ಮಡಿಕೇರಿ, NEWS DESK ಫೆ.10:-ಶಾಲಿವಾಹನ ಶಕವರ್ಷ 1947 ನೇ ವಿಶ್ವಾವಸು ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷ ತ್ರಯೋದಶಿ ಫೆಬ್ರವರಿ, 15 ರಂದು ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ್ ಸ್ವೀಕರಿಸಿ, ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೋರಿದ್ದಾರೆ.
ಪೂಜಾ ಕಾರ್ಯಕ್ರಮದ ವಿವರ: ಫೆಬ್ರವರಿ, 15 ರಂದು ಬೆಳಗ್ಗೆ 6.45 ಗಂಟೆಗೆ ಮಹಾಪೂಜೆ, ಬೆಳಗ್ಗೆ 7.15 ಗಂಟೆಗೆ ನಿತ್ಯ ಸೇವೆಗಳ ಆರಂಭ, ಬೆಳಗ್ಗೆ 9.30 ಗಂಟೆಗೆ ರುದ್ರಹೋಮ ಸಂಕಲ್ಪ(ಸಾಮೂಹಿಕ) ಏಕದರ್ಶ ರುದ್ರಾಭಿಷೇಕ(ಸಾಮೂಹಿಕ), ಬೆಳಗ್ಗೆ 10 ಗಂಟೆಗೆ ರುದ್ರ ಹೋಮ ಪ್ರಾರಂಭ(ಸಾಮೂಹಿಕ), ಮಧ್ಯಾಹ್ನ 12 ಗಂಟೆಗೆ ರುದ್ರಹೊಮ ಪೂರ್ಣಾಹುತಿ (ಸಾಮೂಹಿಕ), ಮಧ್ಯಾಹ್ನ 12.30 ಗಂಟೆಗೆ ಕಳಶಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1.30 ಗಂಟೆಗೆ ತೀರ್ಥ ಪ್ರಸಾದ ವಿತರಣೆ(ವಿನಿಯೋಗ), ಸಂಜೆ 4 ಗಂಟೆಗೆ ದೇವರ ದರ್ಶನ ಹಾಗೂ ಸೇವೆಗೆ ಅವಕಾಶ, ನಂತರ ರಾತ್ರಿ 9 ಗಂಟೆಗೆ ಮಹಾ ಪೂಜೆ ನಡೆಯಲಿದೆ.
ಮಹಾ ಶಿವರಾತ್ರಿ ಹಬ್ದದ ಜಾಗರಣೆ ಪ್ರಯುಕ್ತ ಫೆಬ್ರವರಿ, 15 ರಿಂದ ಫೆಬ್ರವರಿ, 16 ರ ಬೆಳಗ್ಗೆ 4.30 ಗಂಟೆಯ ವರೆಗೆ ಬೆಳಗ್ಗಿನ ಜಾವದವರೆಗೂ ಸಹ ದೇವರ ದರ್ಶನಕ್ಕೆ ಅವಕಾಶವಿದೆ. ಭಕ್ತಾದಿಗಳ ಆಗಮನಕ್ಕೆ ದೇವಾಲಯ ತೆರೆದಿರುತ್ತದೆ.
ರುದ್ರಹೋಮ ಮತ್ತು ಏಕದಶ ರುದ್ರಾಭಿಷೇಕ (ಸಾಮೂಹಿಕ) ಸೇವಾರ್ಥದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿ, ರಶೀದಿ ಪಡೆದುಕೊಳ್ಳಬಹುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚುಮ್ಮಿ ದೇವಯ್ಯ ಅವರು ತಿಳಿಸಿದ್ದಾರೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಇದೇ ಫೆಬ್ರವರಿ 12 ರಂದು ಸಂಜೆ 5 ಗಂಟೆಗೆ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು, ಅಂದು(ಫೆ.12) ಸಂಜೆ 5 ಗಂಟೆಗೆ ಭಕ್ತಾಧಿಗಳ ದರ್ಶನಕ್ಕೆ ಅವಕಾಶ ಇರುವುದಿಲ್ಲ, ಸಾರ್ವಜನಿಕರು ಸಹಕರಿಸಬೇಕಾಗಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಕೋರಿದ್ದಾರೆ.








