Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿದ್ಯುತ್ ಕಡಿತ : ಸೆಸ್ಕ್ ಅಧಿಕಾರಿಗಳ ವಿರುದ್ಧ ಎಂ.ಕೆ.ಆಶಿಕ್ ಅಸಮಾಧಾನ : ಪ್ರತಿಭಟನೆಯ ಎಚ್ಚರಿಕೆ*
  • *ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ : ಭಾರತೀಯ ಪಾರಂಪರಿಕ ಸಂಸ್ಕೃತಿಯನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು : ಸಂಸದ ಯದುವೀರ್ ಒಡೆಯರ್*
  • *ಮಾ.2 ರಂದು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬ*
  • *ಚೊಕಂಡಳ್ಳಿ ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಮನವಿ*
  • *ಮಡಿಕೇರಿ : ಜೂನಿಯರ್ ಕಾಲೇಜು ಆವರಣದಲ್ಲಿ ಗಮನ ಸೆಳೆದ ಮಕ್ಕಳ ಸಂತೆ*
  • *ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ತ್ರಿವೇಣಿ ಪೊಮ್ಮಕ್ಕಡ ಕೂಟ*
  • *ರಸ್ತೆಗಳ ಅವ್ಯವಸ್ಥೆ : ಮಡಿಕೇರಿ ನಗರಸಭೆ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ*
  • *ಮಡಿಕೇರಿ ಮುಸ್ಸಂಜೆ ಸೊಬಗು*
  • *ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಣಾ ತಡೆಗೋಡೆ : 94 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಯದುವೀರ್ ಭೂಮಿಪೂಜೆ*
  • *GL ACHARYA JEWELLERS KUSHALANAGARA : WANTED BILLING ASSISTANT : SALES EXECUTIVE*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home»ಇತ್ತೀಚಿನ ಸುದ್ದಿಗಳು»*ವಿದ್ಯುತ್ ಕಡಿತ : ಸೆಸ್ಕ್ ಅಧಿಕಾರಿಗಳ ವಿರುದ್ಧ ಎಂ.ಕೆ.ಆಶಿಕ್ ಅಸಮಾಧಾನ : ಪ್ರತಿಭಟನೆಯ ಎಚ್ಚರಿಕೆ*
ಇತ್ತೀಚಿನ ಸುದ್ದಿಗಳು

*ವಿದ್ಯುತ್ ಕಡಿತ : ಸೆಸ್ಕ್ ಅಧಿಕಾರಿಗಳ ವಿರುದ್ಧ ಎಂ.ಕೆ.ಆಶಿಕ್ ಅಸಮಾಧಾನ : ಪ್ರತಿಭಟನೆಯ ಎಚ್ಚರಿಕೆ*

February 25, 20261 Min Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಕುಶಾಲನಗರ ಫೆ.25 NEWS DESK : ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಅನಗತ್ಯ ವಿದ್ಯುತ್ ಕಡಿತ ಗೊಳಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಕೊಡಗು ಜಿಲ್ಲಾ ಸಂಚಾಲಕರಾದ ಎಂ.ಕೆ.ಆಶಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುತ್ ಕಡಿತದಿಂದ ಕಂಗೆಟ್ಟ ಸಾರ್ವಜನಿಕರು ಕಾರಣ ಕೇಳಲು ಸೆಸ್ಕ್ ಕಚೇರಿಗೆ ಅಥವಾ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಪ್ರತಿಕ್ರಿಯಿದಿರುವುದು ಖಂಡನೀಯ ಎಂದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳು ಹೊಸ್ತಿಲಲ್ಲಿವೆ. ಇಂತಹ ಸೂಕ್ಷ್ಮ ಸಮಯದಲ್ಲಿ ರಾತ್ರಿ ಮತ್ತು ಮುಂಜಾನೆ ವೇಳೆಯಲ್ಲಿ ದಿಢೀರ್ ವಿದ್ಯುತ್ ಕಡಿತ ಮಾಡುತ್ತಿರುವುದು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಾಳುಗೆಡವುತ್ತಿದೆ. ಅಧಿಕಾರಿಗಳ ಈ ಅವೈಜ್ಞಾನಿಕ ನಡೆಯಿಂದ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ತಳ್ಳಲ್ಪಡುತ್ತಿದೆ. ಪ್ರಸ್ತುತ ಪವಿತ್ರ ರಂಜಾನ್ ಮಾಸ ನಡೆಯುತ್ತಿದ್ದು, ಮುಸ್ಲಿಂ ಬಾಂಧವರ ಉಪವಾಸದ ಸಮಯ ಹಾಗೂ ಸಂಜೆ ಇಫ್ತಾರ್ ಪ್ರಾರ್ಥನಾ ವೇಳೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದು ಜನರ ಧಾರ್ಮಿಕ ಆಚರಣೆಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ದೂರಿದರು. ನಿರಂತರ ಪವರ್ ಕಟ್‌ನಿಂದಾಗಿ ಹಾಲು, ಮಾಂಸದ ವ್ಯಾಪಾರಸ್ಥರು, ಔಷಧಾಲಯಗಳು ಹಾಗೂ ಸಣ್ಣ ವ್ಯಾಪಾರಿಗಳು ಪ್ರತಿದಿನ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಪೂರ್ವ ಮಾಹಿತಿಯಿಲ್ಲದ ಈ ಕ್ರಮದಿಂದ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ಪ್ರಶ್ನಿಸಿದರು. “ಸೆಸ್ಕ್ ಇಲಾಖೆಯು ಕೇವಲ ಬಿಲ್ ವಸೂಲಿ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡುದಿದ್ದಲ್ಲಿ ಮುಂಚಿತವಾಗಿ ಮಾಹಿತಿ ನೀಡುವ ಜವಾಬ್ದಾರಿಯನ್ನು ಅಧಿಕಾರಿಗಳು ಪ್ರದರ್ಶಿಸಬೇಕು. ವಿದ್ಯುತ್ ಕಡಿತ ಹಾಗೂ ಉಡಾಫೆ ವರ್ತನೆ ಮುಂದುವರೆದರೆ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಕುಶಾಲನಗರದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಂ.ಕೆ.ಆಶಿಕ್ ಎಚ್ಚರಿಕೆ ನೀಡಿದರು.

