
ವಿರಾಜಪೇಟೆ ಫೆ.26 NEWS DESK: ಗೋಣಿಕೊಪ್ಪದ ಟ್ರೂ ವಾರಿಯರ್ಸ್ ಸ್ವಸಹಾಯ ಸಂಘದ ಪದಾಧಿಕಾರಿಗಳು ಆರ್ಜಿ ಗ್ರಾಮದ ಶಕ್ತಿ ವೃದ್ಧಾಶ್ರಮಕ್ಕೆ ಮತ್ತು ಹೆಗ್ಗಳದ ಸ್ನೇಹ ಭವನ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ವೃದ್ಧಾಶ್ರಮದ ನಿವಾಸಿಗಳ ಯೋಗಕ್ಷೇಮ ವಿಚಾರಿಸಿದ ಸಂಘದ ಪದಾಧಿಕಾರಿಗಳು, ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಈ ಸಂದರ್ಭ ಮಾತನಾಡಿದ ಟ್ರೂ ವಾರಿಯರ್ಸ್ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಪ್ರಶಾಂತ್(ವಿಜಯ್) ಮಾತನಾಡಿ, ನಮ್ಮ ಸಂಘದಲ್ಲಿ ಹದಿನಾಲ್ಕು ಸದಸ್ಯರಿದ್ದು ಕಳೆದ ಐದು ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಬಡ ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ಆಸ್ಪತ್ರೆಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಾ ಬಂದಿದ್ದೇವೆ. ಇಲ್ಲಿನ ವೃದ್ದಾಶ್ರಮಗಳಿಗೆ ನಾವೇ ಸ್ವತಃ ತಯಾರಿಸಿದ ಭೋಜನ ಮತ್ತು ಖಾದ್ಯವನ್ನು ತಂದು ಬಡಿಸಿ ಸಹ ಭೋಜನವನ್ನು ಸಹ ಮಾಡಿದ್ದೇವೆ. ಮುಂದೆಯು ಇನ್ನಷ್ಟು ದೊಡ್ಡಮಟ್ಟದಲ್ಲಿ ಸರ್ವ ಸದಸ್ಯರ ಬೆಂಬಲದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು. ಕಾರ್ಯದರ್ಶಿ ಓಂ ಪ್ರಕಾಶ್ ಮಾತನಾಡಿ, ಕಳೆದ ಐದು ವರ್ಷದಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಬರುತ್ತಿದ್ದೆವೆ. ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಮುಂದೆಯು ಇನ್ನಷ್ಟು ಹೆಚ್ಚಿನ ಸೇವೆಯನ್ನು ಮಾಡುತ್ತೇವೆ ಎಂದು ಹೇಳಿದರು. ಸಂಘದ ಸದಸ್ಯರುಗಳಾದ ಅಚ್ಚು, ಮುಕೇಶ್, ನೆಲ್ಲಿರಾ ಸೋಮಣ್ಣ ಸಜೀ, ಸಬಾಸ್ಟಿನ್, ಸತ್ಯಜಿತ್, ನಿಶಾಂತ್, ಸೈಮನ್ ನಿಶಾಂತ್, ಅವಿನಾಶ್, ಸುನಿಲ್, ಪ್ರಜ್ವಲ್, ಇರ್ಫಾನ್, ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.









