
ಸೋಮವಾರಪೇಟೆ NEWS DESK ಫೆ.23 : ವಿಶ್ವಕ್ಕೆ ಹಿಂದುತ್ವ ಸಾರಿದ ರಾಷ್ಟ್ರ ಭಾರತ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪುತ್ತೂರು ರವೀಂದ್ರ ಹೆಮ್ಮ ವ್ಯಕ್ತಪಡಿಸಿದರು. ಪಟ್ಟಣದ ಬೇಳೂರು ಮಂಡಲದ ವತಿಯಿಂದ ಏರ್ಪಡಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡಿದರು. ಹಿಂದುತ್ವದ ಹರಿಕಾರ, ಪ್ರತಿಪಾದಕ ಸ್ವಾಮೀವಿವೇಕಾನಂದರು ಅಂದು ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಸನಾತನ ಹಿಂದೂ ಧರ್ಮ ಉಳಿದರೆ ಭಾರತ ಉಳಿಯುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದರು .ವಿಶ್ವದ ಇತರೆ ರಾಷ್ಟ್ರಗಳು ವ್ಯವಹಾರಿಕ ದೇಶಗಳಾದರೆ ಭಾರತ ಮಾತೃತ್ವ ಹಾಗೂ ಭಾತೃತ್ವದ ದೇಶವಾಗಿದೆ, ಬೇರೆ ರಾಷ್ಟ್ರಗಳು ತಮ್ಮ ಬದುಕಿಗಾಗಿ ಪರರನ್ನು ಕೊಲ್ಲುತ್ತಿವೆ. ಕೋವಿಡ್ ಸಂದರ್ಭದಲ್ಲಿ ಭಾರತ ಕಂಡುಹಿಡಿದ ಲಸಿಕೆಯನ್ನು ಇತರೆ ರಾಷ್ಟ್ರಗಳಿಗೂ ನೀಡುವ ಮೂಲಕ ಭಾರತ ಮಾತ್ರ ತಮ್ಮೊಡನೆ ಇತರರನ್ನು ಬದುಕಿಸುತ್ತಿದೆ ಎಂದ ಅವರು ಅದಕ್ಕಾಗಿಯೇ ಹಿಂದುತ್ವ ಉಳಿಯಬೇಕೆಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ತೋಂಟದಾರ್ಯ ಮಠ, ಬಸವಾಪಟ್ಟಣ ಹಾಗೂ ಮುಳ್ಳೂರು ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ ಈ ರಾಷ್ಟ್ರದಲ್ಲಿ ಸನಾತನ ಧರ್ಮ, ಹಿಂದುತ್ವದದ ಬಗ್ಗೆ ಕಾಳಜಿ ವಹಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿರುವ ಏಕೈಕ ಸಂಘಟನೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಹೆಮ್ಮೆಯಿಂದ ಹೇಳಬಹುದೆಂದರು, ಆರ್.ಎಸ್.ಎಸ್. ಆರಂಭಗೊಂಡು ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ರಾಷ್ಟ್ರದೆಲ್ಲೆಡೆ ಹಿಂದೂಸಂಗಮ ಕಾರ್ಯಕ್ರಮ ಆಯೋಜಿಸುವ ಮೂಲಕ ಹಿಂದೂಗಳನ್ನು ಒಂದೆಡೆ ಸೇರಿಸುವ ಕಾರ್ಯನಡೆಯುತಿದೆ ಎಂದರು. ಭಾರತ ಹಾಗೂ ಹಿಂದೂಗಳು ಶಾಂತಿಪ್ರಿಯರು, ಯಾರನ್ನು ದ್ವೇಷಿಸುವುದಿಲ್ಲಾ ಆದರೆ ಈ ನಾಡಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭ, ಶಿವಾಜಿ ಜಯಂತಿ ಸಂದರ್ಭ ಅನ್ಯಕೋಮಿನವರ ಕಲ್ಲು ಹೊಡೆಯುತ್ತಾರೆ ನಾವು ಏನು ಮಾಡಬಹುದು ನೀವೇ ಹೇಳಿ ಎಂದರು. ಈ ದೇಶದ ಸಂಸ್ಕೃತಿ, ಆಚಾರ, ವಿಚಾರ ಉಳಿಯಬೇಕಾದರೆ ಮನೆಯಲ್ಲಿ ಮಹಿಳೆಯರು ಮೊದಲು ಆಚಾರವಂತರಾಗಬೇಕು, ಮಕ್ಕಳನ್ನು ಬೆಳೆಸಬೇಕು ಹಾಗಿದ್ದಾಗ ಮಾತ್ರ ಸಾಧ್ಯವೆಂದರು. ಅದಕ್ಕಾಗಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಂಚ ಪರಿವರ್ತನವೆಂಬ ಬದಲಾವಣೆಯ ಉದ್ದೇಶಕ್ಕೆ ಕೈ ಹಾಕಿದೆ ಆ ಮೂಲಕ ನಮ್ಮಲ್ಲಿ, ಸಮಾಜದಲ್ಲಿ ಬದಲಾವಣೆ ಆದರೆ ದೇಶದಲ್ಲಿ ಬದಲಾವಣೆ ಆಗುತ್ತದೆ ಎಂದರು. ಹಿಂದೂಗಳು ಇಂದು ಸಂಘಟಿತರಾಗಬೇಕಾಗಿದೆ, ಜಾಗೃತರಾಗಬೇಕಾ










