Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ದೈತ್ಯ ಬೆಟ್ಟ ತಡಿಯಂಡಮೋಳ್ ನ್ನು 100 ಬಾರಿ ಏರಿದ ಸಾಧಕ ಅರೆಯಡ ಗಿರೀಶ್
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ ವಿಶೇಷ

ದೈತ್ಯ ಬೆಟ್ಟ ತಡಿಯಂಡಮೋಳ್ ನ್ನು 100 ಬಾರಿ ಏರಿದ ಸಾಧಕ ಅರೆಯಡ ಗಿರೀಶ್

ಏಪ್ರಿಲ್ 1, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
SM Fitness Advertisement

ಮಡಿಕೇರಿ NEWS DESK ಏ.1 : ಪ್ರಕೃತಿ ಪ್ರಿಯರ ಸ್ವರ್ಗ, ಕಾವೇರಿ ನದಿಯ ತವರು ಜಿಲ್ಲೆ ಕೊಡಗಿನ ದೈತ್ಯ ಬೆಟ್ಟ ತಡಿಯಂಡಮೋಳ್ ನ್ನು 100 ಬಾರಿ ಏರಿದ ಸಾಧನೆಯನ್ನು ನಾಪೋಕ್ಲುವಿನ ಯವಕಪಾಡಿ ಗ್ರಾಮದ ಅರೆಯಡ ಗಿರೀಶ್ ತಿಮ್ಮಯ್ಯ ಅವರು ಮಾಡಿದ್ದಾರೆ. ಸಮುದ್ರ ಮಟ್ಟದಿಂದ 1748 ಮೀಟರ್ ಎತ್ತರದಲ್ಲಿರುವ ತಡಿಯಂಡಮೋಳ್ ನ್ನು ಏರುವುದು ಸುಲಭದ ಮಾತಲ್ಲ, ಅದರಲ್ಲೂ 100 ಬಾರಿ ಬೆಟ್ಟವನ್ನೇರುವುದೆಂದರೆ ಅದು ಮಹಾ ಸಾಧನೆಯೇ ಸರಿ.
1994ರ ಅವಧಿಯಲ್ಲಿ ತಡಿಯಂಡಮೋಳ್ ಬೆಟ್ಟವನ್ನು ಏರಲೆಂದೇ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆ ಸಂದರ್ಭ ಯವಕಪಾಡಿ ಗ್ರಾಮದ ಅಪ್ಪಾರಂಡ ಅಪ್ಪಣ್ಣ ಎಂಬುವವರ ಮನೆಯಲ್ಲಿ ತಂಗಿದ್ದ ವಿದೇಶಿ ಪ್ರವಾಸಿಗರೊಬ್ಬರು ಹಣ ಪಡೆದು ಆಶ್ರಯ ಮತ್ತು ಆತಿಥ್ಯ ನೀಡುವಂತೆ “ಹೋಂಸ್ಟೇ” ಪರಿಕಲ್ಪನೆಯನ್ನು ಪರಿಚಯಿಸಿದರು. ಅಂದಿನಿoದ ಅಪ್ಪಾರಂಡ ಅಪ್ಪಣ್ಣ ಅವರು “ಪ್ಯಾಲೇಸ್ ಎಸ್ಟೇಟ್” ಹೆಸರಿನ ಹೋಂಸ್ಟೇ ಮೂಲಕ ಚಿರಪರಿಚಿತರಾದರು. ಹೋಂಸ್ಟೇಗೆ ದಿನದಿಂದ ದಿನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ತಡಿಯಂಡಮೋಳ್ ಗೆ ಸಾಗುವ ಪ್ರವಾಸಿಗರಿಗೆ ಗೈಡ್ ವೊಬ್ಬರ ಅಗತ್ಯವಿತ್ತು. ಆಗ ಯವಕಪಾಡಿ ಗ್ರಾಮದಲ್ಲೇ ತೋಟದ ಕಾರ್ಯ ನಿರ್ವಹಿಸುತ್ತಿದ್ದ ಅರೆಯಡ ಗಿರೀಶ್ ಅವರನ್ನು ಅಪ್ಪಾರಂಡ ಅಪ್ಪಣ್ಣ ಅವರು ಗೈಡ್ ನ್ನಾಗಿ ನೇಮಿಸಿಕೊಂಡರು. ಅoದಿನಿoದ ತಡಿಯಂಡಮೋಳ್ ಬೆಟ್ಟವನ್ನು ಏರಲು ಆರಂಭಿಸಿದ ಅರೆಯಡ ಗಿರೀಶ್ ಅವರು ಇಲ್ಲಿಯವರೆಗೆ 100 ಕ್ಕೂ ಅಧಿಕ ಬಾರಿ ಬೆಟ್ಟ ಹತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಬೆನ್ನು ಹುರಿ ಸರ್ಜರಿ ಆದ ನಂತರ ಬೆಟ್ಟ ಏರುವುದನ್ನು ಸಂಪೂರ್ಣ ನಿಲ್ಲಿಸಿದ್ದೇನೆ. ಬೆಟ್ಟ ಹತ್ತುವುದು ಸುಲಭ, ಆದರೆ ಇಳಿಯುದು ಕಷ್ಟ, ನನ್ನ ಬೆನ್ನು ನೋವಿಗೆ ಇದೂ ಒಂದು ಕಾರಣ ಇರಬಹುದು ಎಂದು ಅರೆಯಡ ಗಿರೀಶ್ ಅಭಿಪ್ರಾಯ ಹಂಚಿಕೊAಡಿದ್ದಾರೆ.
ತಡಿಯಂಡಮೋಳ್ ಹತ್ತುವಾಗ ದಾರಿಯಲ್ಲಿ ಆನೆಗಳ ಹಿಂಡು, ಕಡವೆಗಳ ಓಟ, ಹುಲಿ ಮಲ-ಹಿಕ್ಕೆ, ಅದರ ದುರ್ವಾಸನೆ ಎದುರಾಗುತ್ತದೆ. ವನ್ಯಜೀವಿಗಳು ದೂರ ಸರಿಯುಲೆಂದು ಕೂಗುತ್ತಾ, ಅರಚುತ್ತಾ, ಚಪ್ಪಾಳೆ ತಟ್ಟುತ್ತಾ ಸಾಗುವಾಗ ಜೀವ ಬಾಯಿಗೆ ಬಂದAತೆ ಆಗುವ ಅನುಭವ ರೋಮಾಂಚಕ ಎಂದು ಹೇಳುತ್ತಾರೆ. ಪ್ರವಾಸಿಗರನ್ನು ಮಾತ್ರವಲ್ಲದೆ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕೂಡ ತಡಿಯಂಡಮೋಳ್ ಗೆ ಕರೆದುಕೊಂಡು ಹೋಗಿದ್ದಾರೆ. ಮಳೆ, ಚಳಿ, ಬೇಸಿಗೆ ಕಾಲ ಎನ್ನದೆ ಎಲ್ಲಾ ದಿನಗಳಲ್ಲಿಯೂ ಇವರು ಕರ್ತವ್ಯ ನಿರ್ವಹಿಸಿದ್ದಾರೆ ಮತ್ತು ಪ್ರಕೃತಿಯೊಂದಿಗೆ ಬೆರೆತಿದ್ದಾರೆ.ಇವರು ಪ್ರೌಢಶಾಲಾ ದಿನಗಳಿಂದಲೇ ಅಥ್ಲೆಟಿಕ್, ಉದ್ದ ಜಿಗಿತ, ಎತ್ತರ ಜಿಗಿತ ಮತ್ತಿತರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾರೆ. ಉತ್ತಮ ಹಾಕಿಪಟು ಕೂಡ ಆಗಿದ್ದು, ಕಕ್ಕಬ್ಬೆ ಪ್ರೌಢಶಾಲಾ ಮೈದಾನದಲ್ಲಿ ಹಾಕಿ ಕೋಚಿಂಗ್ ಕ್ಯಾಂಪ್ ನಲ್ಲಿ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ.
ಅಲ್ಲದೆ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲೂ ಪಾಲ್ಗೊಂಡು ಕ್ರೀಡಾ ಪ್ರತಿಭೆ ಮೆರೆದಿದ್ದಾರೆ. ತೀರ್ಪುಗಾರರಾಗಿ, ತಾಂತ್ರಿಕ ವರ್ಗದಲ್ಲಿ 2002 ರಿಂದ ಕಳೆದ 2025ರ ಮುದ್ದಂಡ ಹಾಕಿ ನಮ್ಮೆಯವರೆಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಹಲವು ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಕೂರ್ಗ್ ಹಾಕಿ ಅಸೋಸಿಯೇಷನ್, ಹಾಕಿ ಕೂರ್ಗ್, ನೆಸ್ಲೆ ಕಪ್ ಹಾಕಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿರುವ ಅರೆಯಡ ಗಿರೀಶ್ ಸಿಎನ್‌ಸಿ ಸಂಘಟನೆಯಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ ನಲ್ಲಿ ಗೌರವ ಕಾರ್ಯದರ್ಶಿಯಾಗಿ 9 ವರ್ಷ ನಿರಂತರ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆ ನನ್ನ ಧ್ಯೇಯ ಎಂದು ಪ್ರತಿನಿತ್ಯ ಕಾರ್ಯಪ್ರವೃತ್ತರಾಗಿರುತ್ತಾರೆ. ಛಾಯಾಗ್ರಹಣ ಇವರ ಹವ್ಯಾಸವಾಗಿದೆ.ಇವರು ಒಬ್ಬ ಹಿರಿಯ ಸಾಹಿತಿಯೂ ಆಗಿದ್ದು, 1985 ರಿಂದ ಬ್ರಹ್ಮಗಿರಿ ಕೊಡವ ತಕ್ಕ್ ವಾರಪತ್ರಿಕೆಯ ಪಳಮೆ – ಪುದುಮೆ ಕಾಲಂನಿAದ ಬರವಣಿಗೆ ಆರಂಭಿಸಿದ್ದು, ಇದು ನಿರಂತರವಾಗಿ ಸಾಗುತ್ತಲೇ ಇದೆ. ಹನಿ ಗವನ, ಕವಿತೆ, ಕಥೆ, ಕಾದಂಬರಿ, ಬ್ರಹ್ಮಗಿರಿ ಪುತ್ತರಿ ಸಂಚಿಕೆ, ಪೂಮಾಲೆ ಚಂಗ್ರಾoದಿ ಪಟ್ಟೋಲೆ ಸಂಚಿಕೆ, ಕೊಡವತಕ್ಕ್ ಎಳ್ತ್ ಕಾರಡ ಕೂಟ, ಪೂಮಾಲೆ ಬೊಳಚೆ ಕೂಟ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸ್ಪರ್ಧೆ, ಸಂಕಲನ, ಮಾಸ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದ್ದು, ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಮoಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಕಾವೇರಿ 3 ರ ಬಿಕಾಂ ಕೊಡವ, ಮೂರನೇ ಸೆಮಿಸ್ಟರ್ ಪುಸ್ತಕದಲ್ಲಿ, ಪುಟ ಸಂಖ್ಯೆ 48 – 51 ರಲ್ಲಿ “ತೃಪ್ತಿ” ಎನ್ನುವ ಕಥೆಯನ್ನು ಸೇರಿಸಿ ಇವರ ಬರಹಕ್ಕೆ ಗೌರವ ನೀಡಲಾಗಿದೆ.ಅರೆಯಡ ಪೊನ್ನು ಗಣಪತಿ ಹಾಗೂ ಅರೆಯಡ ಲಕ್ಷಿö್ಮ ಸುಬ್ಬವ್ವ ದಂಪತಿಯ ಪುತ್ರ ಅರೆಯಡ ಗಿರೀಶ್ ತಿಮ್ಮಯ್ಯ (58) ಅವರು ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಜೂನಿಯರ್ ಕಾಲೇಜ್ ನಲ್ಲಿ ಶಿಕ್ಷಣ ಪಡೆದರು. ಬೆಂಗಳೂರು ಸೇರಿದಂತೆ ವಿವಿಧೆಡೆ ಖಾಸಗಿ ಉದ್ಯೋಗ ನಿರ್ವಹಿಸಿದ ಅವರು ಕೃಷಿ ಕಾರ್ಯದಲ್ಲಿ ತಂದೆಗೆ ಸಹಕಾರಿಯಾಗಲೆಂದು ಯವಕಪಾಡಿ ಗ್ರಾಮಕ್ಕೆ ಮರಳಿದರು. ಅರೆಯಡ ಸವಿತಾ ತಿಮ್ಮಯ್ಯ (ತಾಮನೆ ಅಲ್ಲಾರಂಡ ನಾಲಡಿ ಗ್ರಾಮ) ಅವರನ್ನು ವಿವಾಹವಾದರು. ಪುತ್ರ ಅರೆಯಡ ಸಾವನ್ ಕೊಡವ ಪ್ರಸ್ತುತ ಬಿ.ಬಿ.ಎ ಶಿಕ್ಷಣ ಪಡೆಯುತ್ತಿದ್ದಾರೆ. ಅರೆಯಡ ಗಿರೀಶ್ ಅವರ ಮೊಬೈಲ್ ಸಂಖ್ಯೆ : 9740663111

