
ಮಡಿಕೇರಿ ಫೆ.19 NEWS DESK : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕøತಿಯ ಸಂರಕ್ಷಣೆಯ ಮಹಾನ್ ಚಿಂತನೆಯಡಿ, ಹಿಂದೂ ಬಾಂಧವರನ್ನು ಸಂಘoಟಿಸುವ ಉದ್ದೇಶದಿಂದ ರೂಪಿಸಲಾಗಿರುವ “ಹಿಂದೂ ಸಂಗಮ” ಕಾರ್ಯಕ್ರಮ ಮೂರ್ನಾಡಿನಲ್ಲಿ ಫೆ.22 ರಂದು ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮೂರ್ನಾಡು ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಕುಮಾರ್ ಕಾರ್ಯಕ್ರಮದ ವಿವರಗಳನ್ನು ನೀಡಿ, ಅಂದು ಮಧ್ಯಾಹ್ನ 2.15 ಗಂಟೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಇದರಲ್ಲಿ ಸುತ್ತಮುತ್ತಲ ಆರು ಗ್ರಾಮಗಳ ಸಹಸ್ರಾರು ಮಂದಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಶೋಭಾಯಾತ್ರೆಯು ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಿಂದ ಆರಂಭಗೊಂಡು, ಗಾಂಧಿ ನಗರ, ಮಹಿಳಾ ಸಮಾಜವನ್ನು ಹಾದು, ಪಟ್ಟಣದ ಮುಖ್ಯ ಬೀದಿಗಾಗಿ ಕೊಂಡಂಗೇರಿಗೆ ತೆರಳುವ ಜಂಕ್ಷನ್‍ವರೆಗೆ ಹೋಗಿ, ಅದೇ ಮಾರ್ಗವಾಗಿ ಪಾಂಡಾಣೆ ನಾಡ್‍ಮಂದ್‍ಗೆ ಆಗಮಿಸಲಿದೆ. ಶೋಭಾಯಾತ್ರೆಯಲ್ಲಿ ಕೊಡಗಿನ ವಾಲಗ, ಕೇರಳದ ಚಂಡೆ, ಬೊಂಬೆ ಕುಣಿತ, ನಾಗರಹೊಳೆ ಗಿರಿಜನ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಶೋಭಾಯಾತ್ರೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಲಿರುವುದಾಗಿ ತಿಳಿಸಿದರು. ಸಮಿತಿ ಕಾರ್ಯದರ್ಶಿ ಮಧು ಕುಮಾರ್ ಪುದಿಯೊಕ್ಕಡ ಅವರು ಮಾತನಾಡಿ, ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರೆಲ್ಲ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು. ನಗರದಲ್ಲಿ ಗೋಷ್ಠಿಯಲ್ಲಿ ಸಮಿತಿಯ ಸಹ ಕಾರ್ಯದರ್ಶಿ ಕೆ.ವಸಂತ್ ಕೋಡಂಬೂರು, ಖಜಾಂಚಿ ಎ.ಸಜೀವ್, ಸಂಯೋಜಕ ಸದಸ್ಯರಾದ ಈರ ಸುಬ್ಬಯ್ಯ ಉಪಸ್ಥಿತರಿದ್ದರು.









