ಕುಶಾಲನಗರ ಸಮೀಪ ದುಬಾರೆ ಸಾಕಾನೆ ಶಿಬಿರದ ಬಳಿ ಅರಣ್ಯದಲ್ಲಿ ಅಮ್ಮಾಳೆ ಹಬ್ಬ ಭಕ್ತಿ ಭಾವದಿಂದ ನಡೆಯಿತು.
ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅರಣ್ಯ ಅಧಿಕಾರಿಗಳು, ಅರಣ್ಯ ಸಮಿತಿ ಪದಾಧಿಕಾರಿಗಳು, ಆನೆ ಶಿಬಿರದ ಮಾವುತರು ಕಾವಾಡಿಗಳು ಮತ್ತು ಹಾಡಿ ನಿವಾಸಿಗಳು ಸುತ್ತಮುತ್ತಲ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು.

ಅರಣ್ಯದಲ್ಲಿ ಪ್ರಾಣಿ ಸಂಕುಲಕ್ಕೆ ಯಾವುದೇ ರೀತಿಯ ತೊಂದರೆಗಳು, ವಿಘ್ನಗಳು ಉಂಟಾಗದಂತೆ ಮತ್ತು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ ಎ ಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್, ದುಬಾರೆ ಶಿಬಿರದ ಅಧಿಕಾರಿಗಳಾದ ರಂಜನ್, ವೆಂಕಟೇಶ್ ಮತ್ತಿತರರು ಇದ್ದರು.







