ಮಡಿಕೇರಿ, NEWS DESK ಫೆ.24:-ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿ ಯನ್ನು ಮಾಡಿಸಿ ಫ್ರೂಟ್ಸ್ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿರುತ್ತಾರೆ, ಆದರೆ ಈ ರೈತ ಬಾಂಧವರಿಗೆ ಕೇಂದ್ರ ಸರ್ಕಾರವು ಏಕೀಕೃತ ಫ್ರೂಟ್ಸ್ ಐಡಿ ಗಳನ್ನು ಸೃಜನೆ ಮಾಡುತ್ತಿದ್ದು ಸದರಿ ಫ್ರೂಟ್ಸ್ ಐಡಿ ಗಳನ್ನು ಕೇಂದ್ರ ಸರ್ಕಾರದ ಆ್ಯಪ್‍ನೊಂದಿಗೆ ಹೊಂದಾಣಿಕೆ ಮಾಡಲಾಗುವುದು.
ಆದ್ದರಿಂದ ರೈತರು ತಮ್ಮ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್‍ವಾರು ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸುವುದು. ಫ್ರೂಟ್ಸ್ ಐಡಿ ಸೃಜಿಸುವ ಸಂಬಂದ ರೈತರು ಡಿಜಿಟಲ್ ಕನ್‍ಸೆಂಟ್ ನೀಡಬೇಕಾಗಿದ್ದು ತಮ್ಮ ಮೊಬೈಲ್‍ಗೆ ಬರುವ ಒಟಿಪಿ ಯನ್ನು ರೈತ ಸಂಪರ್ಕ ಕೇಂದ್ರ, ತೋಟಕಾರಿಕೆ, ಪಶು ಸಂಗೋಪನ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಇಲ್ಲದ ರೈತರು ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಪಹಣೀಯೋಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಸಂಖ್ಯೆ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ನೊಂದಿಗೆ ಈ ಕಚೇರಿಗಳಿಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಸಿದೆ. ಈಗಾಗಲೇ ಫ್ರೂಟ್ಸ್ ಐಡಿ ಇರುವ ರೈತರು ನಿಮ್ಮ ಹೆಸರಿಗಿರುವ ಬಾಕಿ ಯಾವುದಾದರು ಜಮೀನಿನ ಸರ್ವೆನಂಬರ್ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸಿಕೊಳ್ಳಲು ಅವಕಾಶವಿರುತ್ತದೆ.
ಕೇಂದ್ರ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಡಿಜಿಟಲ್ ಕನ್ಸೆಂಟ್ ಕಡ್ಡಾಯವಾಗಿರುತ್ತದೆ, ಆದ್ದರಿಂದ ಜಿಲ್ಲೆಯ ರೈತರು ಫೆಬ್ರವರಿ, 25 ರ ಒಳಗೆ ಸಂಬಂದಿಸಿದ ಕಚೇರಿಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Breaking News
- *ಗಣಕಯಂತ್ರ ಶಿಕ್ಷಣ ಪರೀಕ್ಷೆ: ನಿಷೇಧಾಜ್ಞೆ ಜಾರಿ*
- *ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ : ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ*
- *ಪೊನ್ನಂಪೇಟೆ-ಪೊನ್ನಪ್ಪಸಂತೆ ಸಿ.ಸಿ.ರಸ್ತೆ ಕಾಮಗಾರಿ : ಬದಲಿ ಮಾರ್ಗ ಬಳಸಲು ಸೂಚನೆ*
- *ಪೊನ್ನಂಪೇಟೆಯಲ್ಲಿ 15ನೇ ಕೊಡವ ಪುಸ್ತಕ ಪತ್ತಾಯ : ಮಕ್ಕಳು ಪಠ್ಯದ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಿ : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
- *ಕೊಡಗರಹಳ್ಳಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ಕಾರ್ಯಕ್ರಮ*
- *ರೂ.50 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ*
- *ಸ್ವಾತಂತ್ರ್ಯ ದಿನಾಚರಣೆ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
- ಡಾ.ಮಹಾಂತ ಶಿವಯೋಗಿ ಜನ್ಮ ದಿನಾಚರಣೆ : ಆ.1 ರಂದು ವ್ಯಸನ ಮುಕ್ತ ದಿನಾಚರಣೆ
- *ವಿರಾಜಪೇಟೆ : ಶಿವಾನಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ*
- *ವಿರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಬಾಲ ನಾಯಕರ ಪದಗ್ರಹಣ ಸಮಾರಂಭ*







