
ನಾಪೋಕ್ಲು ಫೆ.23 NEWS DESK : ಹಿಂದೂ ಸಂಘಟನೆಯ ಮೂಲಕ ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಹ ಕಾರ್ಯವಾಹಕ ಮಿರನ್ ಕುಟ್ಟಪ್ಪ ಹೇಳಿದರು. ಮದೆನಾಡಿನಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರದ ಅನೇಕ ಸವಾಲು ಮತ್ತು ಸಮಸ್ಯೆಗಳಿಗೆ ಉತ್ತರವನ್ನು ನೀಡುತ್ತಾ ನೂರು ವರ್ಷಗಳು ತುಂಬುವ ಸಂದರ್ಭದಲ್ಲಿ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಬಲಾಢ್ಯ ಭಾರತವನ್ನು ಕಟ್ಟಿದೆ. ಭವಿಷ್ಯದಲ್ಲಿ ವಸುದೈವ ಕುಟುಂಬ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸುವ ಸಲುವಾಗಿ ಜಗತ್ತೇ ಒಂದು ಕುಟುಂಬ ಇದು ಹಿಂದುತ್ವದ ಪರಿಕಲ್ಪನೆ ಕೇವಲ ಒಂದು ಸಂಘಟನೆ ಒಂದು ರಾಷ್ಟ್ರವನ್ನು ಕಟ್ಟಲು ಸಾಧ್ಯವಿಲ್ಲ ಎಂದರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಭಾರತವನ್ನು ಪ್ರೀತಿಸಬೇಕು ಆ ಮೂಲಕ ರಾಷ್ಟ್ರಕಟ್ಟುವ ಕಾರ್ಯದಲ್ಲಿ ತಮ್ಮಿಂದಾಗುವ ಕೆಲಸವನ್ನು ಕೈಗೊಳ್ಳಬೇಕು ಸಂಘಕ್ಕೆ ನೂರು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಪಂಚ ವಿಷಯಗಳಲ್ಲಿ ಪರಿವರ್ತನೆಯನ್ನು ಸಂಗ್ರಹಿಸಿದೆ ಕುಟುಂಬ ಪ್ರಬೋಧನ, ಸಾಮಾಜಿಕ ಪರಿವರ್ತನೆ, ಸ್ವದೇಶಿ ಭಾವನೆ, ಪರಿಸರ ಕಾಳಜಿ, ನಾಗರಿಕ ಶಿಷ್ಟಾಚಾರ ದೇಶದ ಪ್ರತಿಯೊಂದು ಮನೆಯೂ ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು ಮನೆಯ ಮಕ್ಕಳು ದೇಶದ ಸಂಸ್ಕೃತಿ ಸನಾತನ ಪರಂಪರೆಯ ಬಗ್ಗೆ ಗೌರವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮೆಲ್ಲ ಜಾತಿ ಮತ ಪಕ್ಷ ಪಂತಗಳನ್ನು ಮರೆತು ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎನ್ನುವ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ನಾಗರೀಕರಾಗಿ ಸಮಾಜದಲ್ಲಿ ಶಿಷ್ಟಾಚಾರದಲ್ಲಿ ತೊಡೆದುಕೊಳ್ಳಬೇಕು ಪ್ರಕೃತಿ ಇದ್ದರೆ ಮಾತ್ರ ನಾವು ನಮ್ಮಿಂದ ಪ್ರಕೃತಿಯಲ್ಲ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಅದೇ ರೀತಿಯಲ್ಲಿ ಸ್ವದೇಶಿ ಭಾವನೆ ಸ್ವದೇಶಿ ಉಡುಪು, ಸ್ವದೇಶಿ ಭಾಷೆ ಬಳಸುವುದರ ಮೂಲಕ ದೇಶದವನು ಕಟ್ಟುವ ಪಂಚ ಪರಿವರ್ತನೆಯಲ್ಲಿ ಪ್ರತಿಯೊಬ್ಬ ಹಿಂದೂ ಪಾಲ್ಗೊಳ್ಳಬೇಕೆಂಬ ಕರೆಯನ್ನು ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಶಿವ ರಾವ್ ಮದನಾಡಿನಲ್ಲಿ ಹಲವಾರು ವರ್ಷಗಳಿಂದ ಹಿಂದೂ ಸಂಘಟನೆಯ ಕೆಲಸಗಳು ಸಕ್ರಿಯವಾಗಿ ನಡೆಯುತ್ಹಿಂದೂ ಸಂಘಟನೆಯ ಕೆಲಸಗಳು ಸಕ್ರಿಯವಾಗಿ ನಡೆಯುತ್ತಿದೆ. ಒಳ್ಳೆಯ ರೀತಿಯ ಬೆಂಬಲವನ್ನು ಹಿಂದುಗಳು ನೀಡಿದ್ದಾರೆ. ರಾಷ್ಟ್ರದ ಉಳಿವಿಗಾಗಿ ಸಂಘಟಿತ ಹಿಂದೂ ಶಕ್ತಿ ಅನಿವಾರ್ಯ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬಟ್ಯನ ಉತ್ತಪ್ಪ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಯುವ ಜನತೆ ಪಾಲ್ಗೊಳ್ಳಬೇಕು. ಮದನಾಡಿನಂತ ಸಣ್ಣ ಗ್ರಾಮದಲ್ಲೂ ಎಲ್ಲರೂ ಪಾಲ್ಗೊಂಡಿರುವುದು ಸಂತೋಷ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಿರೀಶ್ ತಾಳ್ತಮನೆ ಮಾತನಾಡಿ, ಮನೆಯಲ್ಲಿರುವ ಮಕ್ಕಳು ದೇಶದ ಹಿರಿಯರ ಬಗ್ಗೆ ಸನಾತನ ಸಂಸ್ಕೃತಿಯ ಬಗ್ಗೆ ಹಿಂದುತ್ವದ ಬಗ್ಗೆ ತಿಳಿದುಕೊಳ್ಳಬೇಕು. ಹಿರಿಯರು ಇವರಿಗೆ ತಿಳಿಸಿ ಹೇಳಬೇಕು ಪ್ರತಿ ಮನೆಯಲ್ಲೂ ಈ ಕಾರ್ಯ ನಡೆಯಲೇಬೇಕು ಹಾಗಿದ್ದರೆ ಮಾತ್ರ ಭವಿಷ್ಯದ ಭಾರತ ಸುಭದ್ರವಾಗಿರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸುರೇಶ್ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ವಂದಿಸಿದರು. ಯೋಗೇಶ್ ಬಿಂದು ಹುಲಿ ಮನೆ ಮತ್ತು ವಿಠಲ್ ಒಂದೇ ಮಾತರಂ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು. ಇದಕ್ಕು ಮೊದಲು ನಡೆದ ಭವ್ಯವಾದ ಶೋಭ ಯಾತ್ರೆಯಲ್ಲಿ ಕುಣಿತ ಭಜನೆ ಸಿಂಗಾರಿ ಮೇಳ ಪಟಾಕೀ ಗಳ ಸಿಡಿತದೊಂದಿಗೆ ಅತ್ಯಾಕರ್ಷಕವಾಗಿ ನೆರವೇರಿತು.
ವರದಿ : ದುಗ್ಗಳ ಸದಾನಂದ.









