Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
  • *ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*
  • *ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*
  • *ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ*
  • *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕೌಶಲ್ಯ ಕಾರ್ಯಾಗಾರ*
  • *ಆಟೋ ಹಾಗೂ ಮಾಂದಲ್ ಪಟ್ಟಿ ಬಾಡಿಗೆ ವಾಹನ ದರ ಪರಿಷ್ಕರಣೆ : ಉಪ ಸಮಿತಿ ರಚನೆಗೆ ನಿರ್ಧಾರ*
  • *ವಾಂಡರರ್ಸ್ ಶಿಬಿರ : ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು :  ಒಲಂಪಿಯನ್ ಮನೆಯಪಂಡ ಸೋಮಯ್ಯ*
  • *ಚೆಟ್ಟಳ್ಳಿಯಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಕಾರ್ಯಕ್ರಮ : ಸಾವಯವ ಕೃಷಿ, ಜೈವಿಕ ಕೀಟನಾಶಕ ಹಾಗೂ ಆಧುನಿಕ ತೋಟಗಾರಿಕಾ ತಂತ್ರಜ್ಞಾನ ಅಳವಡಿಕೆಗೆ ಒತ್ತು*
  • *ವಿರಾಜಪೇಟೆಯಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ : ರಕ್ತದಾನವು ಸಾಮಾಜಿಕ ಜವಾಬ್ದಾರಿಯಾಗಿದೆ : ಡಾ.ಕರುಂಬಯ್ಯ*
  • *ಸಿದ್ದಾಪುರ : ಏ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ರೋಟರಿಯ 14 ಕ್ಲಬ್ ಗಳ ಸದಸ್ಯರ ಸಮ್ಮಿಲನ ; ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ  ಜಾರಿಗೊಳಿಸಿ – ನಾಗೇಂದ್ರಪ್ರಸಾದ್ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ರೋಟರಿಯ 14 ಕ್ಲಬ್ ಗಳ ಸದಸ್ಯರ ಸಮ್ಮಿಲನ ; ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನ ಯೋಜನೆ  ಜಾರಿಗೊಳಿಸಿ – ನಾಗೇಂದ್ರಪ್ರಸಾದ್ ಕರೆ*

ಫೆಬ್ರವರಿ 24, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಫೆ.24 –   ಸಮಾಜದ ಅಗತ್ಯತೆಗೆ ತಕ್ಕಂತೆ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಕಾಯ೯ಪ್ರವೖತ್ತವಾಗಬೇಕು. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಮಾಜದಲ್ಲಿಯೂ ಅಗತ್ಯತೆಗಳ ಬದಲಾವಣೆಗೆ ತಕ್ಕಂತೆ ಯೋಜನೆ ಜಾರಿಯಾಗಬೇಕೆಂದು ರೋಟರಿ ಜಿಲ್ಲೆ 3192 ನ ಬೆಂಗಳೂರು ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ನಾಗೇಂದ್ರಪ್ರಸಾದ್ ಕರೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿನ ಸಂಪಿಗೆ ಇಕೋ  ವಿಲೇಜ್ ರೆಸಾಟ್೯ನಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ವತಿಯಿಂದ ರೋಟರಿ ವಲಯ 6 ರ 14 ರೋಟರಿ ಸಂಸ್ಥೆಗಳಿಗೆ ಸೇರಿದ ಸದಸ್ಯರ   ಸಮ್ಮಿಲನ ಸಮಾರಂಭ ಉದ್ಗಾಟಿಸಿ  ಅವರು ಮಾತನಾಡಿದರು.


ರೋಟರಿ ಸಂಸ್ಥೆಗಳಿಗೆ ಯುವಕ, ಯುವತಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ  ಆಕಷಿ೯ಸಬೇಕು.  ಸೇವಾ ಕಾಯ೯ಗಳಿಗೆ ಯುವಪೀಳಿಗೆ  ಮುಂದಾಗುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕೆಂದು ಕರೆ ನೀಡಿದ ಅವರು, ಕೋವಿಡ್ ಲಾಕ್ ಡೌನ್ ಸಂದಭ೯ದಲ್ಲಿಯೂ ರೋಟರಿ ಸಂಸ್ಥೆಗಳು ವಿಶ್ವವ್ಯಾಪಿ ಸಕ್ರಿಯವಾದ ಕಾಯ೯ಚಟುವಟಿಕೆ ಮೂಲಕ ಜನರ ನೆರವಿಗೆ ಮುಂದಾಗಿತ್ತು, ಹಲವೊಮ್ಮೆ ಸಕಾ೯ರಗಳಿಂದಲೂ ಸಾಧ್ಯವಾಗದ ಕಾಯ೯ಯೋಜನೆಗಳು ರೋಟರಿ ಮೂಲಕ ಸಾಧ್ಯವಾಗುತ್ತಿದೆ ಎಂದು ಹೆಮ್ಮೆಯಿಂದ ನುಡಿದರು. 1905 ರಲ್ಲಿ ಗೆಳೆತನ ಮತ್ತು ವ್ಯವಹಾರದ ಉದ್ದೇಶದಿಂದ ಚಿಕಾಗೋ ನಗರದಲ್ಲಿ ಪೌಲ್ ಹ್ಯಾರೀಸ್ ಅವರಿಂದ ಸ್ಥಾಪಿಸಲ್ಪಟ್ಟ ರೋಟರಿ ಸಂಸ್ಥೆ ಇಂದು ಅಗಾಧವಾಗಿ ಜಗತ್ತಿನಾದ್ಯಂತ ಬೇರೂರಿರುವುದಕ್ಕೆ ರೋಟರಿ ಸದಸ್ಯರ ಸಾಮಾಜಿಕ ಸೇವಾ ಉದ್ದೇಶವೇ ಮುಖ್ಯ ಕಾರಣ ಎಂದೂ ನಾಗೇಂದ್ರ ಪ್ರಸಾದ್ ವಿಶ್ಲೇಷಿಸಿದರು.

ಮುಂದಿನ ಸಾಲಿನ ರೋಟರಿ ಗವನ೯ರ್ ಸತೀಶ್ ಬೋಳಾರ್ ಮಾತನಾಡಿ,  ರೋಟರಿಗೆ ವಿಶ್ವವ್ಯಾಪಿ ಗೌರವದ ಮನ್ನಣೆಯಿದೆ. ಭಾರತದ ರೋಟರಿ ಸದಸ್ಯರ ವಿನೂತನ ಕಾಯ೯ಯೋಜನೆಗಳು ಜಗತ್ತಿನ ಗಮನ ಸೆಳೆದಿವೆ. ಇತ್ತೀಚಿಗೆ ಬೆಂಗಳೂರು ಮೂಲದ ರೋಟರಿ ಸದಸ್ಯ ರವಿಶಂಕರ್ ಡಾಕೋಜಿ ಅವರು  ಅಂತರರಾಷ್ಟ್ರೀಯ ರೋಟರಿ ಸಂಸ್ತೆಗೆ 500 ಕೋಟಿ ರು. ದಾನ ನೀಡಿರುವುದು ಜಗತ್ತಿನ ರೋಟರಿ ಇತಿಹಾಸದಲ್ಲಿಯೇ ಅಪೂವ೯ ದೇಣಿಗೆಯಾಗಿ ದಾಖಲಾಗಿದೆ  ಎಂದರು. ಸಾಮಾಜಿಕ ಸೇವೆಗೆ ಭಾರತೀಯ ರೋಟರಿ ಸದಸ್ಯರು ಸದಾ ಸ್ಪಂದಿಸುವುದಕ್ಕೆ ಭಾರತದ ಮಣ್ಣಿನ ಗುಣವೇ ಪ್ರಮುಖ ಕಾರಣವಾಗಿದೆ ಎಂದೂ ಸತೀಶ್ ಬೋಳಾರ್  ಅಬಿಪ್ರಾಯಪಟ್ಟರು.


