Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿಮಾನ ಪ್ರಯಾಣಿಕರೇ ಗಮನಿಸಿ: ಟಿಕೆಟ್ ರದ್ದು ಮಾಡಿದರೆ ಪೂರ್ಣ ಹಣ ವಾಪಸ್; ಜಾರಿಗೆ ಬಂತು ಹೊಸ ನಿಯಮ!*
  • *ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*
  • *ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*
  • *ವಿರಾಜಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
  • *ಗೋಣಿಕೊಪ್ಪ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿಂದ ವೃದ್ಧಾಶ್ರಮಕ್ಕೆ ಭೇಟಿ*
  • *ಕಡಗದಾಳು : ಮಾ.1 ರಂದು ಹಿಂದೂ ಸಂಗಮ ಕಾರ್ಯಕ್ರಮ*
  • *ಅಗತ್ಯ ಔಷಧಿಯೂ ಇಲ್ಲ ವೈದ್ಯರುಗಳು ಇಲ್ಲ*
  • *ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*
  • *ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
  • *ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಆರಂಭ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home»ಇತ್ತೀಚಿನ ಸುದ್ದಿಗಳು»*ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*
ಇತ್ತೀಚಿನ ಸುದ್ದಿಗಳು

*ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*

February 26, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಫೆ.26 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸೂಕ್ತ ಸ್ಪಂದನೆ ನೀಡಿಲ್ಲವೆಂದು ಆರೋಪಿಸಿ ಮಾ.11 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ ಹಾಗೂ ಇಲಾಖೆಯ ಎಲ್ಲಾ ವೃಂದ ಸಂಘಗಳು ಜಂಟಿಯಾಗಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಆನಂದ್ ಎಂ. ಅವರು ಈ ಬಗ್ಗೆ ವಿವರಗಳನ್ನಿತ್ತರು. ಸರ್ಕಾರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮಾ.11ರಿಂದ ಮಾ.15ರವರೆಗೆ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಡಿಸ್ಪೆನ್ಸರಿಗಳಲ್ಲಿನ ಎಲ್ಲಾ ವೃಂದದ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ, ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ, ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದಾಗಿ ಸ್ಪಷ್ಟಪಡಿಸಿದರು. ಪ್ರಮುಖವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದ್ದರೂ ಸಹ ಇದನ್ನು ಉಲ್ಲಂಘಿಸಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಶೀಘ್ರ ತಿದ್ದುಪಡಿಯನ್ನು ತಂದು ಸಮಸ್ಯೆ ಬಗೆಹರಿಸಬೇಕು. ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ ಮತ್ತು ನೌಕರರಿಗೆ ಕಳೆದ ಐದು ವರ್ಷಗಳಿಂದ ಮುಂಬಡ್ತಿಗಳನ್ನು ನೀಡಿಲ್ಲ, ಕೂಡಲೆ ಮುಂಬಡ್ತಿಗಳನ್ನು ನೀಡಬೇಕು, ನಿಯಮಗಳಂತೆ ಸೇವಾನಿರತ ವೈದ್ಯರು, ಅಧಿಕಾರಿ ಮತ್ತು ನೌಕರರ ಉನ್ನತ ವ್ಯಾಸಂಗಕ್ಕೆ ಅವಕಾಶ ಒದಗಿಸಬೇಕು. ಈ ಹಿಂದಿನಿಂದಲು ಉನ್ನತ ವ್ಯಾಸಂಗಕ್ಕೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ವೇತನ, ಶುಲ್ಕ ಹಾಗೂ ಭತ್ಯೆಗಳೊಂದಿಗೆ ನಿಯೋಜನೆ ಮಾಡುವ ನಿಯಮವಿದೆ. ಆದರೆ, ಈ ಸಾಲಿನಿಂದ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ನಿಯೋಜನೆಗೊಂಡ ವೈದ್ಯರುಗಳಿಗೆ ವೇತನ ಶುಲ್ಕ ಹಾಗೂ ಭತ್ಯೆ ನೀಡಿಲ್ಲ ಮತ್ತು ಉನ್ನತ ವ್ಯಾಸಂಗದ ನಿಯೋಜನೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದನ್ನು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿದರು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ :: ಆರೋಗ್ಯ ಇಲಾಖೆಯಲ್ಲಿ 1998ರ ಅಂಕಿ ಅಂಶಗಳ ಆಧಾರದ ಮೇಲೆ ಹುದ್ದೆಗಳನ್ನು ಸೃಜಿಸಲಾಗಿತ್ತು. ಪ್ರಸ್ತುತ ಜನ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರು, ಹೆಚ್ಚುವರಿ ಹುದ್ದೆಗಳನ್ನು ಸೃಜಿಸಿಲ್ಲ. ಇದಕ್ಕೆ ಬದಲಾಗಿ ಈ ಹಿಂದೆ ಸೃಜಿಸಿರುವ ಹುದ್ದೆಗಳಲ್ಲಿ ಶೇ.47 ರಷ್ಟು ಹುದ್ದೆಗಳು ಇಂದಿಗೂ ಖಾಲಿ ಇದೆ. ಇದು ಕರ್ತವ್ಯ ನಿರತ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತಿದೆ. ಕಾಲ ಕಾಲಕ್ಕೆ ಹುದ್ದೆಗಳನ್ನು ಭರ್ತಿ ಮಾಡಿದರೆ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಬಹುದೆಂದು ತಿಳಿಸಿದರು. ಗುತ್ತಿಗೆ ವೈದ್ಯರು :: ನೌಕರರು ಹಾಗೂ ಎನ್‍ಹೆಚ್‍ಎಂ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ಮೂರು ವರ್ಷ ಪೂರೈಸಿದ ಗುತ್ತಿಗೆ ವೈದ್ಯರು ನೌಕರರ ಹುದ್ದೆಯನ್ನು ಖಾಯಂಗೊಳಿಸಬೇಕೆಂದು ಒತ್ತಯಿಸುತ್ತಿರುವುದಾಗಿ ತಿಳಿಸಿದರು. ಖಾಸಗಿ ಸೇವೆ ಅವಕಾಶ ನೀಡಿ :: ಸರ್ಕಾರಿ ವೈದ್ಯರುಗಳಿಗೆ ಕರ್ತವ್ಯದ ನಂತರ ಖಾಸಗಿ ಸೇವೆಗೆ ಅವಕಾಶ ನೀಡಬೇಕು. ಇಲ್ಲಿಯವರೆಗೆ ಇಂತಹ ಅವಕಾಶ ಇತ್ತಾದರು, ಇದೀಗ ಸರ್ಕಾರಿ ವೈದ್ಯರುಗಳು ಒಳರೋಗಿ ಸೇವೆಯನ್ನು ನೀಡಬಾರದೆಂದು ನಿರ್ಬಂಧಿಸಲಾಗಿದೆ. ಈ ನಿರ್ಬಂಧವನ್ನು ಹಿಂಪಡೆಯಬೇಕೆಂದು ಒತ್ತ್ತಾಯಿಸಿದರು. ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಎಂ.ಸಿ. ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿ ಮತ್ತು ನೌಕರರು ನೈಜ ಬೇಡಿಕೆಗಳನ್ನು ಮುಂದಿಟ್ಟು ಹೋರಾಟಕ್ಕೆ ಮುಂದಾಗುತ್ತಿದ್ದು, ಇದಕ್ಕೆ ಸಂಘ ಬೆಂಬಲವನ್ನು ನೀಡುತ್ತಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಅವರು ಮಾತನಾಡಿ, ಆರೋಗ್ಯ ಅಭಿಯಾನದಡಿ ಜಿಲ್ಲೆಯಲ್ಲಿ 428 ಹುದ್ದೆಗಳಿದ್ದು, ಇದರಲ್ಲಿ 366 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಅಗತ್ಯ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜಿ.ಡಿ.ಶ್ರೀನಾಥ್, ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ನಾಗಮಣಿ ಎಸ್.ವಿ., ನೇತ್ರ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ಚೇತನ್ ಉಪಸ್ಥಿತರಿದ್ದರು.

