

ಮಡಿಕೇರಿ NEWS DESK ಮಾ.19 : ರಾಷ್ಟ್ರೀಯ ಹೆದ್ದಾರಿ-275 ಕಿ.ಮೀ.71.600 ರಿಂದ ಕಿ.ಮೀ.130.21 ರವರೆಗೆ ಸಂಪಾಜೆಯಿಂದ ಕುಶಾಲನಗರ ಕಾವೇರಿ ನದಿ ಸೇತುವೆ ವರೆವಿಗೂ ಈಗಾಗಲೇ ತೆರವುಗೊಳಿಸಲಾಗಿದ್ದ ಅನಧಿಕೃತ ಜಾಹಿರಾತು ಫಲಕಗಳನ್ನು ಮತ್ತು ವ್ಯಾಪಾರಿಗಳು ಹಣ್ಣಿನ ಅಂಗಡಿ ಮತ್ತು ಗೂಡಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಒಳಗೆ ಪುನರ್ ಸ್ಥಾಪಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಗ್ರಾಹಕರ ವಾಹನಗಳು ಪುಟ್‌ಪಾತಿನಲ್ಲಿ ನಿಂತು ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ವಾಹನಗಳ ಸರಾಗ ಚಲನೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಮತ್ತು ಅನಧಿಕೃತ ಜಾಹಿರಾತು ಫಲಕಗಳನ್ನು ರಾಷ್ಟ್ರೀಯ ಹೆದ್ದಾರಿಯ ಫರಿದಿಯಿಂದ ಮಾರ್ಚ್ 23 ರೊಳಗೆ ತಾವೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಮಾರ್ಚ್ 24 ರಿಂದ ಅನಧಿಕೃತ ಬೋರ್ಡ್ ಮತ್ತು ಮಳಿಗೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಮತ್ತು ತೆರವು ಕಾರ್ಯಾಚರಣೆಯಲ್ಲಿ ವ್ಯಾಪಾರಿಗಳಿಗೆ ನಷ್ಟವಾದಲ್ಲಿ ಇಲಾಖೆಯು ಜವಾಬ್ದಾರವಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಅವರು ತಿಳಿಸಿದ್ದಾರೆ.