ರೋಟರಿಯ ಚುನಾಯಿತ ಗವನ೯ರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಸ್ವಾಥ೯ರಹಿತ ಸಮಾಜಸೇವೆಯ ಧ್ಯೇಯದೊಂದಿಗೆ ನಾನಾ ಕಾಯ೯ಯೋಜನೆ ಜಾರಿಗೊಳಿಸುವ ಮೂಲಕ ರೋಟರಿಯು  ಸಮಾಜದಲ್ಲಿ ಅತ್ಯಂತ ಪ್ರಮುಖ ಸೇವಾ ಸಂಸ್ಥೆಯಾಗಿದೆ. ಜನಪರ ಸೇವಾ ಚಳುವಳಿಗೆ  ರೋಟರಿ ಪ್ರಸಿದ್ದಿ ಪಡೆದಿದೆ. ರೋಟರಿ ಸದಸ್ಯರೆಲ್ಲರೂ ಒಗ್ಗೂಡಿ ಸಮಾಜ ಸೇವೆಗೆ ಮುಂದಾದಲ್ಲಿ ಸಮಾಜದಲ್ಲಿ ಸಾಕಷ್ಟು ಪರಿವತ೯ನೆ ಸಾಧ್ಯವಿದೆ ಎಂದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ರಾಜುಗೌಡ ಮಾತನಾಡಿ, ರೋಟರಿ ಸೇವಾ ಕಾಯ೯ಗಳು ಇತರರಿಗೂ ಸ್ಪೂತಿ೯ಯ ಸೆಲೆಯಾಗಿದೆ ಎಂದರು. ಸಹಾಯಕ ಗವನ೯ರ್ ಧಿಲ್ಲನ್ ಚಂಗಪ್ಪ ಮಾತನಾಡಿ, 11 ವಷ೯ಗಳ ಬಳಿಕ ವಲಯ 6 ರ 14 ರೋಟರಿ ಸಂಸ್ಥೆಗಳ 350 ಸದಸ್ಯರು ಸಮ್ಮಿಲನಗೊಂಡಿರುವುದು ಶ್ಲಾಘನೀಯ ಎಂದರು.  ರೋಟರಿ ವಲಯ ಸಹಾಯಕ ಗವನ೯ರ್ ಉಲ್ಲಾಸ್ ಕೖಷ್ಣ ಮಾತನಾಡಿ, ಇದೇ ಮಾಚ್೯ 1 ರಂದು ಕುಶಾಲನಗರ ರೋಟರಿ ಸಂಸ್ಥೆಯ 50 ನೇ ವಷ೯ದ ಸಂಭ್ರಮವನ್ನು  ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೋಟರಿ ಸಮ್ಮಿಲನ ಆಚರಣಾ ಸಮಿತಿ ಅಧ್ಯಕ್ಷ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ನ ಸತ್ಯನಾರಾಯಣ್ ಮಾತನಾಡಿ, 14 ರೋಟರಿ ಸಂಸ್ಥೆಗಳ 300 ಕ್ಕೂ ಅಧಿಕ ಸದಸ್ಯರು ಒಂದೆಡೆ ಸೇರಿ ರೋಟರಿಯ ಭವಿಷ್ಯದ ಹಾದಿಯನ್ನು ನಿಧ೯ರಿಸಲು ಚಿಂತಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ , ಪಿರಿಯಾಪಟ್ಟಣ ರೋಟರಿ  ಮಿಡ್ ಟೌನ್ ಅಧ್ಯಕ್ಷ ಜಿ.ಕೆ. ಜಗನ್ ವಂದಿಸಿದ ಕಾಯ೯ಕ್ರಮವನ್ನು ಸಮ್ಮಿಲನ ಕಾಯ೯ಕ್ರಮ ಸಮಿತಿ ಸಂಚಾಲಕ ಅನಿಲ್ ಹೆಚ್.ಟಿ. ನಿರೂಪಿಸಿದರು. ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ಮಿಡ್ ಟೌನ್ ಕಾಯ೯ದಶಿ೯ ಟಿ.ಕೆ.ಚೇತನ್ ವೇದಿಕೆಯಲ್ಲಿದ್ದರು. ಡಾ. ಚೆರಿಯಮನೆ ಪ್ರಶಾಂತ್ ಅತಿಥಿ ಪರಿಚಯ ಮಾಡಿದರು.  ವಿರಾಜಪೇಟೆಯ  ಟಿ.ಡಿ. ಮೋಹನ್, ಅನ್ವಿತ್ ಕುಮಾರ್, ಸುಪ್ರಿತಾ ದಿಲೀಪ್, ಅಜಿತ್ ಕುಮಾರ್, ಇಶಾನಿ ರೈ ತಂಡದಿಂದ ಸಂಗೀತ ಸಂಜೆ ಆಯೋಜಿತವಾಗಿತ್ತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಏ.18 : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ ಹಾಗೂ ಅದರ…

*ನಮ್ಮ ಧ್ವನಿಯ ಆರೈಕೆ : ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ‘ವಿಶ್ವ ಧ್ವನಿ’ ದಿನಾಚರಣೆ*

ಏಪ್ರಿಲ್ 18, 2026

*ಸುಂಟಿಕೊಪ್ಪದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ*

ಏಪ್ರಿಲ್ 18, 2026

*ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕೌಶಲ್ಯ ಕಾರ್ಯಾಗಾರ*

ಏಪ್ರಿಲ್ 18, 2026

*ಆಟೋ ಹಾಗೂ ಮಾಂದಲ್ ಪಟ್ಟಿ ಬಾಡಿಗೆ ವಾಹನ ದರ ಪರಿಷ್ಕರಣೆ : ಉಪ ಸಮಿತಿ ರಚನೆಗೆ ನಿರ್ಧಾರ*

ಏಪ್ರಿಲ್ 18, 2026

*ವಾಂಡರರ್ಸ್ ಶಿಬಿರ : ಕ್ರೀಡೆಯಲ್ಲಿ ಅಭ್ಯಾಸ ನಿರಂತರವಾಗಿರಬೇಕು :  ಒಲಂಪಿಯನ್ ಮನೆಯಪಂಡ ಸೋಮಯ್ಯ*

ಏಪ್ರಿಲ್ 17, 2026

*ಚೆಟ್ಟಳ್ಳಿಯಲ್ಲಿ ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಕಾರ್ಯಕ್ರಮ : ಸಾವಯವ ಕೃಷಿ, ಜೈವಿಕ ಕೀಟನಾಶಕ ಹಾಗೂ ಆಧುನಿಕ ತೋಟಗಾರಿಕಾ ತಂತ್ರಜ್ಞಾನ ಅಳವಡಿಕೆಗೆ ಒತ್ತು*

ಏಪ್ರಿಲ್ 17, 2026

*ವಿರಾಜಪೇಟೆಯಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ : ರಕ್ತದಾನವು ಸಾಮಾಜಿಕ ಜವಾಬ್ದಾರಿಯಾಗಿದೆ : ಡಾ.ಕರುಂಬಯ್ಯ*

ಏಪ್ರಿಲ್ 17, 2026

*ಸಿದ್ದಾಪುರ : ಏ.18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಏಪ್ರಿಲ್ 17, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5729 ಪ್ರಕರಣಗಳು ಇತ್ಯರ್ಥ*

ಏಪ್ರಿಲ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.