Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*
  • *ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*
  • *ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*
  • *ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*
  • *ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*
  • *ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*
  • *ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*
  • *ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*
  • *ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*
  • *ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಂಭ್ರಮದಿಂದ ನಡೆದ ಸೋಮವಾರಪೇಟೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಂಭ್ರಮದಿಂದ ನಡೆದ ಸೋಮವಾರಪೇಟೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ*

ಫೆಬ್ರವರಿ 9, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಸೋಮವಾರಪೇಟೆ NEWS DESK ಫೆ.9 : ಸೋಮವಾರಪೇಟೆ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಗೂರು ಗ್ರಾಮದಲ್ಲಿ ಸೋಮವಾರ ನಡೆದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ 9 ಗಂಟೆಗೆ ಐಗೂರು ಕಬ್ಬಿಣ ಸೇತುವೆಯಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಸಾಹಿತಿ ಜಲಜಾ ಶೇಖರ್, ಕ.ಸಾ.ಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಅವರುಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಸಾಂಪ್ರದಾಯಿಕ ವಾದ್ಯಗಳು, ಜನಪದ ಕಲಾವಿದರ ನೃತ್ಯ, ಕನ್ನಡ ಧ್ವಜಗಳು ಮತ್ತು ಘೋಷಣೆಗಳೊಂದಿಗೆ ನಡೆದ ಮೆರವಣಿಗೆಗೆ ಗ್ರಾಮಸ್ಥರು ಸಾಕ್ಷಿಯಾದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ ಕುಮಾರ್ ಮೆರವಣಿಗೆಯನ್ನು ಉದ್ಘಾಟಿಸಿದರು. ಕಬ್ಬಿಣ ಸೇತುವೆಯಿಂದ, ಯಡವಾರೆ ಮಾರ್ಗವಾಗಿ ಕಾಜೂರು ಸರ್ಕಾರಿ ಕಾಲೇಜು ಮೂಲಕ ಸಭಾಂಗಣದ ವರೆಗೆ ಮೆರವಣಿಗೆ ಸಾಗಿತು. ಬೆಳಿಗ್ಗೆ 6.30 ಗಂಟೆಗೆ ಶಾಲಾ ಮೈದಾನದಲ್ಲಿ ತಾಲ್ಲೂಕು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ಗಣ್ಯರ ಹೆಸರಿನ ನೆನಪಿನ ದ್ವಾರಗಳ ಉದ್ಘಾಟನೆ ನಡೆಯಿತು.  ದಿವಂಗತ ಕೆ.ಟಿ.ಪೂವಯ್ಯ ದಿ. ಗುಂಡಿಕುಟ್ಟಿ ಮಂಜುನಾಥಯ್ಯ, ದಿ.ಮಲ್ಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಎಂ.ಬಿ.ಸುರೇಶ್, ಎಂ.ಬಿ.ದೇವರಾಜ್, ಎಂ.ಎಲ್.ಅಪ್ಪಚ್ಚು, ಎಂ.ಎಲ್.ಕೃಪಾಲ್, ಸಂಪಿಗೆಕೊಲ್ಲಿ ದಿ.ಡಿ.ಎಸ್.ದೇವಯ್ಯ ಮತ್ತು ದಿ.ಪೂವಮ್ಮ, ಮೂಲೆಮಜಲು ದಿ.