Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*
  • *ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*
  • *3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*
  • *ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*
  • *ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*
  • ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು
  • *ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*
  • *ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಮರಣ ನಿಧಿಯ ಮೊತ್ತ ರೂ.10 ಸಾವಿರಕ್ಕೆ ಏರಿಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಮರಣ ನಿಧಿಯ ಮೊತ್ತ ರೂ.10 ಸಾವಿರಕ್ಕೆ ಏರಿಕೆ*

ಫೆಬ್ರವರಿ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.19 NEWS DESK : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದಿಂದ ನೀಡಲಾಗುತ್ತಿದ್ದ ಮರಣ ನಿಧಿಯ ಮೊತ್ತ ರೂ.5 ಸಾವಿರವನ್ನು ರೂ.10 ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಸದಸ್ಯರು ಇದರ ಲಾಭ ಪಡೆದುಕೊಳ್ಳುವಂತೆ ಸಂಘದ ಉಪಾಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 20 ವರ್ಷಗಳಿಂದ ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘವು ನಿವೃತ್ತ ಪೊಲೀಸರ ಯೋಗಕ್ಷೇಮಕ್ಕೆ ಬದ್ಧವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಸದಸ್ಯರು ಮರಣ ಹೊಂದಿದಾಗ ಮೃತರ ಕುಟುಂಬಕ್ಕೆ ಸಂಘವು ಮರಣ ನಿಧಿಯ ಮೂಲಕ ರೂ.5 ಸಾವಿರವನ್ನು ಅಂತ್ಯಕ್ರಿಯೆಯ ಸಂದರ್ಭ ನೀಡುತ್ತಿದೆ. ಈಗ ಇರುವ ರೂ.5 ಸಾವಿರದ ಮೊತ್ತವನ್ನು 10 ಸಾವಿರಕ್ಕೆ ಏರಿಕೆ ಮಾಡಲು ಸಂಘ ನಿರ್ಧರಿಸಿದೆ. ಏರಿಕೆಯಾದ ಮೊತ್ತವನ್ನು 2027 ಜನವರಿ 27 ರ ನಂತರ ಮರಣ ಹೊಂದುವ ಸದಸ್ಯರ ಕುಟುಂಬಕ್ಕೆ ನೀಡುವ ನಿಯಮವನ್ನು ಜಾರಿಗೆ ತರಲಾಗುವುದು ಎಂದರು. ಈ ಹಿಂದೆ ಮರಣ ನಿಧಿಯಲ್ಲಿ ಪಡೆದ ಸದಸ್ಯತ್ವಕ್ಕೆ ರೂ.5 ಸಾವಿರವನ್ನು ನೀಡಲಾಗುತ್ತಿತ್ತು. ಇದೀಗ ಮರಣ ನಿಧಿ ಮೊತ್ತದ ಏರಿಕೆಗೆ ಅನುಗುಣವಾಗಿ ಮತ್ತೊಮ್ಮೆ ಸದಸ್ಯತ್ವ ಪಡೆಯಲು ನಿವೃತ್ತ ಪೊಲೀಸರು ತಲಾ ರೂ.1 ಸಾವಿರ ಜೀವಮಾನ ಶುಲ್ಕವನ್ನು ಪಾವತಿಸಬೇಕು. ಪತಿ ಹಾಗೂ ಪತ್ನಿ ತಲಾ ರೂ.1 ಸಾವಿರ ನೀಡಿ ಸದಸ್ಯತ್ವ ಪಡೆಯಬೇಕು. ಪತಿ ಅಥವಾ ಪತ್ನಿ ಇವರಿಬ್ಬರಲ್ಲಿ ಒಬ್ಬರು ಮಾತ್ರ ಇದ್ದರೆ ರೂ.1 ಸಾವಿರ ಪಾವತಿಸಿ ಸದಸ್ಯತ್ವ ಪಡೆಯಬೇಕು. ಮರಣ ನಿಧಿಯ ಲಾಭವನ್ನು ಪತಿ ಹಾಗೂ ಪತ್ನಿ ಇಬ್ಬರಿಗೂ ರೂ.10 ಸಾವಿರದಂತೆ ನೀಡಲಾಗುವುದು. ಆದ್ದರಿಂದ ಸದಸ್ಯತ್ವ ಪಡೆಯುವ ಮೂಲಕ ಮರಣ ನಿಧಿಯ ಲಾಭ ಪಡೆದುಕೊಳ್ಳುವಂತೆ ಕೋರಿದರು. 