 

Share. Facebook Twitter Pinterest LinkedIn Tumblr Email WhatsApp
Previous Article*ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*
Next Article *ಅಗತ್ಯ ಔಷಧಿಯೂ ಇಲ್ಲ ವೈದ್ಯರುಗಳು ಇಲ್ಲ*

Website design development company services in Mangalore

Forex Trading Teacher in India

Related Posts

*ವಿಮಾನ ಪ್ರಯಾಣಿಕರೇ ಗಮನಿಸಿ: ಟಿಕೆಟ್ ರದ್ದು ಮಾಡಿದರೆ ಪೂರ್ಣ ಹಣ ವಾಪಸ್; ಜಾರಿಗೆ ಬಂತು ಹೊಸ ನಿಯಮ!*

February 26, 2026

*ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*

February 26, 2026

*ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*

February 26, 2026

*ಬೃಹತ್ ನೇಮಕಾತಿ ಪರ್ವ: 56,000 ಪೋಸ್ಟ್‌ಗಳಿಗೆ ಸಂಪುಟ ಅಸ್ತು; ನಿರುದ್ಯೋಗಿಗಳ ಹೋರಾಟಕ್ಕೆ ಸಂದ ಜಯ!*

February 26, 2026

ಬೆಂಗಳೂರು, ಫೆಬ್ರವರಿ 26, 2026: ರಾಜ್ಯದ ಉದ್ಯೋಗಾಕಾಂಕ್ಷಿಗಳ ದೀರ್ಘಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಧಾರಾವಾಡದಲ್ಲಿ ನಡೆದ ಭಾರಿ ಪ್ರತಿಭಟನೆಯ…

*ಪೆರಾಜೆ : ಕುಂದಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ*

February 26, 2026

*ವಿರಾಜಪೇಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಗೋಣಿಕೊಪ್ಪ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದಿಂದ ವೃದ್ಧಾಶ್ರಮಕ್ಕೆ ಭೇಟಿ*

February 26, 2026

*ಕಡಗದಾಳು : ಮಾ.1 ರಂದು ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಅಗತ್ಯ ಔಷಧಿಯೂ ಇಲ್ಲ ವೈದ್ಯರುಗಳು ಇಲ್ಲ*

February 26, 2026

*ಮಾ.11 ರಿಂದ ಸರ್ಕಾರಿ ವೈದ್ಯಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ*

February 26, 2026

*ಫೆ.28 ರಂದು ಚೆಟ್ಟಿಮಾನಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ*

February 26, 2026

*ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಆರಂಭ*

February 26, 2026

*ಬೆಂಗಳೂರಿನಲ್ಲಿ ಅಮೆಜಾನ್ ಬೃಹತ್ ಹೆಜ್ಜೆ: ಏಷ್ಯಾದಲ್ಲೇ 2ನೇ ಅತಿದೊಡ್ಡ ಕಚೇರಿ ಉದ್ಘಾಟನೆ; 7,000 ಮಂದಿಗೆ ಉದ್ಯೋಗಾವಕಾಶ!*

February 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.