ಮಡಿಕೇರಿ, NEWS DESK ಏ.18 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇಂಗ್ಲಿಷ್ ವಿಭಾಗದ ಜಾಯ್ಸ್ ಲಿಟರರಿ ಕ್ಲಬ್ ವತಿಯಿಂದ, ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಪುಸ್ತಕಗಳನ್ನು ಮೀರಿ ನೈಜ ಪ್ರಪಂಚಕ್ಕಾಗಿ ಕೌಶಲ್ಯಗಳು ಎಂಬ ಎರಡು ದಿನಗಳ ಕೌಶಲ್ಯ ಕಾರ್ಯಾಗಾರವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯಿತು.
ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾದ ಚೋಂದಮ್ಮ, ಸಪ್ನ ಹಾಗೂ ಲಿಖಿತ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕರಾದ ಪೂಣಚ್ಚ ಕೆ.ಎಂ. ಅವರು ಸ್ವಾಗತ ಭಾಷಣ ಮಾಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ಜಾಯ್ಸ್ ಲಿಟರರಿ ಕ್ಲಬ್ ಅಧ್ಯಕ್ಷೆ ಪ್ರೊ. ನಯನ ಕಶ್ಯಪ್ ಅವರು ಪ್ರಾಸ್ತಾವಿಕ ನುಡಿಯಲ್ಲಿ “ವಿದ್ಯಾರ್ಥಿಗಳು ಪಾಠದ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.
ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಜೀವನ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.”
ಅತಿಥಿಯಾಗಿ ಭಾಗವಹಿಸಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರು ಮಾತನಾಡಿ, ‘ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು, ಅವರ ವ್ಯಕ್ತಿತ್ವ ವಿಕಾಸಕ್ಕೆ ಸಹಾಯ ಮಾಡುತ್ತವೆ ಎಂದು ಹೇಳಿದರು.’
ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರೊ.ಜೋಸೆಲಿನ್ ಟಿ.ಲೋಬೋ ಅವರು ‘ಎರಡು ದಿನಗಳ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತೆಗೆದು, ಅವರ ಸಾಮರ್ಥ್ಯವನ್ನು ಅರಿಯಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು’.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ ಅವರು ಪ್ರಭಾರ ಪ್ರಾಂಶುಪಾಲರಾಗಿ ಮಾತನಾಡಿ, “ಸಮಾಜದಲ್ಲಿ ಉದ್ಯೋಗಾವಕಾಶಗಳು ಇದ್ದರೂ ವಿದ್ಯಾರ್ಥಿಗಳಲ್ಲಿ ಅಗತ್ಯ ಕೌಶಲ್ಯಗಳ ಕೊರತೆ ಇರುವುದನ್ನು ಉಲ್ಲೇಖಿಸಿದರು”.
ಚಿಯಕಪೂವಂಡ ಸಚಿನ್ ಪೂವಯ್ಯ ಅವರಿಗೆ ಸನ್ಮಾನ ಮಾಡಲಾಯಿತು. ಎರಡು ದಿನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಕೌಶಲ್ಯದಾರಿತ ಮತ್ತು ಸೃಜನಾತ್ಮಕ ಚಟುವಟಿಕೆಗಳನ್ನು ಮಾಡಲಾಯಿತು .ಶನಿವಾರದಂದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ವಿಜಯಲತಾ, ಡಾ. ಸೌಮ್ಯ ಕೆ., ವಿನೀತಾ ದೇವಮ್ಮ, ಮೋನಿಕಾ,ಡಾ. ಭೈರವಿ, ರಮಾಲಕ್ಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ವರ್ಷದ ಬಿಎ ಇಂಗ್ಲಿಷ್ ವಿದ್ಯಾರ್ಥಿನಿಯರಾದ ವರ್ಷಾ ಟಿ. ವಿ. ಮತ್ತು ಅಮೃತಾ.ಆರ್ ನಿರ್ವಹಿಸಿದರು. ಕಾರ್ಯಕ್ರಮದ ಅಂತಿಮದಲ್ಲಿ ಜಾಯ್ಸ್ ಸಾಹಿತ್ಯ ಸಂಘದ ಕಾರ್ಯದರ್ಶಿ ಅಲೋಕ್ ಬಿಜೈ ಅವರು ವಂದನಾರ್ಪಣೆ ಮಾಡಿದರು.
ಒಟ್ಟಿನಲ್ಲಿ, ಈ ಕೌಶಲ್ಯ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಪಾಠ ಪುಸ್ತಕಗಳನ್ನು ಮೀರಿದ ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ಯಶಸ್ವಿಯಾಯಿತು.