 

Share. Facebook Twitter Pinterest LinkedIn Tumblr Email WhatsApp
Previous Article*ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ : ಭಾರತೀಯ ಪಾರಂಪರಿಕ ಸಂಸ್ಕೃತಿಯನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು : ಸಂಸದ ಯದುವೀರ್ ಒಡೆಯರ್*

Website design development company services in Mangalore

Forex Trading Teacher in India

Related Posts

*ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ : ಭಾರತೀಯ ಪಾರಂಪರಿಕ ಸಂಸ್ಕೃತಿಯನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು : ಸಂಸದ ಯದುವೀರ್ ಒಡೆಯರ್*

February 25, 2026

*ಮಾ.2 ರಂದು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬ*

February 25, 2026

*ಚೊಕಂಡಳ್ಳಿ ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಮನವಿ*

February 25, 2026

*ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ : ಭಾರತೀಯ ಪಾರಂಪರಿಕ ಸಂಸ್ಕೃತಿಯನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು : ಸಂಸದ ಯದುವೀರ್ ಒಡೆಯರ್*

February 25, 2026

ಸಿದ್ದಾಪುರ ಫೆ.25 NEWS DESK : ಎಸ್‌.ಎನ್‌.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ವನಿತಾ ಸಮಾವೇಶ ನಡೆಯಿತು. ಸಿದ್ದಾಪುರದ  ಎಸ್‌ಎನ್‌ಡಿಪಿ ಸಭಾಂಗಣದಲ್ಲಿ…

*ಮಾ.2 ರಂದು ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬ*

February 25, 2026

*ಚೊಕಂಡಳ್ಳಿ ನಲ್ವತೋಕ್ಲು ಮೊಹಿದ್ದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಮನವಿ*

February 25, 2026

*ಮಡಿಕೇರಿ : ಜೂನಿಯರ್ ಕಾಲೇಜು ಆವರಣದಲ್ಲಿ ಗಮನ ಸೆಳೆದ ಮಕ್ಕಳ ಸಂತೆ*

February 25, 2026

*ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ತ್ರಿವೇಣಿ ಪೊಮ್ಮಕ್ಕಡ ಕೂಟ*

February 25, 2026

*ರಸ್ತೆಗಳ ಅವ್ಯವಸ್ಥೆ : ಮಡಿಕೇರಿ ನಗರಸಭೆ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ*

February 25, 2026

*ಮಡಿಕೇರಿ ಮುಸ್ಸಂಜೆ ಸೊಬಗು*

February 25, 2026

*ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ಷಣಾ ತಡೆಗೋಡೆ : 94 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಂಸದ ಯದುವೀರ್ ಭೂಮಿಪೂಜೆ*

February 25, 2026

*GL ACHARYA JEWELLERS KUSHALANAGARA : WANTED BILLING ASSISTANT : SALES EXECUTIVE*

February 25, 2026

*ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಹೊಸ ಹಾದಿ: ಧಾರವಾಡ ಮೂಲದ ವಿಜ್ಞಾನಿ ಡಾ. ಕಟ್ಟಿಗೆ ಅವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ*

February 25, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.