಲೈ 15, 2026

*ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ಸಿದ್ದರಾಜು ಬೆಳ್ಳಯ್ಯರಿಗೆ ದ್ವಿತೀಯ ಸ್ಥಾನ*

ಜುಲೈ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಜು.15 NEWS DESK : ಮೈಸೂರು ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಇವರು ವಿಚಾರವಾದಿ ಪ್ರೊ.ಕೆ.ರಾಮದಾಸ್ ಅವರ ನೆನಪಿನಲ್ಲಿ ಇತ್ತೀಚೆಗೆ…

*ಅಗ್ನಿ ಅವಘಡ : ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಡಿಕೇರಿಯಲ್ಲಿ ಜಾಗೃತಿ ಅಣಕು ಪ್ರದರ್ಶನ*

ಜುಲೈ 15, 2026

*ಕೊಡಗು : ಆದಿವಾಸಿಗಳು ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಎಚ್ಚರವಹಿಸಿ : ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ*

ಜುಲೈ 15, 2026

*ಎಸ್.ಜಾನಕಿಯವರಿಗೆ ‘ಸಮರ್ಥ ಕನ್ನಡಿಗರು’ ಕೊಡಗು ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ*

ಜುಲೈ 15, 2026

*ಬರಪೊಳೆಯಲ್ಲಿ ಪತ್ರಕರ್ತರ ಸಾಹಸಮಯ ಜಲಕ್ರೀಡೆ*

ಜುಲೈ 15, 2026

*ಬಿಳಿಗೇರಿಯಲ್ಲಿ ಜು.18 ಮತ್ತು 19 ರಂದು ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ : ನೋಂದಣಿಗೆ ಜು.17 ಕೊನೆಯ ದಿನ*

ಜುಲೈ 15, 2026

*ಚಂದನಕೇರೆ ಹಾಡಿ ರಸ್ತೆ ಕಾಮಗಾರಿಗೆ ಚಾಲನೆ*

ಜುಲೈ 15, 2026

*ಮಾನವ ವನ್ಯಜೀವಿಗಳ ಸಂಘರ್ಷ : ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಗ್ರಾಮಸ್ಥರೊಂದಿಗೆ ಶಾಸಕ ಡಾ.ಮಂತರ್ ಗೌಡ ಸಭೆ*

ಜುಲೈ 15, 2026

*ಎಸ್.ವಡ್ಡಳ್ಳಿ ಗ್ರಾಮದಲ್ಲಿ ಕ್ಷೇತ್ರೋತ್ಸವ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ*

ಜುಲೈ 15, 2026

*ಬಿ.ಕೆ.ಹರಿಪ್ರಸಾದ್ ರನ್ನು ಭೇಟಿಯಾದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಕುರಿತು ಚರ್ಚೆ*

ಜುಲೈ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.