
ಮಡಿಕೇರಿ ಏ.21 NEWS DESK : ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಶ್ರೀ ಆಂಜನೇಯ ದೇವಾಲಯದ ವಾರ್ಷಿಕ ಪ್ರತಿಷ್ಠಾ ದಿನಾಚರಣೆ ಏ.26 ರಂದು ಜರುಗಲಿದೆ. ಶ್ರೀ ಆಂಜನೇಯ ದೇವಾಲಯದ ಆವರಣದಲ್ಲಿ ನೂತನವಾಗಿ ನವಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಕ್ಷೇತ್ರ ತಂತ್ರಿಗಳಾದ ಉಚ್ಚಿಲದ ವೇದಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆ ಜರುಗಲಿದೆ. ಏ.25 ರಂದು ಸಂಜೆ 6ರಿಂದ ಪ್ರಾರ್ಥನೆ, ಆಂಜನೇಯ ಗುಡಿಯಲ್ಲಿ ಪುಣ್ಯಾಹ, ಆರೂಢ ಪರಿಗ್ರಹ ಹಾಗೂ ನವಗ್ರಹ ಬಿಂಬ ಪರಿಗ್ರಹ, ಜಲಾಧಿವಾಸ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಲಿದೆ. ಏ.26 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರಿಂದ 11 ಗಂಟೆಗೆ ಆಂಜನೇಯ ದೇವಾಲಯದ ಆವರಣದಲ್ಲಿ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ನವಗ್ರಹ ಪ್ರತಿಷ್ಠಾಪನೆ, ಸಾನಿಧ್ಯ ಕಳಶ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









