ಮಡಿಕೇರಿ, NEWS DESK ಫೆ.19:-ಮಾಜಿ ಸೈನಿಕರು ಮತ್ತು ಅವಲಂಬಿತರು ನಿವೇಶನಕ್ಕಾಗಿ ಫೆಬ್ರವರಿ, 25 ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಿಲ್ಲಾ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ, ನಿರ್ದೇಶನಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರ ಪತ್ರ ಶೀರ್ಷಿಕೆಯಡಿ ಸುಳ್ಳು ಪ್ರಕಟಣೆಯನ್ನು ವಾಟ್ಸಪ್ ಜಾಲತಾಣದಲ್ಲಿ ಹರಡುತ್ತಿದ್ದು, ಈ ರೀತಿಯ ಯಾವುದೇ ಪ್ರಕಟಣೆಯನ್ನು ನಮ್ಮ ಇಲಾಖೆ ಅಥವಾ ಕಚೇರಿಯಿಂದ ಪ್ರಕಟಿಸಿರುವುದಿಲ್ಲ. ಈ ರೀತಿಯ ಸುಳ್ಳು ಪ್ರಕಟಣೆಯನ್ನು ನೀಡಿ ಮಾಜಿ ಸೈನಿಕರನ್ನು ದಿಕ್ಕು ತಪ್ಪಿಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.