ಸೋಮಣ್ಣ ತಂಗಮ್ಮ, ದಿ.ನಂಗಾರು ಬೋಪಯ್ಯ ಸೀತಮ್ಮ ದಂಪತಿಗಳು ಹಾಗು ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪ, ದಿ.ಮುಕ್ಕಾಟಿರ ಮಾದಪ್ಪ ಹಾಗು ದಿ.ಮಚ್ಚಂಡ ನಾಚಪ್ಪ ದಿ.ಕಾಳೇರಮ್ಮೆರ ಅಯ್ಯಣ್ಣ, ನಾಣಯ್ಯ, ಗೋಪಾಲ ಮತ್ತು ಪಾಲಾಕ್ಷ, ದಿ.ಸಿ.ಕೆ.ಕಾಳಪ್ಪ, ದಿ.ಮಣವಟ್ಟಿರ ಅಪ್ಪಯ್ಯ ಅಕ್ಕವ್ವ ದಂಪತಿಗಳು ಹಾಗು ಅಯ್ಯಣ್ಣ, ಮಂದಣ್ಣ, ಬೆಳ್ಳಿಯಪ್ಪ ದಿ.ಎ.ಎಂ.ಬೆಳ್ಳಿಯಪ್ಪ, ದಿ.ಎ.ಕೆ.ಸುಬ್ಬಯ್ಯ ಮತ್ತು ದಿ ಈಶ್ವರಿ ಮೇದಪ್ಪ, ದಿ.ದಳವಾಯಿ ಹನುಮರಾಜೇ ಅರಸ್  ಅವರುಗಳ ನೆನಪಿನ ದ್ವಾರಗಳನ್ನು ಅವರುಗಳ ಕುಟುಂಬಸ್ಥರು ಉದ್ಘಾಟಿಸಿದರು. ಅರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರ ಹಾಗು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿದರು. ಸಾಹಿತಿ ಕೋವರ್‌ಕೊಲ್ಲಿ ದಿ. ಕರುಣಾಕರ ಪುಸ್ತಕ ಮಳಿಗೆಯನ್ನು  ಜಿ.ಕೆ.ವಿನೋದ್ ಉದ್ಘಾಟಿಸಿದರು.  ಸಮ್ಮೇಳನವನ್ನು ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದ ಮಾಜಿ ಅರಣ್ಯ ಸಚಿವ ಬಿ.ಎ.ಜೀವಿಜಯ, ನಮ್ಮ ಭಾಗದ ಪ್ರಕೃತಿ ಮಡಿಲಿನಲ್ಲಿ  ಇ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದರು. ಕವನ, ಕವಿತೆಗೆ, ಕೃತಿ, ಸಾಹಿತ್ಯ ಕ್ಕೆ ಕೊಡುಗೆ ನೀಡಿದ ಕವಿಗಳ ಬಗ್ಗೆ ಕಾರ್ಯಕ್ರಮದಲ್ಲಿ ನೆನಪಿಸಿದರು.
ಐಗೂರಿನ ಐಸಿರಿ ಎಂಬ ಸ್ಮರಣ ಸಂಚಿಕೆಯನ್ನು ಶಾಸಕ ಡಾ.ಮಂತರ್ ಗೌಡ ಹಾಗೂ ಪ್ರದಾನ ಸಂಪಾದಕ ಎಸ್.ಎಂ.ಚAಗಪ್ಪ ಅವರು ಬಿಡುಗಡೆ ಗೊಳಿಸಿದರು.      ನಂತರ ಮಾತನಾಡಿದ ಶಾಸಕ ಮಂತರ್ ಗೌಡ ಕನ್ನಡವನ್ನ ನಮ್ಮ ದೇಶದ ಜೊತೆ ಹೊರ ದೇಶದಲ್ಲೂ ಕನ್ನಡವನ್ನ ಇನ್ನಷ್ಟು ಬೆಳೆಸುವ ಕೆಲಸ ಮಾಡಬೇಕು, ಇನ್ನು ಹೆಚ್ಚು ಹೆಚ್ಚು ಕೃತಿ, ಸಾಹಿತ್ಯ ಗಳನ್ನ  ಬಿಡುಗಡೆ ಮಾಡುವಲ್ಲಿ ನಾವುಗಳು ತೊಡಗಿಸಿಕೊಳ್ಳಬೇಕು. ಯುವ ಪೀಳಿಗೆಗೆ ಕನ್ನಡದ ಬಗ್ಗೆ ಇ ರೀತಿಯ ಕಾರ್ಯಕ್ರಮ ಮಾಡುವ ಮೂಲಕ ಕನ್ನಡದ ಬಗ್ಗೆ ಇನ್ನಷ್ಟು ಅಭಿಮಾನ ಹಾಗೂ ಅರಿವು ಮೂಡುವಂತೆ ಮಾಡಬೇಕು. ಎಲ್ಲೆಲ್ಲೂ ಕನ್ನಡವನ್ನ ಬೆಳೆಸಿ ಕನ್ನಡವನ್ನೇ ಮಾತನಾಡಿ ಎಂದರು. ಕನ್ನಡ ಆಂಗ್ಲ ಭಾಷೆಗಿಂತ ಮುಂದಿದ್ದು, ಯಾರು ಕೂಡ ಮಾತೃ ಭಾಷೆಯನ್ನು ಮರೆಯಬಾರದು ಎಂದರು. ನಮ್ಮ ಭಾಗದಲ್ಲಿ ಹಲವು ಅಭಿರುದ್ಧಿ ಕೆಲಸ ಮಾಡಲು ನನಗೆ ಮನವಿ ಬಂದಿದ್ದು ಅದರಂತೆ ನಾನು ಪ್ರಮಾಣಿಕವಾಗಿ  ನನ್ನ ಅವಧಿಯಲ್ಲಿ ಕೆಲಸ ಮಾಡಲು ಮುಂದಾಗುವೆ ಎಂದರು.
ಸಮ್ಮೇಳನ ಅಧ್ಯಕ್ಷರಾದ ಜಲಜಾ ಶೇಖರ್ ಮಾತನಾಡಿ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ತಾಲೂಕಿನಾಧ್ಯತ ಸಾಹಿತ್ಯ, ಕೃಷಿಯಲ್ಲಿ  ತೊಡಗಿಕೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಗುರುತಿಸುತ್ತಿರುವುದು ಸ್ಫೂರ್ತಿ ತಂದಿಗೆ ಎಂದರು, ಕನ್ನಡ ಉಳಿವಿಗಾಗಿ ಪತ್ರಕರ್ತರು, ಪತ್ರಿಕೆಗಳು ಮುಂದಾಗುತ್ತಿವೆ. ಅದೇ ರೀತಿಯ ಚಲನಚಿತ್ರ, ಗಣಕಯಂತ್ರ, ಸಂಚಾರಿ ಮಾಧ್ಯಮದಲ್ಲಿ ಕನ್ನಡವನ್ನು ಕಡ್ಡಾಯ ಗೊಳಿಸಬೇಕು. ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಕನ್ನಡ ಭಾಷೆ ನಾವು ಮಾತನಾಡಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ, ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಅರಿವು, ಭಾಷಜ್ಞಾನ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಕನ್ನಡ ಪುಸ್ತಕದ ಪ್ರೀತಿ ಹೆಚ್ಚಾಗುವಂತೆ ಮಾಡಬೇಕು, ಮಕ್ಕಳು ಆನ್ಲೈನ್ ಗೇಮ್ ಅಂತಹ ಚಟಗಳನ್ನು ಬಿಟ್ಟು ಪುಸ್ತದ ಕಾವ್ಯ ಕಾದಂಬರಿಯತ್ತ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ನಂಗಾರು ಕೀರ್ತಿ ಪ್ರಸಾದ್, ಸಮ್ಮೇಳನ ಮಹಾ ಪೋಷಕ ಟಿ.ಪಿ.ರಮೇಶ್, ನಿಕಟಪೂರ್ವ ಅಧ್ಯಕ್ಷೆ ಶ.ಗ.ನಯನತಾರ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ಕೆ.ಪಿ.ಚಂದ್ರಕಲಾ, ಕೆ.ಎಂ.ಲೋಕೇಶ್, ರೇವತಿ ರಮೇಶ್, ಕಾರ್ಯದರ್ಶಿ ಜ್ಯೋತಿ ಅರುಣ್, ಎ.ಪಿ.ವೀರರಾಜು, ಕೆ.ಪಿ.ದಿನೇಶ್, ಜವರಪ್ಪ, ಮತ್ತಿತರ ಗಣ್ಯರು ಇದ್ದರು. ಗೀತಾ ಗಾಯನ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕರು ಹಾಡಿ ಜನಮೆಚ್ಚುಗೆ ಗಳಿಸಿದರು. ಮಧ್ಯಾಹ್ನ ನಂತರ ವಿವಿಧ ವಿಚಾರಗೋಷ್ಠಿಗಳು ನಡೆದವು. ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಡಿ.ಹರ್ಷ ‘ಗ್ರಾಮೀಣ ಜನರ ಜಾನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು,  ಸುಗ್ಗಿ ಹಬ್ಬವನ್ನು ಕೇವಲ ಹಸಿರು ಧಾನ್ಯಗಳ ಕೃತಜ್ಞತೆಗಾಗಿ ಅಚರಿಸುವ ಹಬ್ಬ ಮಾತ್ರ ಅಲ್ಲ. ಹಳ್ಳಿಗಳ ಸಾಮಾಜಿಕ, ಸಾಂಸೃತಿಕ ಬದುಕಿನ ವಿಶಿಷ್ಟತೆ ಎಂದು ಬಣ್ಣಿಸಿದರು. ಹಬ್ಬದ ನೃತ್ಯಗಳು, ಧಾರ್ಮಿಕ ಆಚರಣೆ, ಕಟ್ಟುನಿಟ್ಟು ಎಲ್ಲವೂ ಗ್ರಾಮೀಣ ಜನರ ಬದುಕಿನ ಅಂಗವಾಗಿದೆ ಎಂದು ಹೇಳಿದರು. ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರವಾಸೋಧ್ಯಮ ಬೆಳವಣಿಗೆ ಬಗ್ಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಉಪನ್ಯಾಸ ನೀಡಿದರು. ಕವಿಗೋಷ್ಠಿಯಲ್ಲಿ ವಾಸಂತಿ ರವೀಂದ್ರ, ಹೇಮಂತ್ ಪಾರೇರ, ಮಹೇಶ್ ತಿಮ್ಮಯ್ಯ, ದೀಪಿಕಾ ಸುದರ್ಶನ್, ಲತಾಕೃಷ್ಣ, ಪದ್ಮಾವತಿ, ಸುಮನಾ ಗೌತಮ್, ಕೆ.ಎ.ಚಂದ್ರಕಲಾ, ನಾಗರಾಜ್ ಅಚಾರ್ ಕವನ ವಾಚಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಸಂಜೆ ಬಹಿರಂಗ ಅಧಿವೇಶ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 30 ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. ರಾತ್ರಿ ಸಮಾರೋಪ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಸೆಪ್ಟೆಂಬರ್ 6ರಂದು ಸ್ಪರ್ಧೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ : ಸಭೆ ನಡೆಸಿದ ಕೊಡಗು ಪೊಲೀಸ್*

