
ನಾಪೋಕ್ಲು ಫೆ.23 NEWS DESK : ಭಗವಂತ ಸುಂದರವಾದ ಭೂಮಿಯಲ್ಲಿ ಸ್ವರ್ಗವನ್ನು ನೀಡಿದ್ದಾನೆ. ಆದರೆ ಅದನ್ನು ನರಕ ಮಾಡಿಕೊಳ್ಳಬಾರದು ಎಂದು ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣ ಚೈತನ್ಯ ಅವರು ಹೇಳಿದರು. ಇಕೋ ಕ್ಲಬ್ ಸಂಘದ ಚಟುವಟಿಕೆಯ ಅಂಗವಾಗಿ, ಹಾಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪಕ್ಷಿ ಸಂಕುಲದ ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿ ಅವರು ಮಾತನಾಡಿದರು. ಪರಿಸರ ಸುರಕ್ಷಿತವಾಗಿ ನಮಗೆ ಮತ್ತು ನಮ್ಮ ಪೀಳಿಗೆಗೆ ಉಳಿಯಬೇಕಾದರೆ ಪಕ್ಷಿ ಸಂಕುಲವನ್ನು ಸುಸ್ಥಿತಿಯಲ್ಲಿ ಉಳಿಸಿ -ಬೆಳೆಸಬೇಕು ಎಂಬ ಕಿವಿಮಾತುಗಳ ಮೂಲಕ ಪಕ್ಷಿಗಳ ವೀಡಿಯೋಗಳನ್ನು ಪ್ರದರ್ಶಿಸುವ ಮೂಲಕ ಪಕ್ಷಿಗಳ ಆಹಾರ, ವಿಹಾರ, ಗೂಡು ಕಟ್ಟುವಿಕೆ, ಮೊಟ್ಟೆ ಇಡುವಿಕೆ, ಅವುಗಳ ಬದುಕು, ಕಾರ್ಯವೈಖರಿ, ಪರಿಸರಕ್ಕೆ ಅವುಗಳಿಂದ ಆಗುವ ಪ್ರಯೋಜನ, ಜೀವಿತಾವಧಿ… ಹೀಗೆ ಇನ್ನಿತರ ಉಪಯುಕ್ತ ವಿಷಯಗಳನ್ನು ವಿವರಿಸಿದರು. ಪಕ್ಷಿಗಳ ಜೀವನ ಶೈಲಿ, ಅವುಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಕಾಡು ಬೆಳೆಸುವಲ್ಲಿ ಪಕ್ಷಿಗಳ ಪಾತ್ರ, ಮಾನವನಿಗೆ ಅವುಗಳಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಪಕ್ಷಿಗಳ ಸಂರಕ್ಷಣೆಯ ಕುರಿತು ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಪಕ್ಷಿಗಳ ಬಗ್ಗೆ ಸಾಕಷ್ಟು ಚರ್ಚೆ, ಮಾಹಿತಿಯನ್ನು ಪಡೆದುದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಟಿ.ಬಿ. ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು
ವರದಿ : ದುಗ್ಗಳ ಸದಾನಂದ.









