ಮಡಿಕೇರಿ, ಮಾ.೫: ಪ್ರಶಾಂತ್ ಟಿ.ಆರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ‘ನನ್ನ ಸೈಕಲ್ ಸವಾರಿ’ ಕಿರುಚಿತ್ರದ ಚಿತ್ರೀಕರಣ ಆರಂಭವಾಗಿದೆ.
ಚಿತ್ರದ ಮೊದಲ ದೃಶ್ಯಕ್ಕೆ ದಂತ ವೈದ್ಯೆ ಡಾ.ಅನುಶ್ರೀ ಕ್ಲಾಪ್ ಮಾಡಿ ಶುಭ ಕೋರಿದರು. ಜಯಶ್ರೀ ಅನಂತ ಶಯನ, ವಿನೋದ್ ಮೆಡಿಕಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಬೆಕಲ್ ಕುಶಾಲಪ್ಪ, ಸಂಜೀವ್, ಸುನೀತಾ, ಶ್ರುತಿ, ದಿವ್ಯಾ ಮುಂತಾದವರು ಈ ಸಂದರ್ಭ ಹಾಜರಿದ್ದರು.

ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡಿದ ಯುವತಿಯ ಯಶೋಗಾಥೆಯನ್ನೊಳಗೊಂಡ ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದ ಬಿ.ಜಿ.ಅನಂತಶಯನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲಾರಂಡ ವಿಠಲ್ ನಂಜಪ್ಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಶ್ರುತಿ ಶಿಕ್ಷಕಿಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಎಂ.ಎಫ್.ರಫಾಖಾನ್, ಬಾಲ ನಟರಾದ ಆರಾಧ್ಯಾ, ಚೆಸ್ವಿ, ಅಭಿಷ್ಯಂತ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.
ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುತ್ತಿದ್ದು, ಕಿರುಚಿತ್ರದ ಕ್ಲೆöÊಮ್ಯಾಕ್ಸ್ ಚಿತ್ರೀಕರಣ ಅಮೇರಿಕಾದ ಒಹಿಯೋ ನಗರದಲ್ಲಿ ನಡೆಯಲಿದೆ. ಖ್ಯಾತ ನಿರ್ದೇಶಕ ಕೆ.ಶಿವರುದ್ರಯ್ಯ ಸಂಭಾಷಣೆ ಬರೆದಿದ್ದು, ಎಂ.ಆರ್.ಫಿರೋಜ್‌ಖಾನ್ ಸುಂಟಿಕೊಪ್ಪ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ರಾಧಿಕಾ ವಿಶ್ವನಾಥ್ ಸಾಹಿತ್ಯ ಬರೆದಿದ್ದು, ಸತೀಶ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ವಂಶಿ ಸಂಕಲನ, ಖುಷಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಖ್ಯಾತ ನಟ ಅನಿರುದ್ದ್ ಅರ್ಪಿಸುತ್ತಿರುವ ಈ ಕಿರುಚಿತ್ರ ಸಿಂಹಾದ್ರಿ ಪ್ರೊಡಕ್ಷನ್‌ನಿಂದ ನಿರ್ಮಾಣವಾಗುತ್ತಿದೆ.