ಆಗಷ್ಟ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ NEWS DESK ಆ.28 : ಮುಂಬರಲಿರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ…

*ಕೊಡಗಿನ ಸಮಸ್ಯೆಗಳಿಗೆ ಸಮಗ್ರ ಪರಿಹಾರಕ್ಕೆ ಯದುವೀರ್ ಒಡೆಯರ್ ಆಗ್ರಹ : ಆನೆ- ಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಕೆ*

ಆಗಷ್ಟ್ 28, 2026

*ಕಸ್ತೂರಿರಂಗನ್ ವರದಿಯ 7ನೇ ಅಧಿಸೂಚನೆ: ಕೊಡಗಿನಲ್ಲಿ ಕೇರಳ ಮಾದರಿ ಅನುಷ್ಠಾನಕ್ಕೆ ಒತ್ತಾಯ*

ಆಗಷ್ಟ್ 28, 2026

*ಕೊಡಗು ಸೌಹಾರ್ಧ ಪತ್ತಿನ ಸಹಕಾರಿ ಸಂಘಕ್ಕೆ ‘ಎ’ ವರ್ಗೀಕರಣ : ರೂ.29 ಲಕ್ಷ ನಿವ್ವಳ ಲಾಭ*

ಆಗಷ್ಟ್ 27, 2026

*ಚೆಟ್ಟಳ್ಳಿಯಲ್ಲಿ ಸಾಂಪ್ರದಾಯಿಕ ಕೈಲ್ ಪೊವ್ದ್ ಧಾರೆ ಪೂಜೆ*

ಆಗಷ್ಟ್ 27, 2026

*ರಕ್ಷಾಬಂಧನ ಆಚರಣೆ : ಸಂಸದ ಯದುವೀರ್ ಒಡೆಯರ್‌ಗೆ ಬ್ರಹ್ಮಕುಮಾರಿಸ್‌ ನಿಂದ ರಾಖಿ*

ಆಗಷ್ಟ್ 27, 2026

*ಎ.ಕೆ. ಸುಬ್ಬಯ್ಯರ ಪುಣ್ಯಸ್ಮರಣೆ: ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಪೊನ್ನಣ್ಣ*

ಆಗಷ್ಟ್ 27, 2026

*ಮಡಿಕೇರಿ ಪಿಎಲ್‌ಡಿ ಬ್ಯಾಂಕ್‌ 63ನೇ ವಾರ್ಷಿಕ ಮಹಾಸಭೆ : ಐವರು ಪ್ರಗತಿಪರ ರೈತರಿಗೆ ಸನ್ಮಾನ*

ಆಗಷ್ಟ್ 27, 2026

*ಜಾನಪದ ಕಲಾಪ್ರಕಾರದ ತರಬೇತಿಗೆ ಅರ್ಜಿ ಆಹ್ವಾನ*

ಆಗಷ್ಟ್ 27, 2026

*ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ*

ಆಗಷ್ಟ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.