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಚೇಲಾವರದಲ್ಲಿ ಕಾಳಿಂಗ ಸರ್ಪದ ರಕ್ಷಣೆ

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಕಡಗದಾಳಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಅಕ್ಟೋಬರ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.9 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ…

ಮಡಿಕೇರಿ ದಸರಾ ಮಹೋತ್ಸವ ಪ್ರಯುಕ್ತ ಒಂದು ದಿನದ ವಿಶೇಷ ಪ್ಯಾಕೇಜ್

ಅಕ್ಟೋಬರ್ 9, 2026

ಮಡಿಕೇರಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ : ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ಅಕ್ಟೋಬರ್ 9, 2026

ನಾಪೋಕ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರೂ.1.75 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ : ಶಾಸಕ ಎ.ಎಸ್.ಪೊನ್ನಣ್ಣರಿಂದ ಭೂಮಿಪೂಜೆ

ಅಕ್ಟೋಬರ್ 9, 2026

ಅ.10ರಂದು ವಿರಾಜಪೇಟೆ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಅಕ್ಟೋಬರ್ 9, 2026

ಕೊಡಗು : ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್

ಅಕ್ಟೋಬರ್ 9, 2026

ಸಿಜೆಪಿ ಪ್ರತಿಭಟನೆ ಹಿನ್ನೆಲೆ: ದೆಹಲಿಯಲ್ಲಿ ಹೈ ಅಲರ್ಟ್, 24 ಗಂಟೆ ಮೊಬೈಲ್ ಇಂಟರ್ನೆಟ್ ಸ್ಥಗಿತ; 57 ಮೆಟ್ರೋ ನಿಲ್ದಾಣಗಳ ಪ್ರವೇಶ–ನಿರ್ಗಮನ ದ್ವಾರ ಬಂದ್; 20 ವಲಯಗಳಾಗಿ ವಿಂಗಡಣೆ, 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ

ಅಕ್ಟೋಬರ್ 9, 2026

ಅ.11ರಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ

ಅಕ್ಟೋಬರ್ 9, 2026

ಕೊಡವ ತೋಕ್‌ಗೆ ಸಾಂವಿಧಾನಿಕ ರಕ್ಷಣೆ ನೀಡಲು ಆಗ್ರಹ: ಸಿಎನ್‌ಸಿ ಸತ್ಯಾಗ್ರಹ

ಅಕ್ಟೋಬರ್ 9, 2026

2027ರ SSLC, ದ್ವಿತೀಯ PUC ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಫೆಬ್ರವರಿ 27ರಿಂದ ಪಿಯುಸಿ, ಮಾರ್ಚ್ 22ರಿಂದ SSLC ಪರೀಕ್ಷೆ ಆರಂಭ

ಅಕ್ಟೋಬರ್ 9, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.