2027 ಜನವರಿ 27 ರೊಳಗೆ ಸದಸ್ಯರು ಮರಣ ಹೊಂದಿದರೆ ಈ ಹಿಂದಿನ ನಿಯಮದಂತೆ ರೂ.5 ಸಾವಿರವನ್ನು ಮೃತರ ಕುಟುಂಬಕ್ಕೆ ನೀಡಲಾಗುವುದು ಮತ್ತು ಹೊಸದಾಗಿ ಪಾವತಿಸಿರುವ ಸದಸ್ಯತ್ವ ಶುಲ್ಕ ರೂ.1 ಸಾವಿರವನ್ನು ಹಿಂದಿರುಗಿಸಲಾಗುವುದು. ಈ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿ ವರ್ಷ ಮಾರ್ಚ್ 31 ರೊಳಗೆ ಆರೋಗ್ಯ ಭಾಗ್ಯ ವಿಮಾ ಶುಲ್ಕವನ್ನು ಪಾವತಿಸುವ ಮೂಲಕ ಸದಸ್ಯರು ಆರೋಗ್ಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಚೊಕ್ಕಾಡಿ ಎನ್.ಅಪ್ಪಯ್ಯ ತಿಳಿಸಿದರು. ಸಂಘದ ಕಾರ್ಯದರ್ಶಿ ಕಾವೇರಪ್ಪ ಎಂ.ಕೆ ಮಾತನಾಡಿ ಸಂಘದಲ್ಲಿ 1050 ಸದಸ್ಯರಿದ್ದು, ಮರಣ ನಿಧಿಯ ಮೊತ್ತವನ್ನು 10 ಸಾವಿರಕ್ಕೆ ಏರಿಕೆ ಮಾಡಿರುವ ಕ್ರಮವನ್ನು 900 ಕ್ಕೂ ಅಧಿಕ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ಯೋಜನೆಯ ಸದುಪಯೋಗಕ್ಕಾಗಿ ಈಗಾಗಲೇ ಸುಮಾರು 200 ಸದಸ್ಯರು ತಲಾ ರೂ.1 ಸಾವಿರ ಪಾವತಿಸಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮರಣ ನಿಧಿಗಾಗಿ ಸದಸ್ಯತ್ವ ಪಡೆಯಲು ಆಸಕ್ತಿ ಇರುವವರು ಜೂ.30 ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಆಸಕ್ತರು ಮೊ.ಸಂ 9448587975 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು. 2027 ಜನವರಿ 27 ರೊಳಗೆ ಮರಣ ಹೊಂದಿದವರಿಗೂ ರೂ.10 ಸಾವಿರ ನೀಡಬೇಕೆ ಎನ್ನುವ ಬಗ್ಗೆ ಸಂಘದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಕೆ.ವೈ.ಹಮೀದ್ ಹಾಗೂ ಎನ್.ಎ.ಜಗದೀಶ್ ಉಪಸ್ಥಿತರಿದ್ದರು.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ವಿಶೇಷ

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ…

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*

ಏಪ್ರಿಲ್ 18, 2026

*ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*

ಏಪ್ರಿಲ್ 18, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 18, 2026

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು

ಏಪ್ರಿಲ್ 18, 2026

*ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*

ಏಪ್ರಿಲ್ 18, 2026

*ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.